ಡಿ.28,29 ರಂದು ರಾಜ್ಯ ಮಟ್ಟದ 4ನೇ ವೈಜ್ಞಾನಿಕ ಸಮ್ಮೇಳನದುರ್ಗದ ಡಾ.ಪಾಲಾಕ್ಷ, ಸುಧಾ, ಶೋಭಾ ರವರಿಗೆ ಪ್ರಶಸ್ತಿ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಡಿ.23 ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ದೊಡ್ಡಬಳ್ಳಾಪುರ-ಬೆಂಗಳೂರು ಉತ್ತರ ಶೈಕ್ಷಣಿಕ ಜಿಲ್ಲೆ. ಕರ್ನಾಟಕ ರಾಜ್ಯ ಶಾಲಾ ಕಾಲೇಜುಗಳ ಒಕ್ಕೂಟ, ಕರ್ನಾಟಕ ರಾಜ್ಯ ಮಾನವ ಬಂಧುತ್ವ ವೇದಿಕೆ ಹಾಗೂ ಕರ್ನಾಟಕ ಸರ್ಕಾರದ ಮಾಹಿತಿ ಮತ್ತು
ತಂತ್ರಜ್ಞಾನ ಇಲಾಖೆ ಇವುಗಳ ಸಹಯೋಗದೊಂದಿಗೆ ಇದೇ ವಾರ ಡಿ.28 ಮತ್ತು 29ರಂದು 2 ದಿನಗಳ ಕಾಲ ಬಾಗಲೂರಿನ ವಿ.ಜೆ
ಇಂಟರ್ ನ್ಯಾಷನಲ್ ಶಾಲಾ ಮೈದಾನದಲ್ಲಿ ರಾಜ್ಯ ಮಟ್ಟದ 4ನೇ ವೈಜ್ಞಾನಿಕ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು
ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ್ ಸಂಗಂ ತಿಳಿಸಿದ್ದಾರೆ.

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾಡಿನ ಹಿರಿಯ ರಂಗಭೂಮಿ ಕಲಾವಿದೆ,
ಚಿತ್ರನಟಿ ಹಾಗೂ ವಿಧಾನಪರಿಷತ್ ಸದಸ್ಯೆ ಉಮಾಶ್ರೀಯವರ ಸರ್ವಾಧ್ಯಕ್ಷತೆಯಲ್ಲಿ ಸಮ್ಮೇಳನ. ನಡೆಯಲಿದೆ. ಈ ಸಮ್ಮೇಳನದಲ್ಲಿ
ವಿವಿಧ ವಿಜ್ಞಾನ ವಸ್ತು ಪ್ರದರ್ಶನ, ವೈವಿದ್ಯಮಯವಾದ ಆಹಾರ, ಕರಕುಶಲ ಮೇಳ ಹಾಗೂ ಆಕರ್ಷಕ ಸಾಂಸ್ಕೃತಿಕ
ಕಾರ್ಯಕ್ರಮಗಳು ನಡೆಯಲಿವೆಯಲ್ಲದೇ, ಪ್ರಮುಖ ವೈಜ್ಞಾನಿಕ ವಿಷಯಗಳ ಮೇಲೆ ಬೆಳಕು ಚೆಲ್ಲಲಾಗುತ್ತದೆ ಎಂದರು.

ಪರಿಷತ್ತು ಆರಂಭವಾಗಿ 4 ವರ್ಷಗಳನ್ನು ಯಶಸ್ವಿಯಾಗಿ ಕಳೆದಿದ್ದು, ಜಸ್ಟೀಸ್ ನಾಗಮೋಹನ್ ದಾಸ್, ಇಸ್ರೋದ ಮಾಜಿ ಅಧ್ಯಕ್ಷರು
ಹಾಗೂ ವಿಜ್ಞಾನಿ ಡಾ.ಕಿವಿ, ಎಸ್.ಕಿರಣ್ ಕುಮಾರ್ ಮತ್ತು ಅನೇಕ ಗಣ್ಯ ಚಿಂತಕರ ಮಾರ್ಗದರ್ಶನದಲ್ಲಿ ರಾಜ್ಯ ಮಟ್ಟದಲ್ಲಿ ಅನೇಕ
ಕಾರ್ಯಕ್ರಮಗಳನ್ನು ನಡೆಸುತ್ತಾ ಬರಲಾಗಿದೆ ಚಿತ್ರದುರ್ಗ ಜಿಲ್ಲಾ ಘಟಕದಿಂದ ಪ್ರತಿ ವರ್ಷವು ಜಿಲ್ಲಾ ಮಟ್ಟದಲ್ಲಿ ವೈಜ್ಞಾನಿಕ
ಸಮ್ಮೇಳನ ಮತ್ತು ಅತಿ ಹೆಚ್ಚು ಅಂಕಗಳಿಸಿದ ಎಸ್. ಎಸ್. ಎಲ್. ಸಿ. ಮತ್ತು ಪಿ.ಯು.ಸಿ. ದ್ವಿತಿಯ ವರ್ಷದಲ್ಲಿ ಶೇ.90ಕ್ಕೂ ಹೆಚ್ಚು
ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳನ್ನು ನಡೆಸುತ್ತಾ ಬರಲಾಗಿದೆ. ಅಲ್ಲದೆ ಪ್ರತಿ
ತಿಂಗಳು ವಿಜ್ಞಾನದ ನಡಿಗೆ- ಶಾಲೆಯ ಕಡೆಗೆ’ ಎಂಬ ಘೋಷಾ ವಾಕ್ಯದೊಂದಿಗೆ, ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಮೂಡಿಸುವ
ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.

ಪ್ರತಿ ವರ್ಷ ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನ ಕಾಯಕರತ್ನ ಪ್ರಶಸ್ತಿ, ಹೆಚ್.ಎನ್.ಪ್ರಶಸ್ತಿ, ಜೀವಮಾನ ಶೇ. ಸಾಧನಾ ಪ್ರಶಸ್ತಿ
ಪ್ರದಾನ, ನಾಯಕತ್ವ ಶಿಬಿರ, ಸ್ಮರಣ ಸಂಚಿ ವಿಜ್ಞಾನ ಸಿರಿ ಮಾಸ ಪತ್ರಿಕೆ ಹೀಗೆ ಅನೇಕ ಕಾರ್ಯಕ್ರಮಗಳ ಪರಿಷತ್ತು ನಡೆಸುತ್ತ
ಬಂದಿದೆ ರಾಜ್ಯದ ಪ್ರತಿ ಜಿಲ್ಲೆಗೆ ಒಬ್ಬರಂತೆ 37 ಜನರಿಗೆ ಈ ಮಟ್ಟದಲ್ಲಿ ಹೆಚ್.ಎನ್. ಪ್ರಶಸ್ತಿಯನ್ನು ನೀಡಲಾಗುವುದು ಪ್ರಥಮ
ವೈಜ್ಞಾನಿಕ ಸಮ್ಮೇಳನವನ್ನು ಇಸ್ರೋದ ಅಧ್ಯಕ್ಷರು ಹಾಗೂ ವಿಜ್ಞಾನಿ ಡಾ|ಎ.ಎಸ್.ಕಿರಣ್ ಕುಮಾರ್ ಅವರು ಸರ್ವಾಧ್ಯಕ್ಷತೆಯಲ್ಲಿ
ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿತ್ತು ಎರಡನೇ ಸಮ್ಮೇಳನವನ್ನು ಜಸ್ಟೀಸ್ ನಾಗಮೋಹನ್ ದಾಸ್ ಅವರ

ಸರ್ವಾಧ್ಯಕ್ಷತೆಯಲ್ಲಿ ತುಮಕೂರಿನಲ್ಲಿ ನಡೆಸಲಾಗಿತ್ತು. ಮತ್ತು ಮೂರನೇ ಸಮ್ಮೇಳನವನ್ನು ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ
ಸತೀಶ್ ಜಾರಕಿಹೊಳಿಯವರ ಸರ್ವಾಧ್ಯಕ್ಷತೆಯಲ್ಲಿ ನಡೆಯಿತು.

ನಾಲ್ಕನೇ ವೈಜ್ಞಾನಿಕ ಸಮ್ಮೇಳನದಲ್ಲಿ ಚಿತ್ರದುರ್ಗದ ಬಸವೇಶ್ವರ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಮೆಡಿಕಲ್ ಸೂಪರಿಡೆಂಟ್
ಮತ್ತು ಪ್ರೊಫೆಸರ್ ಆದ ಡಾ.ಎಲ್.ಪಾಲಕ್ಷಯ್ಯರವರಿಗೆ ರಾಜ್ಯ ಮಟ್ಟದ ಹೆಚ್. ಎನ್. ಪ್ರಶಸ್ತಿ ಲಭಿಸಿದೆ ಮತ್ತು ಈ ವರ್ಷ ವಿಶೇಷವಾಗಿ
ರಾಜ್ಯ ಮಟ್ಟದಲ್ಲಿ ಮಹಿಳೆಯರಿಗಾಗಿ ನೀಡುತ್ತಿರುವ ಚೈತನ್ಯಶ್ರೀ ಪಶಸ್ತಿಗೆ ತಾಲ್ಲೂಕಿನ ಸಿಬಾರದ ವಿಶ್ವಮಾನವ ಶಾಲೆಯ
ಪ್ರಾಂಶುಪಾಲರಾದ ಗ್ರಾಮೀಣ ಮಕ್ಕಳಿಗೆ ವಿಜ್ಞಾನದ ಬಗ್ಗೆ ಆಸಕ್ತಿಯನ್ನು ಮೂಡಿಸಿ ಹೆಚ್ಚಿನ ವಿದ್ಯಾರ್ಥಿಗಳು ವಿಜ್ಞಾನ ವಿಷಯದಲ್ಲಿ
ಉನ್ನತ ವ್ಯಾಸಾಂಗಕ್ಕೆ ಪ್ರೋತ್ಸಾಹಿಸಿರುವ ಶ್ರೀಮತಿ ಸುಧಾ ಹೆಚ್.ಆರ್ ಹಾಗೂ ಶೋಭಾ ಮಲ್ಲಿಕಾರ್ಜನ್ ಆಯ್ಕೆಯಾಗಿದ್ದಾರೆ
ಎಂದರು.

ಸಮ್ಮೇಳನವನ್ನು ಉದ್ಘಾಟಿಸಲು ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಆಹ್ವಾನ ನೀಡಲಾಗಿದೆ. ಕೇಂದ್ರ ಹಾಗೂ
ರಾಜ್ಯದ ಸಚಿವರುಗಳು, ಸಂಸದರು, ಶಾಸಕರು. ವಿಧಾನಪರಿಷತ್ ಸದಸ್ಯರು. ಸ್ಥಳೀಯ ಜನಪ್ರತಿನಿಧಿಗಳು, ವಿಜ್ಞಾನಿಗಳು,
ಸಾಮಾಜಿಕ ಚಿಂತಕರು, ವಿದ್ಯಾರ್ಥಿಗಳು, ಉಪನ್ಯಾಸಕರು, ಶಿಕ್ಷಕರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಸಮ್ಮೇಳನದಲ್ಲಿ
ಭಾಗವಹಿಸುವವರಿಗೆ ಊಟ ಉಪಹಾರ ವ್ಯವಸ್ಥೆಯನ್ನು ಮಾಡಲಾಗಿದೆ ಹಾಗೂ ಹೊರಗಿನಿಂದ ಬರುವವರಿಗೆ ವಸತಿ ವ್ಯವಸ್ಥೆಯನ್ನು
ಕಲಿಸಲಾಗುವುದು ಎಂದು ತಿಳಿಸಿದರು.

ಈ ಸಮ್ಮೇಳನದಲ್ಲಿ ವಿಶೇಷವಾಗಿ ರಾಜ್ಯ ಸರ್ಕಾರಕ್ಕೆ ಕರ್ನಾಟಕ ರಾಜ್ಯ ವೈಜ್ಞಾನ ಸಂಶೋಧನಾ ಪರಿಷತ್ತಿನಿಂದ ವಿವಿಧ ಈ
ಹಕ್ಕೊತ್ತಾಯಗಳನ್ನು ಮಂಡಿಸಲಾಗುವುದು. ಈ ಡಿ.29 ವಿಶ್ವಕವಿ ಕುವೆಂಪು ಜನ್ಮದಿನದಂದು ಅ ವೈಜ್ಞಾನಿಕ ದಿನಾಚರಣೆಯನ್ನಾಗಿ
ಆಚರಿಸಬೇಕು. ರಾಜ್ಯ ವಿಜ್ಞಾನ ಅಕಾಡೆಮಿಗೆ ಡಾ| ಹುಲಿಕಲ್ ನಟರಾಜ್‍ರನ್ನು ನೇಮಿಸಬೇಕು. ಪ್ರತಿ ಜಿಲ್ಲಾ ” ಹಾಗೂ ತಾಲ್ಲೂಕು
ಕೇಂದ್ರಗಳಲ್ಲಿ ವಿಜ್ಞಾನ – ಕೇಂದ್ರಗಳ ಸ್ಥಾಪನೆ, ಪರಿಷತ್ತು ಪ್ರತಿವರ್ಷ ನಡೆಸುವ ರಾಜ್ಯ ಮಟ್ಟದ ವೈಜ್ಞಾನ ಸಮ್ಮೇಳನಕ್ಕೆ ಅನುದಾನ,
ರಾಜ್ಯದ ಎಲ್ಲಾ ಕಾಲಾ ಕಾಲೇಜುಗಳಲ್ಲಿ ವಿಜ್ಞಾನ ಪ್ರಯೋಗಾಲಯಗಳ ಸ್ಥಾಪನೆ, ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ವಿಜ್ಞಾನ ಸಮಿತಿಗಳ
ರಚನೆ ಮತ್ತಿತರೆ ಬೇಡಿಕೆಗಳ ಬಗ್ಗೆ ಸಮ್ಮೇಳನದಲ್ಲಿ ಮಂಡಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಲೋಕೇಶ್, ಡಾ.ಮೋಹನ್, ಡಾ.ಕೃಷ್ಣಪ್ಪ, ಸುರೇಶ್, ಎನ್.ದೂಡ್ಡಪ್ಪ, ಡಾ.ತಿಪ್ಪೇಸ್ವಾಮಿ,
ವಿ.ಚನ್ನಬಸಪ್ಪ, ದೇವಕಿ ರುದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *