Ban on Indian Cricketer: ವಿಶ್ವಕಪ್‌ಗೂ ಮೊದಲು ಶಾಕಿಂಗ್ ನ್ಯೂಸ್! ಭಾರತದ ದಿಗ್ಗಜ ಆಟಗಾರನಿಗೆ ನಿಷೇಧ

Ban on Indian Cricketer: ಅಕ್ಟೋಬರ್ 5 ರಿಂದ ಆರಂಭವಾಗಲಿರುವ ಏಕದಿನ ವಿಶ್ವಕಪ್‌ಗೆ ಭಾರತ ಆತಿಥ್ಯ ವಹಿಸಲಿದೆ. ಈ ಮಧ್ಯೆ, ವಿಶ್ವಕಪ್‌ಗೂ ಮೊದಲು ಭಾರತೀಯ ದಿಗ್ಗಜ ಆಟಗಾರನೊಬ್ಬನಿಗೆ ನಿಷೇಧ ಹೆರಲಾಗಿದ್ದು, ಕ್ರಿಕೆಟ್ ಅಭಿಮಾನಿಗಳ ನಿದ್ದೆಗೆಡಿಸಿದೆ.

Ban on Indian Cricketer: ಮುಂಬರುವ ಏಕದಿನ ವಿಶ್ವಕಪ್-2023ಕ್ಕಾಗಿ ಇಡೀ ವಿಶ್ವವೇ ಕಾತುರದಿಂದ ಕಾದು ಕುಳಿತಿದೆ. 2023ರ ಓ‌ಡಿ‌ಐ ವಿಶ್ವಕಪ್ ಪಂದ್ಯಕ್ಕೆ ಭಾರತ ಆತಿಥ್ಯ ವಹಿಸಿದ್ದು ಐ‌ಸಿ‌ಸಿ ಟೂರ್ನಮೆಂಟ್ ಅಕ್ಟೋಬರ್ 5 ರಿಂದ ಆರಂಭವಾಗಲಿದೆ.  ಈ ಟೂರ್ನಮೆಂಟ್ ನ ಮೊದಲ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿದೆ. ಟೀಮ್ ಇಂಡಿಯಾದ ಮೊದಲ ಪಂದ್ಯ ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ 08, 2023ರಂದು ನಡೆಯಲಿದೆ. ಈ ಮಧ್ಯೆ, ಟೀಮ್ ಇಂಡಿಯಾಗೆ ಕಹಿ ಸುದ್ದಿಯೊಂದು ದೊರೆತಿದ್ದು, ಭಾರತದ ದಿಗ್ಗಜ ಆಟಗಾರನೊಬ್ಬನಿಗೆ ನಿಷೇಧ ಹೇರಲಾಗಿದೆ. 

ಹೌದು,ಏಕದಿನ ವಿಶ್ವಕಪ್  ಪಂದ್ಯದ ಆರಂಭಕ್ಕೂ ಮೊದಲು ಭಾರತ ತಂಡಕ್ಕೆ ಇಂಗ್ಲೆಂಡ್‌ನಿಂದ  ಶಾಕಿಂಗ್ ಸುದ್ದಿಯೊಂದು ಲಭಿಸಿದ್ದು ನೀತಿ ಉಲ್ಲಂಘನೆ ಹಿನ್ನಲೆಯಲ್ಲಿ ಭಾರತದ ಅನುಭವಿ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಅವರನ್ನು  ಒಂದು ಪಂದ್ಯಕ್ಕೆ ಅಮಾನತುಗೊಳಿಸಿ ಇಸಿಬಿ (ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ) ಆದೇಶ ಹೊರಡಿಸಿದೆ. 

ಪ್ರಸ್ತುತ ಸಸೆಕ್ಸ್ ಕೌಂಟಿ ಕ್ರಿಕೆಟ್ ಕ್ಲಬ್‌ನ ನಾಯಕತ್ವವನ್ನು ಹೊಂದಿರುವ  ಚೇತೇಶ್ವರ ಪೂಜಾರ ಒಂದು ಪಂದ್ಯಕ್ಕೆ ನಿಷೇಧಕ್ಕೊಳಗಾಗಿದ್ದಾರೆ. ಇಷ್ಟೇ ಅಲ್ಲ, ಅವರ ತಂಡ ಸಸೆಕ್ಸ್‌ಗೆ ನೀತಿ ನಿಯಮಗಳ ಸಂಪೂರ್ಣ ಉಲ್ಲಂಘನೆಗಾಗಿ ದಂಡದ ರೂಪದಲ್ಲಿ 12 ಅಂಕಗಳನ್ನು ಕಡಿತಗೊಳಿಸಲಾಗಿದೆ.

ಚೇತೇಶ್ವರ ಪೂಜಾರ ಬ್ಯಾನ್ ಆಗಲು ಇದೇ ಪ್ರಮುಖ ಕಾರಣ: 
ಹೋವ್‌ನಲ್ಲಿ ನಡೆದ ಸಸೆಕ್ಸ್ ವಿರುದ್ಧ ಲೀಸೆಸ್ಟರ್‌ಶೈರ್ ಪಂದ್ಯದ ವೇಳೆ ಅವರ ಇಬ್ಬರು ಸಹ ಆಟಗಾರರಾದ ಜಾಕ್ ಕಾರ್ಸನ್ ಮತ್ತು ಟಾಮ್ ಹೇನ್ಸ್ ಅವರ ಕ್ರೀಡಾಹೀನ ವರ್ತನೆಯೇ ಚೇತೇಶ್ವರ ಪೂಜಾರ ಅವರನ್ನು ಒಂದು ಪಂದ್ಯಕ್ಕೆ ಬ್ಯಾನ್ ಮಾಡಲು ಪ್ರಮುಖ ಕಾರಣವಾಗಿದೆ. 

ಚೇತೇಶ್ವರ ಪೂಜಾರ ಇಸಿಬಿಯ ವೃತ್ತಿಪರ ನಡವಳಿಕೆಯ ನಿಯಮಗಳನ್ನು ಮುರಿಯದಿದ್ದರೂ, ಕಾರ್ಸನ್ ಮತ್ತು ಹೇನ್ಸ್ ಅವರ ನಡವಳಿಕೆಯನ್ನು ತಡೆಯುವಲ್ಲಿ ವಿಫಲರಾಗಿರುವ ಹಿನ್ನಲೆಯಲ್ಲಿ ಅವರನ್ನು ಒಂದು ಪಂದ್ಯಕ್ಕೆ ಅಮಾನತ್ತುಗೊಳಿಸಲಾಗಿದೆ. ಈ ಕುರಿತಂತೆ ಹೇಳಿಕೆ ನೀಡಿರುವ ಈಸಿಬಿ, ಚೆತೇಶ್ವರ ಪೂಜಾರ ಅವರನ್ನು ಒಂದು ಪಂದ್ಯದಿಂದ ಬ್ಯಾನ್ ಮಾಡಿರುವ ಹಿಂದಿನ ಕಾರಣವನ್ನು ವಿವರಿಸಿದೆ. 

ಪೂಜಾರ ಅವರನ್ನು ಅಮಾನತುಗೊಳಿಸಿ 12 ಅಂಕಗಳನ್ನು ಕಡಿತಗೊಳಿಸುವುದರ ಜೊತೆಗೆ, ಹೇನ್ಸ್ ಮತ್ತು ಕಾರ್ಸನ್ ಅವರನ್ನು ಸೆಪ್ಟೆಂಬರ್ 19 ರಂದು ಡರ್ಬಿಶೈರ್ ವಿರುದ್ಧ ಸಸೆಕ್ಸ್‌ನ ಮುಂದಿನ ಪಂದ್ಯದಿಂದ ಹೊರಗಿಡಲಾಗಿದೆ.

ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk

ನಮ್ಮ Facebook page: https://www.facebook.com/samagrasudii

Source : https://zeenews.india.com/kannada/sports/shocking-news-before-world-cup-indias-legendary-player-cheteshwar-pujara-banned-for-one-match-159381

Leave a Reply

Your email address will not be published. Required fields are marked *