ಚಿತ್ರದುರ್ಗ ನ. 27
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಕಾನೂನುನನ್ನು ಗೌರವಿಸುವುದು ಎಲ್ಲರ ಕರ್ತವ್ಯವಾಗಿದೆ, ಯಾವುದೇ ಸಮಯದಲ್ಲಿ ಕಾನೂನು ಮೀರಬಾರದು, ಅದಕ್ಕೆ ಗೌರವವನ್ನು ನೀಡಬೇಕಿದೆ. ಇದರಿಂದ ಅದನ್ನು ಪಾಲಿಸುವವರಿಗೆ ಹಾಗೂ ಅದನ್ನು ರಕ್ಷಣೆ ಮಾಡುವವರಿಗೂ ಗೌರವಿಸಿದ್ದಂತೆ ಆಗುತ್ತದೆ ಎಂದು ಸಾವಯವ ಕೃಷಿ ಉನ್ನತ ಮಟ್ಟದ ಸಮಿತಿಯ ಮಾಜಿ ಅಧ್ಯಕ್ಷರಾದ ಬಿ.ಸೋಮಶೇಖರ್ ತಿಳಿಸಿದರು.

ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಗರದ ಸಂತೇಪೇಟೆ ವೃತ್ತದಲ್ಲಿ ಪೆಟ್ರೋಲ್ ಸುರಿದುಕೊಂಡು ಕ್ಷಲಕ ಕಾರಣಕ್ಕೆ ಪೋಲಿಸರಿಗೆ ಹೆದರಿಸಲು ಯತ್ನಿಸಿ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಿವೃತ್ತ ಯೋಧ ಶೇ70 ರಿಂದ 80 ರಷ್ಟು ಗಾಯವಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ, ವಾಹನವನ್ನು ಚಲಾವಣೆ ಮಾಡುವವರು ಸಂಚಾರಿ ನಿಯಮಗಳನ್ನು ಪಾಲನೆ ಮಾಡಬೇಕಿದೆ ಇದೇ ರೀತಿ ಕಾನೂನು ರಕ್ಷಣೆ ಮಾಡುವವರು ಸಹಾ ಸರಿಯಾದ ರೀತಿಯಲ್ಲಿ ಪಾಲನೆಯನ್ನು ಮಾಡಬೇಕಿದೆ ಅಂದು ಪೋಲಿಸರು ಮತ್ತು ಆಟೋ ಚಾಲಕರು ಸ್ವಲ್ಪ ಸಮಯದಿಂದ ಇದ್ದಿದ್ದರೆ ಈ ರೀತಿಯಾದ ಅನಾಹುತ ಆಗುತ್ತಿರಲಿಲ್ಲ, ಅದರೆ ಇಲ್ಲಿ ಇಬ್ಬರು ಸಹಾ ಮಾತಿನ ಚಕಮಕಿಯನ್ನು ನಡೆಸಿದ್ದರಿಂದ ಆಟೋ ಚಾಲಕ ಅವರನ್ನು ಹೆದರಿಸಲು ಬೆಂಕಿಯನ್ನು ಹಚ್ಚಿಕೊಂಡಾಗ ಅಕ್ಕ-ಪಕ್ಕದಲ್ಲಿದ್ದವರು ಬೆಂಕಿಯನ್ನು ಹಾರಿಸಿದ್ದಾರೆ ಆದರೆ ಈ ಸಮಯಕ್ಕೆ ದೇಹದ 70 ರಿಂದ 80 ರಷ್ಟು ಭಾಗದಲ್ಲಿ ಗಾಯವಾಗಿತ್ತು ಎಂದರು.
ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ ಅದನ್ನು ಪಾಲಿಸುವುದು ನಮ್ಮೆಲ್ಲ ಕರ್ತವ್ಯವಾಗಿದೆ, ಸರಿಯಾದ ರೀತಿಯಲ್ಲಿ ಪಾಲಿಸಿದರೆ ಎಲ್ಲರಿಗೂ ಒಳ್ಳೇಯದು ಎಂದ ಅವರು ಈ ಬಗ್ಗೆ ಇಂದು ಅವರ ನಿವಾಸಕ್ಕೆ ಭೇಟಿಯನ್ನು ಮಾಡಿ ಅವರ ಪತ್ನಿಯವರಿಗೆ ಸಾತ್ವಾಂನ ಹೇಳಿ ಬರಲಾಗಿದೆ ಇಬ್ಬರು ಚಿಕ್ಕ ಮಕ್ಕಳಿದ್ಧಾರೆ, ಅವರ ಭವಿಷ್ಯವನ್ನು ಸಹಾ ನೋಡಬೇಕಿದೆ. ಈ ಹಿನ್ನಲೆಯಲ್ಲಿ ಚಿತ್ರದುರ್ಗದ ಮೆಡಿಕಲ್ ಕಾಲೇಜಿನಲ್ಲಿ ಏನಾದರೂ ಕೆಲಸವನ್ನು ನೀಡುವಂತೆ ಸಂಬಂಧಪಟ್ಟ ಡೀನ್ ರವರ ಬಳಿ ಮಾತನಾಡಿದ್ದೇನೆ ಅವರು ಸಹಾ ಕೆಲಸವನ್ನು ನೀಡಲು ಸಮ್ಮತಿಸಿದ್ದಾರೆ ಎಂದರು.
ರಾಜ್ಯದ ರಾಜಕೀಯದ ಬಗ್ಗೆ ಮಾತನಾಡಿ ಸಿ.ಎಂ.ಬದಲಾವಣೆಯ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ, ಅದು ಏನಿದ್ದರೂ ಪಕ್ಷ ಹೈಕಮಾಂಡಿಗೆ ಬಿಟ್ಟ ವಿಷಯವಾಗಿದೆ ನಾನು 2021ರಲ್ಲಿ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಸ್ಪರ್ದೆ ಮಾಡಿದ್ದೆ ಮತದಾರರು ಸಹಾ ನಮಗೆ ಮತವನ್ನು ನೀಡಿದ್ದರು ಅದರೆ ಸ್ವಲ್ಪದಲ್ಲಿ ಸೋಲಾಯಿತು ಅದರೂ ಸಹಾ ಎದೆಗುಂದದೆ ಮುಂಬರುವ ಸ್ಥಳಿಯ ಸಂಸ್ಥೆಗಳ ಚುನಾವಣೆಗೆ ಈಗಿನಿಂದಲೇ ತಯಾರಿಯನ್ನು ನಡೆಸಲಾಗುತ್ತಿದೆ ಪಕ್ಷದ ವರಿಷ್ಟರು ಸಹಾ ನನಗೆ ಟೀಕೇಟ್ ನೀಡುವ ಬಗ್ಗೆ ವಿಶ್ವಾಸ ಇದೆ ಇನ್ನೂ ಕಾಲಾವಕಾಶ ಇದ್ದರೂ ಸಹಾ ಮತದಾರರನ್ನು ಬೇಟಿ ಮಾಡಿ ಅವರ ಕಷ್ಟಗಳನ್ನು ಕೇಳಿ ಪರಿಹಾರಕ್ಕೆ ಮುಂದಾಗಿದ್ದೇನೆ ಎಂದರು.
ಗೋಷ್ಟಿಯಲ್ಲಿ ಕುರುಭ ಸಂಘದ ಕಾರ್ಯಾಧ್ಯಕ್ಷರಾದ ಹೆಚ್.ಮಂಜಪ್ಪ, ಅಧ್ಯಕ್ಷರಾದ ಶ್ರೀರಾಮ್, ಕಾರ್ಯದರ್ಶಿ ಬಿ.ಟಿ.ಜಗದೀಶ್ ಖಂಜಾಚಿ ಮೃತುಂಜಯ ಭಾಗವಹಿಸಿದ್ದರು.
Views: 19