The Hundred: ಮಾರಾಟವಾಗದೆ ಉಳಿದ ಬಾಬರ್, ರಿಜ್ವಾನ್, ಪೊಲಾರ್ಡ್, ರಸೆಲ್..!

ದಿ ಹಂಡ್ರೆಡ್ ಟಿ20 ಲೀಗ್​ನ ಮೂರನೇ ಸೀಸನ್‌ ಆರಂಭಕ್ಕೆ ಎಲ್ಲ ರೀತಿಯ ತಯಾರಿ ಆರಂಭವಾಗಿದೆ. ಆಗಸ್ಟ್ 1ರಿಂದ ಆರಂಭವಾಗಲಿರುವ ಈ ಲೀಗ್‌ಗಾಗಿ ಹರಾಜು ಪ್ರಕ್ರಿಯೆ ಈಗಾಗಲೇ ನಡೆದಿದ್ದು, ಎಲ್ಲಾ ಎಂಟು ತಂಡಗಳು ತಮಗೆ ಬೇಕಾದ ಆಟಗಾರನಿಗಾಗಿ ಸಾಕಷ್ಟು ಹಣ ನೀಡಿ ಖರೀದಿಸಿವೆ. ಆದರೆ ಈ ಹರಾಜಿನಲ್ಲಿ ಅನೇಕ ಸ್ಟಾರ್ ಆಟಗಾರರು ಮಾರಾಟವಾಗದೆ ಉಳಿದಿದ್ದು, ಕ್ರಿಕೆಟ್ ಲೋಕದಲ್ಲಿ ಅಚ್ಚರಿ ಮೂಡಿಸಿದೆ.ಅಚ್ಚರಿಯೆಂದರೆ ಎಂಟು ತಂಡಗಳ ಪೈಕಿ ಯಾವ ತಂಡವೂ ಪಾಕಿಸ್ತಾನದ ನಾಯಕ ಬಾಬರ್ ಆಜಮ್ ಮತ್ತು ಸ್ಟಾರ್ ಬ್ಯಾಟ್ಸ್ ಮನ್ ಮೊಹಮ್ಮದ್ ರಿಜ್ವಾನ್ ಅವರನ್ನು ಖರೀದಿಸಿಲ್ಲ. ಈ ಇಬ್ಬರ ಹೊರತಾಗಿ ವೆಸ್ಟ್ ಇಂಡೀಸ್‌ನ ಕೀರಾನ್ ಪೊಲಾರ್ಡ್ ಮತ್ತು ಆಂಡ್ರೆ ರಸೆಲ್ ಸಹ ಮಾರಾಟವಾಗಲಿಲ್ಲ. ಇದರಲ್ಲಿ ಬಾಬರ್ ಮಾರಾಟವಾಗದೆ ಉಳಿದಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಟಿ20 ಮಾದರಿಯಲ್ಲಿ ಬಾಬರ್ ಅವರ ದಾಖಲೆ ಅದ್ಭುತವಾಗಿದೆ. ಇತ್ತೀಚೆಗೆ ನಡೆದ ಪಾಕಿಸ್ತಾನ್ ಸೂಪರ್ ಲೀಗ್​ನಲ್ಲೂ ಅವರ ಬ್ಯಾಟ್​ನಿಂದ ಸಾಕಷ್ಟು ರನ್​ಗಳು ಹೊರಬಿದ್ದವು. ಪಿಎಸ್​ಎಲ್​ನಲ್ಲಿ 11 ಪಂದ್ಯಗಳನ್ನಾಡಿದ್ದ ಬಾಬರ್, 50ಕ್ಕೂ ಹೆಚ್ಚು ಸರಾಸರಿಯಲ್ಲಿ 522 ರನ್ ಬಾರಿಸಿದ್ದಾರೆ. ಹಾಗೆಯೇ ರಿಜ್ವಾನ್ ಕೂಡ ಆಡಿರುವ 12 ಪಂದ್ಯಗಳಲ್ಲಿ 550 ರನ್ ಬಾರಿಸಿದ್ದಾರೆ.ಈ ಇಬ್ಬರು ಆಟಗಾರರು ಮಾರಾಟವಾಗದಿರಲು ಪ್ರಮುಖ ಕಾರಣ ಬಾಬರ್ ಆಜಂ ಮತ್ತು ರಿಜ್ವಾನ್ ಪೂರ್ಣ ಸೀಸನ್​ನಗೆ ಲಭ್ಯವಿಲ್ಲದೆ ಇರದಿರುವುದು. ಆಗಸ್ಟ್‌ನಲ್ಲಿ ಪಾಕಿಸ್ತಾನ ತಂಡ ಅಫ್ಘಾನಿಸ್ತಾನ ವಿರುದ್ಧ ಸರಣಿ ಆಡಬೇಕಿದೆ.  ಹೀಗಾಗಿ ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಇಡೀ ಸೀಸನ್ ಆಡುತ್ತಾರೆ ಎಂದು ತಂಡಗಳಿಗೆ ಖಚಿತವಾಗಿಲ್ಲ. ಹೀಗಾಗಿ ಈ ಇಬ್ಬರನ್ನು ಖರೀದಿಸಿಲ್ಲ.  ಆದರೆ ಈ ಇಬ್ಬರ ಹೊರತಾಗಿ, ಪಾಕಿಸ್ತಾನದ ವೇಗದ ಬೌಲರ್‌ಗಳಾದ ಶಾಹೀನ್ ಶಾ ಆಫ್ರಿದಿ, ಹ್ಯಾರಿಸ್ ರೌಫ್ ಉತ್ತಮ ಬೆಲೆಗೆ ಮಾರಾಟವಾಗಿದ್ದಾರೆ. ಅದರಲ್ಲೂ ಪಿಎಸ್​ಎಲ್ ವಿಜೇತ ನಾಯಕ, ಶಾಹೀನ್ ಅವರನ್ನು ವೆಲ್ಸ್ ಫೈರ್ ತಂಡ ಸುಮಾರು ಒಂದು ಕೋಟಿ ರೂಪಾಯಿಗೆ ಖರೀದಿಸಿದೆ. ಆದರೆ ಬಾಬರ್ ಅಜಮ್ ಮತ್ತು ರಿಜ್ವಾನ್ ಅವರು ಅತ್ಯುತ್ತಮ ಫಾರ್ಮ್‌ನಲ್ಲಿರುವಾಗ ಏಕೆ ಖರೀದಿಸಲಿಲ್ಲ ಎಂದು ಅನೇಕ ಅಭಿಮಾನಿಗಳು ಆಶ್ಚರ್ಯಚಕಿತರಾಗಿದ್ದಾರೆ.

source https://tv9kannada.com/photo-gallery/cricket-photos/babar-azam-mohammad-rizwan-among-other-stars-go-unsold-at-the-hundred-2023-psr-au14-542093.html

Views: 0

Leave a Reply

Your email address will not be published. Required fields are marked *