Bay Leaf Benefits: ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ವರದಾನ ಬೇ ಎಲೆಗಳು

Bay Leaf Benefits: ಭಾರತೀಯರ ಪ್ರತಿಯೊಬ್ಬರ ಮನೆಯಲ್ಲಿಯೂ ಲಭ್ಯವಿರುವ ಬೇ ಎಲೆಗಳು ಆರೋಗ್ಯದ ರುಚಿಯನ್ನು ಹೆಚ್ಚಿಸುತ್ತವೆ ಎಂದು ನಿಮಗೆ ತಿಳಿದೇ ಇದೆ. ಆದರೆ, ಆರೋಗ್ಯದ ದೃಷ್ಟಿಯಿಂದಲೂ ಇದು ವರದಾನ ಎಂದು ನಿಮಗೆ ತಿಳಿದಿದೆಯೇ? 

ಬೇ ಎಲೆಗಳನ್ನು ಲವಂಗದ ಎಲೆ ಎಂತಲೂ ಕರೆಯಲಾಗುತ್ತದೆ. ಬೇ ಎಲೆಗಳಲ್ಲಿ ಪೊಟ್ಯಾಸಿಯಮ್, ತಾಮ್ರ, ಮ್ಯಾಂಗನೀಸ್, ಸತು, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಮೆಗ್ನೀಸಿಯಮ್ನಂತಹ ಪ್ರಮುಖ ಪೋಷಕಾಂಶಗಳು ಸಮೃದ್ಧವಾಗಿವೆ. ಹಾಗಾಗಿಯೇ ಇದನ್ನು ಆರೋಗ್ಯದ ಗಣಿ ಎಂತಲೂ ಕರೆಯಲಾಗುತ್ತದೆ. ಬೇ ಎಲೆಗಳ ಬಳಕೆಯಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳು ಲಭ್ಯವಾಗಲಿವೆ ಎಂದು ತಿಳಿಯೋಣ… 

ಆಹಾರ ತಜ್ಞರ ಪ್ರಕಾರ, ಬೇ ಎಲೆಗಳನ್ನು ಮಾನಸಿಕ ಆರೋಗ್ಯ ವೃದ್ಧಿಗೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ನೀವು ಹೆಚ್ಚು ಒತ್ತಡಭರಿತ ಜೀವನವನ್ನು ಅನುಭವಿಸುತ್ತಿದ್ದರೆ ರಾತ್ರಿ ಮಲಗುವ ಮೊದಲು ಎರಡು ಬೇ ಎಲೆಗಳನ್ನು ತೆಗೆದುಕೊಂಡು ಅದನ್ನು ಬಿಸಿ ಮಾಡಿ ನಿಮ್ಮ ಕೋಣೆಯಲ್ಲಿ ಇರಿಸಿ. ಇದರ ಹೊಗೆಯು ಒತ್ತಡವನ್ನು ನಿವಾರಿಸುತ್ತದೆ. 

ಮಳೆಗಾಲ, ಚಳಿಗಾಲದಲ್ಲಿ ಸಾಮಾನ್ಯವಾಗಿರುವ ಉಸಿರಾಟದ ಸಮಸ್ಯೆಯಿಂದ ಪರಿಹಾರ ಪಡೆಯಲು ಸಹ ಬೇ ಎಲೆಗಳು ತುಂಬಾ ಪ್ರಯೋಜನಕಾರಿ. ಇದಕ್ಕಾಗಿ, ಒಂದು ಪಾತ್ರೆಯಲ್ಲಿ ನೀರು ಮತ್ತು ಬೇ ಎಲೆಗಳನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಕುದಿಸಿ. ಒಂದು ಕಾಟನ್ ಬಟ್ಟೆಯನ್ನು ಇದರಲ್ಲಿ ಅದ್ದಿ ನೆನೆಸಿ., ಎದೆಯ ಮೇಲೆ ಇಡಿ. ಈ ರೀತಿ ಮಾಡುವುದರಿಂದ ಉಸಿರಾಟದ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. 

ನೀವು ಆಗಾಗ್ಗೆ ಆಯಾಸವನ್ನು ಅನುಭವಿಸುತ್ತಿದ್ದರೆ ಬೇ ಎಲೆಗಳ ಬಳಕೆ ನಿಮ್ಮ ಆಯಾಸವನ್ನು ನಿವಾರಿಸುತ್ತದೆ. 

ಬೇ ಎಲೆಯು ಟೈಪ್ 2 ಡಯಾಬಿಟಿಸ್ ರೋಗಿಗಳಿಗೆ ವರದಾನಕ್ಕಿಂತ ಕಡಿಮೆ ಇಲ್ಲ ಎಂದು ಹೇಳಲಾಗುತ್ತದೆ. ಆಹಾರ ತಜ್ಞರ ಪ್ರಕಾರ, ನಮ್ಮ ಆಹಾರದಲ್ಲಿ ಬೇ ಎಲೆಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್, ಗ್ಲೂಕೋಸ್ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಸಕ್ಕರೆ ಕಾಯಿಲೆ ಇರುವವರು ಇದರ ಎಲೆಗಳನ್ನು ಅರೆದು ಪುಡಿ ಮಾಡಿ ಒಂದು ತಿಂಗಳು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಂಟ್ರೋಲ್ ಮಾಡಬಹುದು. 

ಶೀತ, ನೆಗಡಿ, ಜ್ವರದಂತಹ ಸೋಂಕಿನ ರೋಗಿಗಳ ವಿರುದ್ಧ ಹೋರಾಡಲು ಬೇ ಎಲೆಗಳ ಕಷಾಯ ತುಂಬಾ ಪ್ರಯೋಜನಕಾರಿ ಆಗಿದೆ.  ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.    

Source : https://zeenews.india.com/kannada/photo-gallery/a-mine-of-nutrients-is-in-bay-leaves-which-have-healing-properties-for-many-diseases

  

  

  

Leave a Reply

Your email address will not be published. Required fields are marked *