Belly Fat Reducing Tips: ಕಚೇರಿಯಲ್ಲಿನ ನಿಮ್ಮ ಚೆಯರ್ ನಲ್ಲಿಯೇ ಕುಳಿತು ಈ ವ್ಯಾಯಾಮ ಮಾಡಿ ಹೊಟ್ಟೆ ಬೊಜ್ಜು ಕರಗಿಸಿ!

Belly Fat Reducing Tipsಇತ್ತೀಚಿನ ದಿನಗಳಲ್ಲಿ ಬೊಜ್ಜು ಮತ್ತು ಹೊಟ್ಟೆ ಬೆಳೆಯುವ ಸಮಸ್ಯೆ ಸಾಮಾನ್ಯ ಸಮಸ್ಯೆಯಾಗಿ ಪರಿಣಮಿಸಿದೆ. ಹೀಗಿರುವಾಗ ನೀವು ನಿಮ್ಮ ಕಚೇರಿಯ ಆಸನದಲ್ಲಿಯೇ ಕುಳಿತು ಮಾಡಬಹುದಾದ ಕೆಲ ವ್ಯಾಯಾಮಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ,

 

Belly Fat Reducing Tips: ಸ್ಥೂಲಕಾಯ ಮತ್ತು ಹೊಟ್ಟೆ ಬೆಳೆಯುವ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಒಂದು ಸಾಮಾನ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ಕಳಪೆ ಜೀವನಶೈಲಿ, ತಡರಾತ್ರಿಯವರೆಗೆ  ಎಚ್ಚರದಿಂದಿರುವುದು, ಗಂಟೆಗಟ್ಟಲೆ ಒಂದೇ ಸ್ಥಳದಲ್ಲಿ ಕೆಲಸ ಮಾಡುವುದು ಇತ್ಯಾದಿಗಳಿಂದ ಕ್ರಮೇಣ ತೂಕ ಹೆಚ್ಚಾಗುತ್ತದೆ, ಪರಿಣಾಮವಶಾತ್ ಹೊಟ್ಟೆ ಹೊರಬರಲು ಪ್ರಾರಂಭಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕಚೇರಿಗೆ ಹೋಗುವವರು ತೂಕ ಇಳಿಕೆಗಾಗಿ ಗಂಟೆಗಟ್ಟಲೆ ಜಿಮ್ ನಲ್ಲಿ ಬೆವರು ಸುರಿಸಬೇಕಾಗುತ್ತದೆ ಮತ್ತು ಅದಕ್ಕಾಗಿ ಸಮಯ ಹುಡುಕುವುದೇ ಕಷ್ಟಕರವಾಗುತ್ತದೆ. ಬೆಳೆಯುತ್ತಿರುವ ಹೊಟ್ಟೆ ಮತ್ತು ಸ್ಥೂಲಕಾಯ ಸಮಸ್ಯೆಯಿಂದ ಒಂದು ವೇಳೆ ನೀವೂ ಒಕೂದ ತೊಂದರೆಗೊಳಗಾಗಿದ್ದರೆ, ಕಚೇರಿಯಲ್ಲಿನ ನಿಮ್ಮ ಆಸನದ ಮೇಲೆ ಕುಳಿತು ಮಾಡಬಹುದಾದ ಕೆಲವು ವ್ಯಾಯಾಮಗಳ ಕುರಿತು ನಾವು ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ.

ಕಚೇರಿಯ ಆಸನದ ಮೇಲೆ ಕುಳಿತು ಈ ವ್ಯಾಯಾಮಗಳನ್ನು ಮಾಡಿ
ಹ್ಯಾಂಗಿಂಗ್ ಬಾಡಿ ಎಕ್ಸರ್ಸೈಜ್ 

ಹ್ಯಾಂಗಿಂಗ್ ಬಾಡಿ ಎಕ್ಸರ್ಸೈಜ್  ಒಂದು ರೀತಿಯ ವ್ಯಾಯಾಮವಾಗಿದ್ದು, ಇದರಿಂದ ಇಡೀ ದೇಹವು ಟೋನ್ ಆಗಿರುತ್ತದೆ. ಇದನ್ನು ಮಾಡಲು, ಆಸನದ ಎರಡು ನಿಮ್ಮ ತೋಳುಗಳನ್ನು ಇಡಿ. ಇದರ ನಂತರ, ತೋಳುಗಳ ಮೇಲೆ ತೂಕವನ್ನು ಹೆಚ್ಚಿಸುತ್ತ ನಿಮ್ಮ ಮೇಲಕ್ಕೆತ್ತಲು ಪ್ರಯತ್ನಿಸಿ. ಈ ಅವಧಿಯಲ್ಲಿ ನೀವು ಪದೇ ಪದೇ ಕಾಲುಗಳನ್ನು ನೇರಗೊಳಿಸಬೇಕು ಮತ್ತು ಒಳಭಾಗಕ್ಕೆ ತಳ್ಳಲು ನೀವು ಯತ್ನಿಸಬೇಕು ಎಂಬುದನ್ನು ನೆನಪಿನಲ್ಲಿಡಿ. ನಿಮ್ಮ ಕಛೇರಿಯಲ್ಲಿ ನೀವು ಈ ವ್ಯಾಯಾಮವನ್ನು ದಿನಕ್ಕೆ 7 ರಿಂದ 8 ಬಾರಿ ಪುನರಾವರ್ತಿಸಬಹುದು.

ಲೆಫ್ಟ್ ರೈಟ್ ಮೂವ್ಮೆಂಟ್ 
ಹಲವಾರು ಗಂಟೆಗಳ ಕಾಲ ನಿರಂತರವಾಗಿ ಒಂದೇ ಭಂಗಿಯಲ್ಲಿ ಕೆಲಸ ಮಾಡುವುದು ಕೆಲವೊಮ್ಮೆ ಬೆನ್ನು ಮತ್ತು ಬೆನ್ನುನೋವಿನ ಸಮಸ್ಯೆಗಳನ್ನು ಉಂಟುಮಾಡಬಹುದು. ಇಂತಹ ಪರಿಸ್ಥಿತಿಯಲ್ಲಿ, ನೀವು ಪ್ರತಿದಿನ 5 ರಿಂದ 7 ನಿಮಿಷಗಳ ಲೆಫ್ಟ್ ರೈಟ್ ಚಲನೆಯನ್ನು ಮಾಡುವುದರಿಂದ ಬೆನ್ನು ಮತ್ತು ಕುತ್ತಿಗೆ ನೋವಿನಿಂದ ಪರಿಹಾರ ಸಿಗುತ್ತದೆ. ಇದಕ್ಕಾಗಿ, ನಿಮ್ಮ ಕೈಗಳು ಮತ್ತು ಮೇಜಿನ ನಡುವೆ ಸ್ವಲ್ಪ ಅಂತರವನ್ನು ನಿರ್ಮಿಸಿಕೊಳ್ಳಿ. ಈಗ ನಿಮ್ಮ ದೇಹವನ್ನು ಒಮ್ಮೆ ಎಡಕ್ಕೆ ಮತ್ತು ನಂತರ ಬಲಕ್ಕೆ ಸರಿಸಿ. ನೀವು ಈ ವ್ಯಾಯಾಮವನ್ನು 10 ರಿಂದ 12 ಬಾರಿ ಪುನರಾವರ್ತಿಸಬೇಕು. ಹೀಗೆ ಮಾಡುವುದರಿಂದ ಹೊಟ್ಟೆಯ ಕೊಬ್ಬನ್ನು ನೀವು ಕರಗಿಸಬಹುದು.

ಕೋರ್ ಎಕ್ಸರ್ಸೈಜ್
ನಿಮ್ಮ ಬೆನ್ನು ಮತ್ತು ಸ್ನಾಯುಗಳ ನೋವನ್ನು ಕಡಿಮೆ ಮಾಡಲು ಆಸನದ ಮೇಲೆ ಕುಳಿತು ಮಾಡಲಾಗುವ ಕೋರ್ ಎಕ್ಸರ್ಸೈಜ್ ಸಹಾಯ ಮಾಡುತ್ತವೆ. ಈ ವ್ಯಾಯಾಮ ಮಾಡಲು, ಕಾಲುಗಳನ್ನು ಸ್ಟ್ರೆಚ್ ಮಾಡಿ. ಈ ವ್ಯಾಯಾಮದ 4 ಸೆಟ್ಗಳನ್ನು ನೀವು ಪುನರಾವರ್ತಿಸಬಹುದು.

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

Source : https://zeenews.india.com/kannada/lifestyle/simple-exercise-tips-for-belly-fat-reduction-144000

Leave a Reply

Your email address will not be published. Required fields are marked *