ಬೆಂಡೆಕಾಯಿಯಲ್ಲಿ ವಿಟಮಿನ್ ಕೆ, ಸಿ, ಫೋಲೇಟ್, ಮೆಗ್ನೀಸಿಯಮ್, ವಿಟಮಿನ್ ಬಿ ಮತ್ತು ಮ್ಯಾಂಗನೀಸ್ ನಂತಹ ಪೋಷಕಾಂಶಗಳಿದ್ದು, ಇದು ದೇಹಕ್ಕೆ ಅಗತ್ಯವಾದ ಪೋಷಣೆಯನ್ನು ಒದಗಿಸುತ್ತದೆ.

ಆರೋಗ್ಯವೇ ಅತ್ಯಂತ ದೊಡ್ಡ ಭಾಗ್ಯ (Health) ಎಂದು ಹಿರಿಯರು ಹೇಳುತ್ತಾರೆ. ಅನೇಕ ಜನರು ಆರೋಗ್ಯವಾಗಿರಲು ಹಸಿರು ತರಕಾರಿಗಳನ್ನು (Green Vegetables) ತಿನ್ನಲು ಸಲಹೆ ನೀಡುತ್ತಾರೆ. ತರಕಾರಿಗಳು ಅನೇಕ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ. ಬೆಂಡೆಕಾಯಿ ಅಂತಹವುಗಳಲ್ಲಿ ಒಂದಾಗಿದೆ. ಆದಾಗ್ಯೂ, ಇದು ಜಿಗುಟಾಗಿರಬಹುದು ಎಂಬ ಕಾರಣದಿಂದ ಅನೇಕ ಜನರು ಇದನ್ನು ತಿನ್ನಲು ಇಷ್ಟಪಡುವುದಿಲ್ಲ. ಆದರೆ, ಕೆಲವರು ಇದನ್ನು ತಿನ್ನಲು ಇಷ್ಟಪಡುತ್ತಾರೆ. ಈ ತರಕಾರಿಯಲ್ಲಿ ವಿಟಮಿನ್ ಕೆ, ಸಿ, ಫೋಲೇಟ್, ಮೆಗ್ನೀಸಿಯಮ್, ವಿಟಮಿನ್ ಬಿ ಮತ್ತು ಮ್ಯಾಂಗನೀಸ್ ನಂತಹ ಪೋಷಕಾಂಶಗಳಿದ್ದು, ಇದು ದೇಹಕ್ಕೆ ಅಗತ್ಯವಾದ ಪೋಷಣೆಯನ್ನು ಒದಗಿಸುತ್ತದೆ. ಬೆಂಡೆಕಾಯಿಯಲ್ಲಿ ಕ್ಯಾಲ್ಸಿಯಂ (Calcium) ಮತ್ತು ವಿಟಮಿನ್ ಕೆ (Vitamin K) ಸಮೃದ್ಧವಾಗಿದೆ. ಇವುಗಳನ್ನು ತಿನ್ನುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ಇದು ರೋಗನಿರೋಧಕ ಶಕ್ತಿಯನ್ನು (Immunity) ಹೆಚ್ಚಿಸುತ್ತದೆ. ಆದಾಗ್ಯೂ, ಕೆಲವು ಆಹಾರಗಳನ್ನು (Food) ಬೆಂಡೆಕಾಯಿಯೊಂದಿಗೆ ತೆಗೆದುಕೊಳ್ಳಬಾರದು. ಇವು ಆರೋಗ್ಯಕ್ಕೆ ಹಾನಿಕಾರಕ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಹಾಲು ಮತ್ತು ಬೆಂಡೆಕಾಯಿ ಸೇವಿಸೋದು ಬೇಡ!
ಬೆಂಡೆಕಾಯಿ ತಿಂದ ನಂತರ ಹಾಲು ಕುಡಿಯಬೇಡಿ. ಅಥವಾ ನೀವು ಬೆಂಡೆಕಾಯಿಯೊಂದಿಗೆ ಹಾಲು ಕುಡಿಯಬಾರದು. ಏಕೆಂದರೆ ಇವೆರಡರಲ್ಲೂ ಕ್ಯಾಲ್ಸಿಯಂ ಇರುತ್ತದೆ. ಬೆಂಡೆಕಾಯಿ ಕ್ಯಾಲ್ಸಿಯಂ ಜೊತೆಗೆ ಆಕ್ಸಲೇಟ್ ಅನ್ನು ಸಹ ಹೊಂದಿರುತ್ತದೆ. ಹಾಲು ಮತ್ತು ಬೆಂಡೆಕಾಯಿ ಎರಡನ್ನೂ ಒಟ್ಟಿಗೆ ಸೇವಿಸುವುದರಿಂದ ಆಕ್ಸಲೇಟ್ ರೂಪುಗೊಳ್ಳುತ್ತದೆ. ಇದು ಮೂತ್ರಪಿಂಡದ ಕಲ್ಲುಗಳ ರಚನೆಗೆ ಕಾರಣವಾಗಬಹುದು. ಅದಕ್ಕಾಗಿಯೇ ತಜ್ಞರು ಎರಡರನ್ನು ಒಟ್ಟಿಗೆ ಸೇವಿಸಬೇಡಿ ಎಂದು ಸಲಹೆ ನೀಡುತ್ತಾರೆ. ಅವುಗಳನ್ನು ಪ್ರತ್ಯೇಕವಾಗಿ ತೆಗೆದುಕೊಳ್ಳುವುದರಿಂದ ದೇಹಕ್ಕೆ ಅನೇಕ ಪ್ರಯೋಜನಗಳು ದೊರೆಯುತ್ತವೆ.
ಹಾಗಲಕಾಯಿ ಮತ್ತು ಬೆಂಡೆಕಾಯಿ ಸೇವಿಸಿದರೆ ಏನಾಗುತ್ತೆ?
ಹಾಗಲಕಾಯಿ ಮತ್ತು ಬೆಂಡೆಕಾಯಿ ಸಾಮಾನ್ಯವಾಗಿ ಎರಡು ಪೌಷ್ಟಿಕ ತರಕಾರಿಗಳಾಗಿವೆ. ಆದರೆ, ಈ ಎರಡನ್ನೂ ಒಟ್ಟಿಗೆ ತಿನ್ನಬಾರದು. ಈ ಕಾಂಬಿನೇಷನ್ ಹೊಟ್ಟೆಯಲ್ಲಿ ಕಿರಿಕಿರಿ ಉಂಟುಮಾಡಬಹುದು. ಜೀರ್ಣಕ್ರಿಯೆ ದುರ್ಬಲವಾಗಿರುವ ಜನರು ಈ ಎರಡನ್ನು ತಿಂದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸಾಮಾನ್ಯವಾಗಿ, ಹಾಗಲಕಾಯಿ ಬಿಸಿ ಸ್ವಭಾವ, ಬೆಂಡೆಕಾಯಿಯ ತಂಪಾದ ಸ್ವಭಾವ ಹೊಂದಿರುತ್ತದೆ. ಇದು ಹೊಟ್ಟೆಯ pH ಸಮತೋಲನವನ್ನು ಹಾಳು ಮಾಡುತ್ತದೆ. ಇದರಿಂದ ಮಲಬದ್ಧತೆ, ಅಜೀರ್ಣ, ಅನಿಲ, ಅತಿಸಾರ ಮತ್ತು ಹೊಟ್ಟೆ ನೋವಿನಂತಹ ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು ಎಮದು ಎಚ್ಚರಿಕೆ ನೀಡಿದ್ದಾರೆ.
ಬೆಂಡೆಕಾಯಿ ಊಟದ ಬಳಿಕ ಟೀ-ಕಾಫಿ ಸೇವನೆ ಸರಿಯೇ?
ಅನೇಕ ಜನರು ಟಿಫಿನ್ ಅಥವಾ ಊಟದ ನಂತರ ಚಹಾ ಕುಡಿಯುತ್ತಾರೆ. ಅಂತಹ ಸಮಯದಲ್ಲಿ, ನೀವು ಬೆಂಡೆಕಾಯಿ ತಿಂದಿದ್ದರೆ, ಚಹಾ ಕುಡಿಯಲು ಆತುರಪಡಬೇಡಿ. ಇವೆರಡರ ಕಾಂಬಿನೇಷನ್ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ. ಚಹಾವು ಟ್ಯಾನಿನ್ ಭರಿತ ಆಹಾರವಾಗಿದೆ. ಬೆಂಡೆಕಾಯಿ ತಿಂದ ನಂತರ ಚಹಾ ಕುಡಿಯುವುದರಿಂದ ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ಅಡ್ಡಿಯಾಗಬಹುದು. ಇದರಿಂದಾಗಿ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ಸಿಗುವುದಿಲ್ಲ.
ಮೂಲಂಗಿ ಮತ್ತು ಬೆಂಡೆಕಾಯಿ
ಯಾವುದೇ ರೂಪದಲ್ಲಿ ಮೂಲಂಗಿಯನ್ನು ಬೆಂಡೆಕಾಯಿಯೊಂದಿಗೆ ತಿನ್ನಬಾರದು. ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿರುವ ಜನರು ವಿಶೇಷವಾಗಿ ಇದನ್ನು ತಪ್ಪಿಸಬೇಕು. ಇವೆರಡನ್ನೂ ತಿನ್ನುವುದರಿಂದ ಹೊಟ್ಟೆಯಲ್ಲಿ ಆಮ್ಲೀಯತೆ ಉಂಟಾಗುತ್ತದೆ. ಮೂಲಂಗಿ ಸಲ್ಫರ್ ಸಂಯುಕ್ತಗಳನ್ನು ಹೊಂದಿರುತ್ತದೆ. ಇವುಗಳನ್ನು ಬೆಂಡೆಕಾಯಿಯೊಂದಿಗೆ ತಿಂದಾಗ ದ್ವಿಗುಣಗೊಳ್ಳುತ್ತವೆ. ಇದು ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಹೊಟ್ಟೆ ನೋವು, ವಾಂತಿ ಮತ್ತು ಅತಿಸಾರದಂತಹ ಸಮಸ್ಯೆಗಳಿಂದ ನೀವು ಬಳಲಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಕೆಂಪು ಮಾಂಸ ಮತ್ತು ಬೆಂಡೆಕಾಯಿ
ಬೆಂಡೆಕಾಯಿ ಮತ್ತು ಕೆಂಪು ಮಾಂಸವನ್ನು ಒಟ್ಟಿಗೆ ತಿನ್ನಬಾರದು. ಈ ಎರಡೂ ಆಹಾರಗಳು ಜೀರ್ಣವಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಅದಕ್ಕಾಗಿಯೇ ನೀವು ಬೆಂಡೆಕಾಯಿಯೊಂದಿಗೆ ಕೆಂಪು ಮಾಂಸವನ್ನು ತಿನ್ನಬಾರದು. ಇವೆರಡನ್ನು ಒಟ್ಟಿಗೆ ತಿನ್ನುವುದರಿಂದ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಹೊಟ್ಟೆಯ ಕಿರಿಕಿರಿ ಮತ್ತು ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅದಕ್ಕಾಗಿಯೇ ನೀವು ಈ ಆಹಾರದಿಂದ ದೂರವಿರುವುದು ಒಳ್ಳೆಯದು.
ಗಮನಿಸಿ: ಇದು ಕೇವಲ ಸಾಮಾಜಿಕ ಮಾಹಿತಿ. ಕೆಲವು ಅಧ್ಯಯನಗಳು ಮತ್ತು ಸಂಬಂಧಿತ ತಜ್ಞರ ಪ್ರಕಾರ ನಾವು ಈ ವಿವರಗಳನ್ನು ಒದಗಿಸಿದ್ದೇವೆ. ಫಲಿತಾಂಶಗಳು ವ್ಯಕ್ತಿಗಳ ಆರೋಗ್ಯವನ್ನು ಅವಲಂಬಿಸಿರುತ್ತದೆ. ಇವುಗಳನ್ನು ಅನುಸರಿಸುವ ಮೊದಲು, ಸಂಬಂಧಿತ ತಜ್ಞರನ್ನು ಸಂಪರ್ಕಿಸುವುದು ಉತ್ತಮ. ಅಲ್ಲದೆ, ಆರೋಗ್ಯಕರ ಜೀವನಶೈಲಿ ಮತ್ತು ಸರಿಯಾದ ಆಹಾರವು ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು.