ಪದೇ ಪದೇ ಟೀ ಸೇವಿಸುತ್ತಿದ್ದರೆ ಎಚ್ಚೆತ್ತುಕೊಳ್ಳಿ, ಇದರಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ.

Tea side effect:ಸಾಮಾನ್ಯವಾಗಿ ಜನರು ಚಳಿಗಾಲದಲ್ಲಿ ಜಾಸ್ತಿ ಟೀ ಕುಡಿಯಲು ಪ್ರಾರಂಭಿಸುತ್ತಾರೆ. ಹಾಗೇ ಮಾಡುವುರಿಂದ ಆರೋಗ್ಯದ ಮೇಲೆ ಸಾಕಷ್ಟು ಕೆಟ್ಟ ಪರಿಣಾಮ ಬೀರುವುದಂತು ಖಂಡಿತ. ಟೀ ಕುಡಿಯುವುದರಿಂದ ಉಂಟಾಗುವ ಸಮಸ್ಯೆಗಳು ಯಾವುವು ಎನ್ನುವುದನ್ನು ತಿಳಿಯೋಣ..

  • ಟೀ ಕುಡಿಯುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
  • ಹೊಟ್ಟೆಗೆ ಸಂಬಂಧಿಸಿದ ಅನೇಕ ಕಾಯಿಲೆ ಕಾಣಿಸಿಕೊಳ್ಳುತ್ತವೆ.
  • ಟೀ ಸೇವಿಸುವುದರಿಂದ ದೇಹದಲ್ಲಿ ನೀರಿನ ಸಮಸ್ಯೆ ಉಂಟಾಗುತ್ತದೆ.

Tea Disadvantage : ಬಹುತೇಕ ಪ್ರತಿಯೊಬ್ಬ ವ್ಯಕ್ತಿಯು ಪದೇ ಪದೇ ಟೀ ಕುಡಿಯುವುದಕ್ಕೆ ಇಷ್ಟಪಡುತ್ತಾರೆ. ಯಾವುದೇ ಸೀಸನ್‌ ಆಗಿರಲಿ, ದಿನ ಆರಂಭವಾಗುವುದೇ ಬೆಳಗ್ಗಿನ ಟೀ ನಿಂದ. ಆದರೆ ಚಳಿಗಾಲದಲ್ಲಿ ಈ ರೂಢಿ ಇನ್ನಷ್ಟು ಹೆಚ್ಚಾಗುತ್ತದೆ. ಜನರು ಬಿಸಿ ಟೀ ಕುಡಿಯುವುದರಿಂದ ದೇಹ ಬೆಚ್ಚಗೆ ಹಿಡಲು ಸಹಕಾರಿ ಎಂದು ಭಾವಿಸುತ್ತಾರೆ. ಆದರೆ ನೀವು ಪದೇ ಪದೇ ಟೀ ಅನ್ನು ಕುಡಿಯುತ್ತಿದ್ದರೆ ಎಚ್ಚರದಿಂದ ಇರುವುದು ಒಳ್ಳೆಯದು! ಏಕೆಂದರೆ ಟೀ ಆರೋಗ್ಯಕ್ಕೆ ಇದು ಅಪಾಯಕಾರಿ ಎಂದು ತಿಳಿದುಬಂದಿದೆ.

ತಜ್ಞರ ಪ್ರಕಾರ, ನೀವು ದಿನಕ್ಕೆ ಅನೇಕ ಬಾರಿ ಟೀ ಕುಡಿಯುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಏಕೆಂದರೆ ಇದರಲ್ಲಿ ಟ್ಯಾನಿನ್‌ ಎಂಬ ವಸ್ತುವು ದೇಹದಲ್ಲಿ ಕಬ್ಬಿಣದ ಕೊರತೆಯನ್ನು ಕಡಿಮೆ ಮಾಡುತ್ತದೆ, ಇದರಿಂದ ಅನೇಕ ರೋಗಕ್ಕೆ ಆಮಂತ್ರಣ ಕೊಟ್ಟಂತಾಗುತ್ತದೆ. ಅತಿಯಾದ ಟೀ ಕುಡಿವುದರಿಂದ ಜೀರ್ಣಕ್ರಿಯೆ ಹಾಳಾಗುತ್ತದೆ. ಹಾಗಾದ್ರೆ ಹೆಚ್ಚು ಟೀ ಕುಡಿಯುವುದರಿಂದ  ದೇಹದಲ್ಲಿ ಯಾವ ಸಮಸ್ಯೆಗೆ ಎಡಮಾಡಿ ಕೊಟ್ಟಂತಾಗುತ್ತದೆ ಎನ್ನುವ ಮಾಹಿತಿ ಇಲ್ಲಿದೆ.

ಅತಿಯಾಗಿ ಟೀ ಕುಡಿಯುವುದರಿಂದ ದೇಹದ ಮೇಲೆ ಬೀರುವ ಪರಿಣಾಮಗಳು

ಹೊಟ್ಟೆಗೆ ಸಂಬಂಧಿಸಿ ಸಮಸ್ಯೆಗಳು

ನಾವು ಪ್ರತಿ ದಿನ ಟೀ ಕುಡಿಯುವುದು ಕಾಮನ್‌, ಆದರೆ ಇತ್ತೀಚೆಗೆ ಚಳಿಗಾಲ ಪ್ರಾರಂಭವಾಗಿರುವುದರಿಂದ ಬೆಚ್ಚಗಿನ ಅನುಭವ ಪಡೆಯುವ ಉದ್ದೇಶದಿಂದ ಮಿತಿಗೆ ಮೀರಿದ್ದಕ್ಕೂ ಜಾಸ್ತಿನೇ ಟೀ ಕುಡಿಯಲು ಶುರುಮಾಡಿದ್ದೇವೆ. ಈ ರೀತಿ ಕುಡಿಯುವುದರಿಂದ ಹೊಟ್ಟೆಗೆ ಸಂಬಂಧಿಸಿದ ಅನೇಕ ಕಾಯಿಲೆ ಕಾಣಿಸಿಕೊಳ್ಳುತ್ತವೆ. ಇದರಿಂದ ಅಸಿಡಿಟಿ ಮಲಬದ್ಧತೆಯಂತಹ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚು.

ದೇಹದ ಮೇಲಾಗುವ ಸಮಸ್ಯೆಗಳು

ಟೀಯಲ್ಲಿರುವ ಕೇಫಿನ್‌ ದೇಹದಲ್ಲಿ ಅನೇಕ ಸಮಸ್ಯೆಗಳಿಗೆ ದಾರಿ ಉಂಟು ಮಾಡಿಕೊಟ್ಟಂತಾಗುತ್ತದೆ. ಅಲ್ಲದೇ ನಿದ್ರಾಹೀನತೆ, ಆಯಾಸ ಮತ್ತು ದೌರ್ಬಲ್ಯದಂತಹ ಸಮಸ್ಯೆಗಳನ್ನು ಎದುರಿಸಬೇಕಾಗುವ ಸಾಧ್ಯತೆ ಹೆಚ್ಚಿದೆ. ಅತಿಯಾಗಿ ಟೀ ಕುಡಿಯುವುದರಿಂದ ವಾಕರಿಕೆಯಂತಹ ಸಮಸ್ಯೆ ಜೊತೆಗೆ ಇದರಿಂದ ವಾಂತಿ ಆಗುವ ಸಾಧ್ಯತೆಯೇ ಹೆಚ್ಚು. ಅಧಿಕ ಪ್ರಮಾಣದಲ್ಲಿ ಟೀ ಸೇವಿಸುವುದರಿಂದ ದೇಹದಲ್ಲಿ ನೀರಿನ ಸಮಸ್ಯೆ ಉಂಟಾಗುತ್ತದೆ, ಏಕೆಂದರೆ ಟೀ ಸೇವನೆಯು ಹೆಚ್ಚು ಮೂತ್ರಕ್ಕೆ ಕಾರಣವಾಗುತ್ತದೆ. ಇದೆ ಕಾರಣಕ್ಕೆ ಹೆಚ್ಚು ಆಯಾಸ ಆಗುವುದು.

ದುರ್ವಾಸನೆ ಹೊಡೆಯುವ ಸಾಧ್ಯತೆ

ಚಳಿಗಾಲದಲ್ಲಿ ಬಹುತೇಕರು ಅಧಿಕ ಪ್ರಮಾಣದಲ್ಲಿ ಟೀ ಕುಡಿಯಲು ಇಷ್ಟಪಡುತ್ತಾರೆ. ಆದರೆ ಟೀ ಕುಡಿಯುವವರಿಗೆ ಅದು ತಿಳಿಯದು ಹೆಚ್ಚು ಟೀ ಕುಡಿಯುವುದರಿಂದ ಬಾಯಿಂದ ದುರ್ವಾಸನೆಯಂತಹ ಸಮಸ್ಯೆಗಳು ಎದುರಾಗುತ್ತದೆ ಎಂದು. ಇದರೊಂದಿಗೆ ಅನೇಕ ಗಂಭೀರ ಅಪಾಯವಾಗುವ ಸಾಧ್ಯತೆ ಇವೆ. ಹಾಗಾಗಿ ಚಳಿಗಾಲದಲ್ಲಿ ಪದೇ ಪದೇ ಟೀ ಕುಡಿಯುವ ಅಭ್ಯಾಸವನ್ನು ಖಡಿತಗೊಳಿಸುವುದು ಆದಷ್ಟು ಒಳ್ಳೆಯದು.

ಸೂಚನೆ : ಈ ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಸಮಗ್ರ ಸುದ್ದಿ ಇದನ್ನು ಖಚಿತಪಡಿಸುವುದಿಲ್ಲ. )

Source : https://zeenews.india.com/kannada/health/be-careful-if-you-drink-tea-frequently-it-can-have-side-effects-on-your-health-176940

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *