BBL 2022: 15 ರನ್​ಗಳಿಗೆ ಆಲೌಟ್; ಕೇವಲ 35 ಎಸೆತಗಳಿಗೆ ಎಲ್ಲಾ 10 ವಿಕೆಟ್‌ ಪತನ..!

ಬಿಗ್ ಬ್ಯಾಷ್ ಲೀಗ್‌ನಲ್ಲಿ ಶುಕ್ರವಾರ ನಡೆದ ಅಡಿಲೇಡ್ ಸ್ಟ್ರೈಕರ್ಸ್ ಹಾಗೂ ಸಿಡ್ನಿ ಥಂಡರ್ ವಿರುದ್ಧದ ಪಂದ್ಯದಲ್ಲಿ ಸಿಡ್ನಿ ಥಂಡರ್ ತಂಡ ಕೇವಲ 15 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಕಂಡಿದೆ. ಈ ಪಂದ್ಯದಲ್ಲಿ ಕೇವಲ 35 ಎಸೆತಗಳನ್ನು ಎದುರಿಸಿದ ಸಿಡ್ನಿ ಥಂಡರ್ ತಂಡ ಅಲೆಕ್ಸ್ ಹೇಲ್ಸ್, ರಿಲೆ ರುಸ್ಸೋ ಅವರಂತಹ ಸ್ಟಾರ್​ ಬ್ಯಾಟ್ಸ್​ಮನ್​ಗಳ ಬಳಗವನ್ನೇ ಹೊಂದಿದ್ದರೂ ಮುಜುಗರದ ಸೋಲಿನಿಂದ ಪಾರಾಗಲು ಸಾಧ್ಯವಾಗಲಿಲ್ಲ. ಇದು ಬಿಗ್ ಬ್ಯಾಷ್ ಲೀಗ್ ಇತಿಹಾಸದಲ್ಲಿ ತಂಡವೊಂದು ಅತ್ಯಂತ ಕಡಿಮೆ ಸ್ಕೋರ್​ಗೆ ಆಲೌಟ್ ಆದ ಮೊದಲ ಪಂದ್ಯವಾಗಿದೆ. ಇದಕ್ಕೂ ಮೊದಲು 2015ರಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ತಂಡ 57 ರನ್‌ಗಳಿಗೆ ಆಲೌಟ್ ಆಗಿತ್ತು.

ಅಲ್ಲದೆ ಪುರುಷರ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ 20 ಕ್ಕಿಂತ ಕಡಿಮೆ ಸ್ಕೋರ್​ಗೆ ತಂಡವೊಂದು ಆಲೌಟ್ ಆಗಿರುವುದು ಕೂಡ ಇದೇ ಮೊದಲು. ಕೇವಲ 15 ರನ್​ಗಳಿಗೆ ಆಲೌಟ್ ಆಗುವ ಮೂಲಕ ಸಿಡ್ನಿ ಥಂಡರ್ ಈ ಅನಗತ್ಯ ದಾಖಲೆಯನ್ನು ತನ್ನದಾಗಿಸಿಕೊಂಡಿದೆ. ಈ ಹಿಂದೆ ಈ ಅನಗತ್ಯ ದಾಖಲೆಯು 2019 ರಲ್ಲಿ ಜೆಕ್ ರಿಪಬ್ಲಿಕ್ ವಿರುದ್ಧ 21 ರನ್ ಪೇರಿಸಿದ ಟರ್ಕಿ ಹೆಸರಿನಲ್ಲಿತ್ತು. ಈಗ ಈ ದಾಖಲೆಯನ್ನು ಸಿಡ್ನಿ ಥಂಡರ್ ಮಡಿಲಿಗೆ ಹಾಕಲಾಗಿದೆ. ಕಡಿಮೆ ರನ್​ಗಳಿಗೆ ಆಲೌಟ್ ಆಗುವುದರೊಂದಿಗೆ ಇಷ್ಟು ಕಡಿಮೆ ಎಸೆತಗಳನ್ನು ಎದುರಿಸಿದ ಮೊದಲ ತಂಡ ಎಂಬ ಕಳಪೆ ದಾಖಲೆಗೂ ಸಿಡ್ನಿ ಥಂಡರ್ ಕೊರಳೊಡ್ಡಿದೆ.

source https://tv9kannada.com/sports/cricket-news/bbl-2022-sydney-thunder-all-out-for-just-15-runs-vs-adelaide-strikers-in-big-bash-league-psr-au14-486648.html

Leave a Reply

Your email address will not be published. Required fields are marked *