
ನವದೆಹಲಿ: ನಿಖರ ಭವಿಷ್ಯಕ್ಕೆ ಹೆಸರುವಾಸಿಯಾಗಿರುವ ಬಲ್ಗೇರಿಯಾದ ಬಾಬಾ ವಂಗಾ ಹೇಳಿರುವ ಹಲವಾರು ಭವಿಷ್ಯಗಳು ನಿಜವಾಗಿದೆ. ಈ ಪೈಕಿ ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ನಡೆದ 9/11 ದಾಳಿ, ಚರ್ನೋಬಿಲ್ ದುರಂತ, ಬ್ರೆಕ್ಸಿಟ್, ಬ್ರಿಟನ್ ಮಹಾರಾಣಿ ಡಯಾನಾ ಸಾವು ಸೇರಿದಂತೆ ಹಲವು ಜಾಗತಿಕ ವಿದ್ಯಮಾನಗಳು ಸಹ ಸೇರಿವೆ.
2023ರಲ್ಲಿಯೂ ಬಾಬಾ ವಂಗಾ ಹೇಳಿದ ಕೆಲವು ವಿಚಾರಗಳು ನಿಜವಾಗಿದೆ ಅಂತಾ ಅನೇಕರು ಹೇಳಿದ್ದಾರೆ. ವಂಗಾ ತಾವು ಬದುಕಿದ್ದಾಗ ನೂರಾರು ವರ್ಷಗಳ ಭವಿಷ್ಯವನ್ನು ಗ್ರಹಿಸಿದ್ದರಂತೆ.
1996ರಲ್ಲಿ ವಂಗಾ ನಿಧನರಾಗಿದ್ದು, ತಮ್ಮ ಮರಣಕ್ಕೂ ಮುನ್ನವೇ 5,079ವರೆಗೂ ಅವರು ವಿಶ್ವದ ಭವಿಷ್ಯವನ್ನು ಊಹೆ ಮಾಡಿದ್ದರು ಎಂದು ಹೇಳಲಾಗಿದೆ. ಇದುವರೆಗೂ ಅವರು ಹೇಳಿದ ಅನೇಕ ಭವಿಷ್ಯವಾಣಿಗಳು ನಿಜವಾಗಿವೆ. ಸದ್ಯ ವಂಗಾ 2024ರ ವರ್ಷದ ಬಗ್ಗೆ ನುಡಿದಿರುವ ಭವಿಷ್ಯಗಳ ಬಗ್ಗೆ ಚರ್ಚೆ ಶುರುವಾಗಿದೆ. ಹೊಸ ವರ್ಷದಲ್ಲಿ ಏನೆಲ್ಲಾ ನಡೆಯಲಿದೆ ಅಂತಾ ಅವರು ಭವಿಷ್ಯ ನುಡಿದ್ದಾರೆ.
2024ರ ಬಗ್ಗೆ ವಂಗಾ ನುಡಿದಿರುವ 5 ಪ್ರಮುಖ ಭವಿಷ್ಯಗಳು
- ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹತ್ಯೆಗೆ ಕೆಲವು ರಷ್ಯಾ ಪ್ರಜೆಗಳೇ ಯತ್ನಿಸಲಿದ್ದಾರೆ. ವಿಶ್ವದ ಬಲಿಷ್ಠ ನಾಯಕನ ಹತ್ಯೆಯೂ ನಡೆಯಬಹುದು ಅಂತಾ ವಂಗಾ ಭವಿಷ್ಯ ನುಡಿದಿದ್ದಾರೆ.
- 2024ರಲ್ಲಿ ಯುರೋಪ್ ಸೇರಿದಂತೆ ಹಲವು ದೊಡ್ಡ ದೇಶಗಳಲ್ಲಿ ಭಯೋತ್ಪಾದಕ ದಾಳಿಗಳು ಹೆಚ್ಚಳ ಆಗಲಿದೆಯಂತೆ. ಉಗ್ರರು ಜೈವಿಕ ಅಸ್ತ್ರಗಳನ್ನು ಪ್ರಯೋಗ ಮಾಡಲಿದ್ದಾರೆ. ಇದರಿಂದ ಇಡೀ ದೇಶಕ್ಕೆ ದೊಡ್ಡ ಸಂಕಷ್ಟ ಎದುರಾಗಲಿದೆ ಅಂಗಾ ವಂಗಾ ಭವಿಷ್ಯ ನುಡಿದಿದ್ದಾರೆ.
- 2024ರಲ್ಲಿ ಜಾಗತಿಕವಾಗಿ ಆರ್ಥಿಕ ಸಂಕಷ್ಟ ಎದುರಾಗಲಿದೆ. ಸಾಲದ ಪ್ರಮಾಣ ಏರಿಕೆ ಆಗಲಿದೆ. ಜಾಗತಿಕ ರಾಜಕಾರಣ ಇದೇ ಕಾರಣಕ್ಕೆ ಒತ್ತಡಕ್ಕೆ ಸಿಲುಕಲಿದೆ. ಇದರಿಂದ ಶ್ರೀಮಂತ ರಾಷ್ಟ್ರಗಳು ಸಹ ಸಂಕಷ್ಟಕ್ಕೆ ಸಿಲುಕಲಿದ್ದು, ಬಡರಾಷ್ಟ್ರಗಳು ಮತ್ತಷ್ಟು ಭೀಕರ ಬಡತನಕ್ಕೆ ಗುರಿಯಾಗಲಿವೆ ಎಂದು ಹೇಳಲಾಗಿದೆ.
- 2024ರಲ್ಲಿ ಅನೇಕ ಪ್ರಾಕೃತಿಕ ದುರಂತಗಳು ಸಂಭವಿಸುವ ಸಾಧ್ಯತೆಗಳಿವೆ. ಹವಾಮಾನ ವೈಪರಿತ್ಯಗಳು ಸಹ ಎದುರಾಗಲಿದೆ. ಇದರಿಂದ ಇಡೀ ಪ್ರಪಂಚವೇ ದೊಡ್ಡ ಸಂಕಷ್ಟಕ್ಕೆ ಗುರಿಯಾಗಲಿದೆಯಂತೆ.
- ಭಾರತ ಸೇರಿದಂತೆ ಇಡೀ ಪ್ರಪಂಚದಲ್ಲಿ ಸೈಬರ್ ಕ್ರೈಂ ಪ್ರಮಾಣ ಹೆಚ್ಚಳವಾಗಲಿದೆ. ಹ್ಯಾಕರ್‌ಗಳು ಸೈಬರ್ ದಾಳಿ ನಡೆಸಲಿದ್ದಾರೆ. ವಿದ್ಯುತ್ ಗ್ರಿಡ್‌ಗಳು, ಜಲ ಸಂಸ್ಕರಣಾ ಘಟಕಗಳು ಹಾಗೂ ರಾಷ್ಟ್ರೀಯ ಭದ್ರತೆಗೆ ಇದರಿಂದ ಧಕ್ಕೆ ಎದುರಾಗಲಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1