
ಹಿರಿಯೂರು, ಮಾರ್ಚ್, 16: ಕೆಲವು ತಿಂಗಳುಗಳ ಹಿಂದೆಯಷ್ಟೇ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಚಿರತೆ ಕಾಣಿಸಿಕೊಂಡು ಜನರನ್ನು ಬೆಚ್ಚಿಬೀಳುವಂತೆ ಮಾಡಿತ್ತು. ಮತ್ತೊಂದೆಡೆ ಈ ಚಿರತೆ ಸೆರೆಹಿಡಿಯಲು ಅರಣ್ಯ ಇಲಾಖೆ ಹರಸಾಹಸವನ್ನೇ ಪಟ್ಟಿದ್ದರು. ಅದರಂತೆಯೇ ಹಿರಿಯೂರು ನಗರದೊಳಗೆ ಕರಡಿಯೊಂದು ಓಡಾಡಿದ ದೃಶ್ಯ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದ್ದು, ನಗರದ ಜನತೆ ಆತಂಕಕ್ಕೆ ಒಳಗಾಗಿದ್ದಾರೆ.
ಕರಡಿ ಓಡಾಡುವ ದೃಶ್ಯ ಸೆರೆ: ಕಾಡಿನಲ್ಲಿರಬೇಕಾದ ಕಾಡು ಪ್ರಾಣಿಗಳು ನೀರು, ಆಹಾರವನ್ನು ಹುಡುಕಿಕೊಂಡು ಇದೀಗ ನಗರ, ಗ್ರಾಮ ಹಾಗೂ ಹಳ್ಳಿಗಳ ಒಳಗೆ ಲಗ್ಗೆ ಇಡುತ್ತಿವೆ.ಅದರಂತೆಯೇ ಹಿರಿಯೂರು ನಗರದೊಳಗೆ ಕರಡಿಯೊಂದು ಓಡಾಡಿವರ ದೃಶ್ಯ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ.
ಅನಾಹುತ ತಪ್ಪಿಸುವಂತೆ ಆಗ್ರಹ: ನಗರದ ಹುಳಿಯಾರಸ್ತೆಯ ಹರಿಶ್ಚಂದ್ರ ಘಾಟ್, ಲಕ್ಷ್ಮಮ್ಮ ಬಡಾವಣೆ, ಚಾನಲ್ ಬಳಿ ಕರಡಿ ಓಡಾಡಿರುವ ದೃಶ್ಯ ಜನರಲ್ಲಿ ಆತಂಕ ಮೂಡಿಸಿದೆ. ಕಾಡಿನಲ್ಲಿ ಇರಬೇಕಾದ ಪ್ರಾಣಿಗಳು ನಗರದೊಳಗೆ ಲಗ್ಗೆ ಇಟ್ಟಿದ್ದು, ಇದರಿಂದ ಮಕ್ಕಳು ವೈಯೋ ವೃದ್ಧರು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನಯ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಕರಡಿ ಹಿಡಿದು ಅನಾಹುತ ತಪ್ಪಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1