ಚಿತ್ರದುರ್ಗ ಜು. 3
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಸಿರಿಗೆರೆ ಯೋಜನಾ ಕಛೇರಿ, ಚಿತ್ರದುರ್ಗ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಸಿರಿಗೆರೆ ಯೋಜನಾ ಕಛೇರಿ ವತಿಯಿಂದ 2025-26 ನೇ ಸಾಲಿನ 6.0 ಓಲಂಪಿಯಾಡ್ ಪರೀಕ್ಷೆ 3 ರಿಂದ 12 ನೇ ತರಗತಿಯ ಮಕ್ಕಳಿಗೆ ಪರೀಕ್ಷೆ ಬರೆಸಿದ್ದು, ಶೇ.70% ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಸಿರಿಗೆರೆ ಯೋಜನಾ ಕಛೇರಿ ವತಿಯಿಂದ ವಿತರಿಸಲಾಯಿತು.
ಪ್ರಾದೇಶಿಕ ಕಛೇರಿಯ ಸಿ.ಎಸ್.ಸಿ. ಯೋಜನಾಧಿಕಾರಿಗಳಾದ ವಿಶ್ವೇಶ್ರವರು ಓಲಂಪಿಯಾಡ್ ಪರೀಕ್ಷೆ ನೊಂದಾವಣೆ ಮಾಡುವುದರ ಬಗ್ಗೆ ಮತ್ತು ಔಟಿಟiಟಿe exಚಿm ಬರೆಸುವುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಚಿತ್ರದುರ್ಗ ಜಿಲ್ಲಾ ನಿರ್ದೇಶಕರಾದ ಕಮಲಾಕ್ಷ ರವರು ವಿದ್ಯಾರ್ಥಿಗಳಿಗೆ ಓಲಂಪಿಯಾಡ್ 6.0 ಪ್ರಮಾಣ ಪತ್ರ ವಿತರಣೆ ಮಾಡಿದರು.
ಈ ಸಂದರ್ಭ ಪ್ರಾದೇಶಿಕ ಕಛೇರಿಯ ಯೋಜನಾಧಿಕಾರಿ ಸುರೇಂದ್ರ, ಬಿ.ಸಿ, ಸಿರಿಗೆರೆ ಯೋಜನಾ ಕಛೇರಿಯ ಕ್ಷೇತ್ರ ಯೋಜನಾಧಿಕಾರಿ ರಘುಪತಿ ಜಿ, ಹಣಕಾಸು ಪ್ರಬಂಧಕ ರವಿ .ಟಿ, ತಾಲೂಕು ನೋಡೆಲ್ ಅಧಿಕಾರಿ, ಹಾಲೇಶ್ ಎಂ. ಆರ್. ಯೋಜನಾ ಕಚೇರಿ ಹಾಗೂ ಸಿ.ಎಸ್.ಸಿ. ಸೇವಾದಾರರು, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.
Follow the ಸಮಗ್ರ ಸುದ್ದಿ Telegram Channel: https://t.me/SamagraSuddi
ಸಮಗ್ರ ಸುದ್ದಿ channel on WhatsApp: