Pink Moon: ಶನಿವಾರ ರಾತ್ರಿ ಆಕಾಶದಲ್ಲಿ ಒಂದು ವಿಶಿಷ್ಟ ವಿದ್ಯಮಾನ ಜರುಗಿದೆ. ನಿನ್ನೆ ಬಾನಂಗಳದಲ್ಲಿ ‘ಪಿಂಕ್ ಮೂನ್’ ಕಂಗೊಳಿಸಿದ್ದು, ಅಪರೂಪದ ಕ್ಷಣವನ್ನು ಕಂಡು ಜನರು ಪುಳಕಿತರಾದರು. ಇಂದೂ ಸಹ ಪಿಂಕ್ ಮೂನ್ ಕಂಡು ಬರಲಿದೆ.
Pink Moon: ಆಗಸದಲ್ಲಿ ಇಂದೂ ಸಹ ವಿಶೇಷ ಖಗೋಳ ವಿಸ್ಮಯ ಕಂಡುಬರಲಿದೆ. ಚೈತ್ರಮಾಸದ ಹುಣ್ಣಿಮೆ ಮತ್ತು ಹನುಮ ಜಯಂತಿಯಂದು ಈ ಅಪರೂಪದ ವಿಸ್ಮಯ ಸಂಭವಿಸಿತ್ತು. ಏಪ್ರಿಲ್ 12ರ ರಾತ್ರಿಯಿಂದ ಪಿಂಕ್ ಮೂನ್ ಗೋಚರಿಸಿದ್ದು, ಇಂದೂ ಕೂಡ ಕಾಣಬಹುದಾಗಿದೆ.

ಚಂದಿರ ಕೊಂಚ ಚಿಕ್ಕದಾಗಿ ಗೋಚರಿಸಲಿದ್ದಾನೆ. ಇದನ್ನು ‘ಮೈಕ್ರೋಮೂನ್’ ಎಂದೂ ಸಹ ಕರೆಯಲಾಗುತ್ತದೆ. ಚಂದ್ರನ ಬಣ್ಣ ಗುಲಾಬಿ ಬಣ್ಣದ್ದಾಗಿಲ್ಲದಿದ್ದರೂ, ತುಂಬಾ ಸುಂದರವಾಗಿ ಕಾಣಲಿದೆ. ಪಿಂಕ್ ಮೂನ್ ಎಂಬ ಹೆಸರು ವಸಂತಕಾಲದಲ್ಲಿ ಅರಳುವ ‘ಪಿಂಕ್ ಫ್ಲೋಕ್ಸ್’ ಹೂವುಗಳೊಂದಿಗೆ ಸಂಬಂಧ ಹೊಂದಿದೆ. ಸೂರ್ಯಾಸ್ತದ ಬಳಿಕ ಆಗಸದಲ್ಲಿ ಈ ವೈಶಿಷ್ಟ್ಯವನ್ನು ಕಣ್ತುಂಬಿಕೊಳ್ಳಬಹುದು.

ಪಿಂಕ್ ಮೂನ್ ವಿಶೇಷತೆ ಏನು?: ಪ್ರತಿ ವರ್ಷದಂತೆ ಈ ಬಾರಿಯೂ ಏಪ್ರಿಲ್ನಲ್ಲಿ ಆಕಾಶವು ಒಂದು ಸುಂದರವಾದ ಖಗೋಳ ಘಟನೆಗೆ ಸಾಕ್ಷಿಯಾಗಲಿದೆ. ಏಪ್ರಿಲ್ 12ರ ರಾತ್ರಿ ‘ಪಿಂಕ್ ಮೂನ್’ ಕಾಣಿಸಿಕೊಂಡಿದೆ. ಹೆಸರಿನಲ್ಲಿ ‘ಪಿಂಕ್’ ಇದೆ ಎಂದ ಮಾತ್ರಕ್ಕೆ ಚಂದ್ರ ಗುಲಾಬಿ ಬಣ್ಣದಲ್ಲಿ ಕಂಗೊಳಿಸುವುದಿಲ್ಲ. ಬದಲಾಗಿ ಇದೊಂದು ವಿಶೇಷ ಹುಣ್ಣಿಮೆಯ ರಾತ್ರಿಯಾಗಿದ್ದು, ಇದನ್ನು ವೈಜ್ಞಾನಿಕವಾಗಿ ‘ಮೈಕ್ರೋಮೂನ್’ ಎಂದು ಕರೆಯಲಾಗುತ್ತದೆ.
‘ಪಿಂಕ್ ಮೂನ್’ ಎಂದು ಕರೆಯುವುದೇಕೆ?: ‘ಪಿಂಕ್ ಮೂನ್’ ಎಂಬ ಹೆಸರು ಸ್ಥಳೀಯ ಅಮೆರಿಕನ್ ಸಂಪ್ರದಾಯಗಳಿಂದ ಹುಟ್ಟಿಕೊಂಡಿದೆ. ಏಪ್ರಿಲ್ ತಿಂಗಳಲ್ಲಿ ವಸಂತಕಾಲ ಪ್ರಾರಂಭವಾದಾಗ, ‘ಮಾಸ್ ಪಿಂಕ್’ ಅಥವಾ ‘ಫ್ಲೋಕ್ಸ್’ನಂತಹ ಕೆಲವು ವಿಶೇಷ ಹೂವುಗಳು ಅರಳುತ್ತವೆ. ಈ ಹೂವುಗಳ ಸೌಂದರ್ಯ ಬಿಂಬಿಸಲು, ಏಪ್ರಿಲ್ ತಿಂಗಳ ಹುಣ್ಣಿಮೆಯನ್ನು ‘ಪಿಂಕ್ ಮೂನ್’ ಎಂದು ಕರೆಯಲಾಗುತ್ತದೆ. ಈಸ್ಟರ್ ಭಾನುವಾರದ ದಿನಾಂಕವನ್ನು ನಿರ್ಧರಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುವುದರಿಂದ ‘ಪ್ಯಾಸ್ಕಲ್ ಮೂನ್’ ಅಂತಲೂ ಕರೆಯಲ್ಪಡುತ್ತದೆ.
‘ಮೈಕ್ರೋಮೂನ್’ ಎಂದರೇನು?: ಚಂದ್ರನು ಭೂಮಿಯಿಂದ ಅತ್ಯಂತ ದೂರದಲ್ಲಿದ್ದಾಗ (ಅಪೋಜಿ) ಮತ್ತು ಹುಣ್ಣಿಮೆ ಅದೇ ಸಮಯದಲ್ಲಿ ಬಂದಾಗ ಅದನ್ನು ‘ಮೈಕ್ರೋಮೂನ್’ ಎಂದು ಕರೆಯಲಾಗುತ್ತದೆ. ಈ ವೇಳೆ ಚಂದ್ರನು ಸಾಮಾನ್ಯ ಹುಣ್ಣಿಮೆಗಿಂತ ಸ್ವಲ್ಪ ಚಿಕ್ಕದಾಗಿ ಮತ್ತು ಕಡಿಮೆ ಪ್ರಕಾಶಮಾನವಾಗಿ ಕಾಣಿಸಿಕೊಳ್ಳುತ್ತಾನೆ.
ಇಂದು ಸಹ ಪಿಂಕ್ ಮೂನ್: ‘ಪಿಂಕ್ ಮೂನ್’ ಏಪ್ರಿಲ್ 12ರಂದು ರಾತ್ರಿ 8:22ರ ವೇಳೆಗೆ ಅತ್ಯಂತ ಉತ್ತುಂಗದಲ್ಲಿರಲಿದೆ. ಸೂರ್ಯಾಸ್ತದ ನಂತರ ನೋಡುವುದು ಉತ್ತಮ. ರಾತ್ರಿಯಿಡೀ ಆಕಾಶದಲ್ಲಿ ಕಂಗೊಳಿಸಲಿರುವ ಚಂದಿರ, ಮರುದಿನ ಅಂದ್ರೆ ಏಪ್ರಿಲ್ 13ರ ಬೆಳಗ್ಗೆ ಮತ್ತು ರಾತ್ರಿ ಚಂದ್ರ ಹುಣ್ಣಿಮೆಯಂತೆ ಪೂರ್ಣವಾಗಿ ಕಾಣಿಸಲಿದ್ದಾನೆ. ಹೀಗಾಗಿ, ಶನಿವಾರ ರಾತ್ರಿ ಈ ಕೌತುಕವನ್ನು ಮಿಸ್ ಮಾಡಿಕೊಂಡವರಿಗೆ ಇಂದೂ ಕೂಡ ಮತ್ತೊಂದು ಅವಕಾಶ ಸಿಗಲಿದೆ.
ಸ್ಪಷ್ಟ ನೋಟ ಗೋಚರಿಸುವುದೆಲ್ಲಿ?: ಈ ಅದ್ಭುತ ದೃಶ್ಯವನ್ನು ವೀಕ್ಷಿಸಲು ಮೈದಾನ, ಬೀಚ್, ಗುಡ್ಡಗಾಡು ಪ್ರದೇಶ ಅಥವಾ ಗ್ರಾಮೀಣ ಪ್ರದೇಶದಂತಹ ಕಡಿಮೆ ಬೆಳಕಿರುವ ಸ್ಥಳವನ್ನು ಆಯ್ದುಕೊಳ್ಳಬೇಕು. ನಗರ ಪ್ರದೇಶಗಳಲ್ಲಿ ವಾಸಿಸುವ ಜನರು ಪೂರ್ವ ದಿಕ್ಕಿನ ಮೇಲ್ಛಾವಣಿಯಿಂದ ಅಥವಾ ಎತ್ತರದ ಕಟ್ಟಡದಿಂದ ಚಂದ್ರನನ್ನು ಸುಲಭವಾಗಿ ನೋಡಬಹುದು.
ವಿಶೇಷತೆ ಏನು?: ಖಗೋಳ ಪ್ರಿಯರಿಗೆ ಮತ್ತೊಂದು ರೋಮಾಂಚನಕಾರಿ ವಿಷಯವೆಂದರೆ, ಮಧ್ಯ ಮತ್ತು ದಕ್ಷಿಣ ಅಮೆರಿಕದಲ್ಲಿ ಚಂದ್ರನು ಸ್ವಲ್ಪ ಸಮಯದವರೆಗೆ ಸ್ಪೈಕಾ ನಕ್ಷತ್ರವನ್ನು ಆವರಿಸುವುದನ್ನು ಕಾಣಬಹುದಾಗಿದೆ. ಈ ವಿದ್ಯಮಾನವನ್ನು ‘ನಿಗೂಢತೆ’ (Occultation) ಎಂದೂ ಕರೆಯಲಾಗುತ್ತದೆ.
Source: ETV Bharat
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1