
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಡಿ. 20 : ಬೆಳಗಾವಿಯಲ್ಲಿ ಡಿ. 26-27 ರಂದು ನಡೆಯಲಿರುವ ಗಾಂಧಿ ಭಾರತ ಕಾರ್ಯಕ್ರಮಕ್ಕೆ ಚಿತ್ರದುರ್ಗದಿಂದ ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಚಿತ್ರದುರ್ಗ ವಿಧಾನಸಭಾ ಉಸ್ತುವಾರಿಗಳಾದ ರಾಮಕೃಷ್ಣ
ಪಕ್ಷದ ಮುಖಂಡರಿಗೆ ಕಾರ್ಯಕರ್ತರಿಗೆ ಕರೆ ನೀಡಿದರು.
ಚಿತ್ರದುರ್ಗ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಮಹಾತ್ಮ ಗಾಂಧಿ ಅಧ್ಯಕ್ಷತೆಯಲ್ಲಿ ಡಿ.26 1924 ರಂದು ನಡೆದ
ಎಐಸಿಸಿ ಬೆಳಗಾವಿ ಅಧೀವೇಶನದ ಶತಮಾನೋತ್ಸವ ಗಾಂಧಿ ಅಧ್ಯಕ್ಷತೆಯ ಬೆಳಗಾವಿ ಅಧೀವೇಶನಕ್ಕೆ 100 ವರ್ಷ ಸಂದ
ಹಿನ್ನಲೆಯಲ್ಲಿ ಹಮ್ಮಿಕೊಂಡಿದ್ದ ಗಾಂಧಿ ಭಾರತ ಪೂರ್ವ ಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಂದಿನ ಕಾಲದಲ್ಲಿ
ದೇಶ ಬ್ರಟಿಷರ ದಾಸ್ಯದಿಂದ ಮುಕ್ತರಾಗಲು ಈ ಅಧಿವೇಶನದಲ್ಲಿ ವಿವಿಧ ರೀತಿಯ ಹೋರಾಟದ ಬಗ್ಗೆ ನಿರ್ಣಯಗಳನ್ನು
ತೆಗೆದುಕೊಳ್ಳಲಾಯಿತು. ಅದರ ನೆನಪಿಗಾಗಿ ಅಂದು ನಮ್ಮ ಕಾಂಗ್ರೆಸ್ ವತಿಯಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಇದರಲ್ಲಿ
ಭಾಗವಹಿಸಲು ದೇಶದ ನಾನಾ ಕಡೆಯಿಂದ ರಾಜ್ಯದ ಮುಖ್ಯಮಂತ್ರಿಗಳು ಸಂಸದರು, ಸಚಿವರುಗಳು, ಶಾಸಕರು, ಕಾಂಗ್ರೆಸ್
ಅಭಿಮಾನಿಗಳು ಕಾರ್ಯಕರ್ತರು ಮುಖಂಡರು, ಗ್ರಾಮ ಪಂಚಾಯಿತಿ ಸದಸ್ಯರಿಂದ ಹಿಡಿದು ಎಲ್ಲರು ಭಾಗವಹಿಸಲಿದ್ದಾರೆ ಎಂದರು.
ಅಂದಿನ ದಿನಮಾನದಲ್ಲಿ ಎಐಸಿಸಿ ಅಧ್ಯಕ್ಷರಾಗಿ ಮಹಾತ್ಮ ಗಾಂಧಿಯವರಾಗಿದ್ದರು ಇಂದು ನಮ್ಮವರೆ ಆದ ಮಲ್ಲಿಕಾರ್ಜನ
ಖರ್ಗೆರವರು ಅಧ್ಯಕ್ಚರಾಗಿದ್ದಾರೆ. ಅವರ ಅಧ್ಯಕ್ಷತೆಯಲ್ಲಿ ಏಐಸಿಸಿ ಅಧಿವೇಶನ ನಡೆಯಲಿದೆ. ಇದು ನಮ್ಮ ಕರ್ನಾಟಕದವರಿಗೆ
ಸಂತೋಷದ ಸಂಗತಿಯಾಗಿದೆ. ಈ ಹಿನ್ನಲೆಯಲ್ಲಿ ಸಭೆಯಲ್ಲಿ ಎಲ್ಲರು ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು
ಯಶಸ್ವಿಗೂಳಿಸಬೇಕಿದೆ. ಈ ಕಾರ್ಯಕ್ರಮಕ್ಕೆ ಯಾವುದೇ ರೀತಿಯಲ್ಲಿ ಹಣವನ್ನು ನೀಡಿ ಜನತೆಯನ್ನು ಕರೆದುಕೊಂಡು ಬರಬೇಡಿ
ಎಲ್ಲರ ಸಹಾ ಸ್ವಯಂ ಆಗಿ ಬರಬೇಕಿದೆ ಎಂದು ಕರೆ ನೀಡಿದರು.
ಮುಂದಿನ ದಿನದಲ್ಲಿ ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತನ್ನು ನೀಡಲಾಗುವುದು ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಬೇಕಿದೆ
ಏಕೆಂದರೆ ತಾ.ಪಂ.ಜಿ.ಪಂ. ಚುನಾವಣೆಗಳು ಬರಲಿವೆ ಇದಕ್ಕೆ ನಮ್ಮ ಪಕ್ಷದ ಕಾರ್ಯಕರ್ತರನ್ನು ಸನ್ನದ್ದಗೂಳಿಸಬೇಕಿದೆ ಈ
ಹಿನ್ನಲೆಯಲ್ಲಿ ಪಕ್ಷವನ್ನು ಸದೃಢಗೂಳಿಸಬೇಕಿದೆ. ಚಿತ್ರದುರ್ಗ ವಿಧಾನಸಭೆ ವ್ಯಾಪ್ತಿಗೆ ಬರುವಂತ ತಾ.ಪಂ. ಜಿ.ಪಂ.ಯ ಸ್ಥಾನಗಳನ್ನು
ಪಕ್ಷದ ಅಭ್ಯರ್ಥಿಗಳು ಗೆಲ್ಲಬೇಕಿದೆ. ಇದಕ್ಕೆ ಅಗತ್ಯವಾದ ಪಂಚಾಯಿತಿವಾರು ಇಲ್ಲವೇ ಹೋಬಳಿವಾರು ಸಭೆಯನ್ನು ಮಾಡುವುದರ
ಮೂಲಕ ಸಣ್ಣ-ಪುಟ್ಟ ಸಮಸ್ಯೆಗಳನ್ನು ಪರಿಹಾರ ಮಾಡಲಾಗುವುದು ನಮ್ಮ ಕೈಲಿ ಆದರೆ ನಾವೇ ಸಮಸ್ಯೆಯನ್ನು ಪರಿಹಾರ
ಮಾಡೋಣ ಇಲ್ಲವೆ ಇಲ್ಲವೇ ಪಕ್ಷದ ಮುಖಂಡರ ಬಳಿ ಪರಿಹಾರವನ್ನು ಮಾಡೋಣ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ತಾಜ್‍ಪೀರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹನುಮಲಿ ಷಣ್ಮುಖಪ್ಪ, ಡಾ.ತಿಪ್ಪೇಸ್ವಾಮಿ,
ಕಾರ್ಯಾಧ್ಯಕ್ಷರಾದ ಹಾಲಸ್ವಾಮಿ, ಬ್ಲಾಕ್ ಅಧ್ಯಕ್ಷರಾದ ಲಕ್ಷ್ಮೀಕಾಂತ, ಗ್ರಾಮಾಂತರ ಅಧ್ಯಕ್ಷರಾದ ಪ್ರಕಾಶ್, ಮಹಿಳಾ ಕಾಂಗ್ರೆಸ್
ಅಧ್ಯಕ್ಷರಾದ ಗೀತಾ ನಂದಿನಿ ಗೌಡ, ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್, ಸರ್ಕಾರದ ಗ್ಯಾರೆಂಟಿ ಅನುಷ್ಠಾನದ ಪ್ರಾಧಿಕಾರದ
ಅಧ್ಯಕ್ಷರಾದ ಶಿವಣ್ಣ, ಪ್ರಚಾರ ಸಮಿತಿ ಅಧ್ಯಕ್ಷರಾದ ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ಕುಮಾರ್ ಮೈಲಾರಪ್ಪ,
ಮಹಿಳಾ ಪ್ರಧಾನ ಕಾರ್ಯದರ್ಶಿ ಮುನಿರ ಮುಕಂದರ್, ಓಬಿಸಿ ಅಧ್ಯಕ್ಷ ಎನ್.ಡಿ.ಕುಮಾರ್, ಎಸ್.ಘಟಕದ ಅಧ್ಯಕ್ಷ ಜಯ್ಯಣ್ಣ,
ಮೈನಾರಿಟಿ ಘಟಕದ ಅಧ್ಯಕ್ಷ ಖುದ್ದಸ್, ಡಿಸಿಸಿ ಉಪಾಧ್ಯಕ್ಷ ರವಿಕುಮಾರ್, ಎಸ್.ಟಿ.ಘಟಕದ ಅಧ್ಯಕ್ಷ ಮಂಜುನಾಥ್, ಜಿ.ಪಂ.ಮಾಜಿ
ಸದಸ್ಯ ನರಸಿಂಹ ರಾಜು, ಟಿಪ್ಪು ಖಾಸಿಂ ಆಲಿ, ಜಾಕಿರ್ವ ಹುಸೇನ್, ಚಿದಾನಂದ ಮೂರ್ತಿ, ಸ್ವಾಮಿ, ಅಬ್ದುಲ್ ಪ್ರಕಾಶ್ ನಾಯ್ಕ್,
ಶಶಾಂಕ್ ಮುದಸೀರ್ ಸೇರಿದಂತೆ ಇತರರು ಭಾಗವಹಿಸಿದ್ದರು.