ಪ್ರೊ ಕಬಡ್ಡಿ: ಗುಜರಾತ್‌ ಜೈಂಟ್ಸ್‌ ವಿರುದ್ಧ ಬೆಂಗಳೂರು ಬುಲ್ಸ್‌ 28-24 ಅಂತರದ ಗೆಲುವು.

ಜೈಪುರ: ಒಂದು ದಿನದ ವಿರಾಮದ ಬಳಿಕ ನಡೆದ ಸೋಮ ವಾರದ ಪ್ರೊ ಕಬಡ್ಡಿ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ಗೆಲುವಿನ ಸಂಭ್ರಮ ಆಚರಿಸಿದೆ.

ಗುಜರಾತ್‌ ಜೈಂಟ್ಸ್‌ ವಿರುದ್ಧ 28-24 ಅಂಕಗಳ ಗೆದ್ದು ಬಂದಿದೆ. ಇದು 9 ಪಂದ್ಯಗಳಲ್ಲಿ ಬುಲ್ಸ್‌ಗೆ ಒಲಿದ 5ನೇ ಜಯ. ಗುಜರಾತ್‌ 7 ಪಂದ್ಯಗಳಲ್ಲಿ 6ನೇ ಸೋಲುಂಡು ಕೊನೆಯ ಸ್ಥಾನದಲ್ಲೇ ಉಳಿಯಿತು.

ಬೆಂಗಳೂರು ಬುಲ್ಸ್‌ ಪರ ರೈಡರ್‌ಗಳಾದ ಆಕಾಶ್‌ ಶಿಂಧೆ 7, ಆಶಿಷ್‌ ಮಲಿಕ್‌ 4, ನಾಯಕ ಯೋಗೇಶ್‌ 6, ಡಿಫೆಂಡರ್‌ ದೀಪಕ್‌ ಶಂಕರ್‌ 4 ಅಂಕ ಗಳಿಸಿ ಮಿಂಚಿದರು.ಗುಜರಾತ್‌ ಜೈಂಟ್ಸ್‌ ತಂಡದ ಆಲ್‌ರೌಂಡರ್‌ ವಿಶ್ವನಾಥ್‌ ವಿ. ಮತ್ತು ಡಿಫೆಂಡರ್‌ ಲಕ್ಕಿ ಶರ್ಮ 5 ಅಂಕ ತಂದಿತ್ತರು. ರೈಡರ್‌ಗಳಾದ ಪ್ರತೀಕ್‌ ದಹಿಯಾ, ರಾಕೇಶ್‌ ಮತ್ತು ಡಿಫೆಂಡರ್‌ ಶುಭಂ ಕುಮಾರ್‌ ತಲಾ 4 ಅಂಕ ಸಂಪಾದಿಸಿದರು.

ಯೋಧಾಸ್‌ ಜಯ:

ಇನ್ನೊಂದು ಪಂದ್ಯದಲ್ಲಿ ಯುಪಿ ಯೋಧಾಸ್‌ 39-22 ಅಂತರದಿಂದ ತಮಿಳ್‌ ತಲೈವಾಸ್‌ಗೆ ಸೋಲುಣಿಸಿತು.

Views: 53

Leave a Reply

Your email address will not be published. Required fields are marked *