ಶ್ರೀಗಂಧದ ಪೇಸ್ಟ್ ಹಣೆಗೆ ಹಚ್ಚುವುದರ ಪ್ರಯೋಜನಗಳು.

ಚಂದನ ಅಥವಾ ಶ್ರೀಗಂಧವನ್ನು, ಸಾವಿರಾರು ವರ್ಷಗಳಿಂದಲೂ ಕೂಡ ಆಯುರ್ವೇದದಲ್ಲಿ ಬಳಸಿಕೊಂಡು ಬರಲಾಗುತ್ತಿರುವಂತಹ ಬಹು ಉಪಯೋಗಿ ಸಾಮಗ್ರಿ. ದೇವರ ಪೂಜೆಯಿಂದ ಹಿಡಿದು, ಸೌಂದರ್ಯ ವೃದ್ಧಿಯವರೆಗೂ ಕೂಡ ಇದರ ಉಪಯೋಗಗಳು ಅಪಾರ! ಇಂದಿನ ಲೇಖನದಲ್ಲಿ ಶ್ರೀಗಂಧದ ಪೇಸ್ಟ್ ಅನ್ನು ಹಣೆಗೆ ಹಚ್ಚುವುದರಿಂದ, ಏನೆಲ್ಲಾ ಪ್ರಯೋಜನಗಳು ಸಿಗುತ್ತವೆ ಎನ್ನುವುದರ ಬಗ್ಗೆ ನೋಡೋಣ ಬನ್ನಿ…

ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಲು, ಅದೇ ರೀತಿ ಮೊಡವೆಗಳನ್ನು ಹೋಗಲಾಡಿಸಿಕೊಳ್ಳಲು ಸಹ ಶ್ರೀಗಂಧದ ಅಥವಾ ಚಂದನದ ಪೇಸ್ಟ್ ಬಳಸುವುದನ್ನು ಕೇಳಿದ್ದೇವೆ. ಈ ಹಿಂದೆಯೂ ಕೂಡ ನಾವು ಹಲವಾರು ಬಾರಿ ಶ್ರೀಗಂಧದ ಸೌಂದರ್ಯದ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದ್ದೇವು. ಇದನ್ನು ಹೊರತುಪಡಿಸಿದರೆ, ದೇವಸ್ಥಾನದಲ್ಲಿ ದೇವರಿಗೆ ಪೂಜೆಯ ಸಂದರ್ಭದಲ್ಲಿ ದೇವರಿಗೆ ಅಲಂಕಾರ ಮಾಡುವ ಮುನ್ನ ಚಂದನದ ಅಭಿಷೇಕವನ್ನು ಮಾಡುತ್ತೇವೆ, ಸಾಮಾನ್ಯವಾಗಿ ಶಿವಲಿಂಗಕ್ಕೆ ಚಂದನದ ಅಭಿಷೇಕ ಮಾಡುವುದನ್ನು ನಾವು ನೋಡಿರುತ್ತೇವೆ.ಇಲ್ಲಾಂದರೆ, ದೇವರಿಗೆ ಅಲಂಕಾರ ಮಾಡುವ ಸಂದರ್ಭದಲ್ಲಿ ಚಂದನ ಹಾಗೂ ಅರಿಶಿನ ಕುಂಕುಮವನ್ನು ಹಚ್ಚುತ್ತೇವೆ

ಇಷ್ಟನ್ನು ಬಿಟ್ಟರೆ ಶ್ರೀಗಂಧದ ಬಗ್ಗೆ ನಮಗೆ ಅಷ್ಟಾಗಿ ಮಾಹಿತಿ ಸಾಮಾನ್ಯವಾಗಿ ಇರುವುದಿಲ್ಲ. ಆದರೆ ಸಂಶೋಧನೆಗಳು ಹೇಳುತ್ತಿರುವ ಹಾಗೆ ಶ್ರೀಗಂಧವನ್ನು ಈ ಕೆಳಗಿನ ಅನೇಕ ಆರೋಗ್ಯ ಪ್ರಯೋಜನಗಳಿಗಾಗಿ ಉಪಯೋಗಿಸಬಹುದಂತೆ! ಅದು ಹೇಗೆಂದು ನೋಡೋಣ ಬನ್ನಿ..

ಶ್ರೀಗಂಧದ ಪೇಸ್ಟ್ ಹಣೆಗೆ ಹಚ್ಚುವುದರ ಪ್ರಯೋಜನಗಳು

ಶ್ರೀಗಂಧದ ಪೇಸ್ಟ್ ಹಣೆಗೆ ಹಚ್ಚುವುದರ ಪ್ರಯೋಜನಗಳು
  • ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು,ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಹಣೆಯ ಮೇಲೆ, ಇಲ್ಲಾಂದ್ರೆ ಮೈಕೈಗಳ ರಟ್ಟೆಯ ಮೇಲೆ ಶ್ರೀಗಂಧದ ಪೇಸ್ಟ್ ಹಚ್ಚುವುದನ್ನು ನಾವು ನೋಡಿರುತ್ತೇವೆ. ಇದು ಅವರು ಅನುಸರಿಸುತ್ತಿರುವ ಸಂಪ್ರದಾಯವನ್ನು ಸೂಚಿಸುತ್ತದೆ.
  • ಆದರೆ ವೈಜ್ಞಾನಿಕ ದೃಷ್ಟಿಯಲ್ಲಿ ನೋಡುವುದಾದ್ರೆ ಇದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ! ಇದೇ ಕಾರಣಕ್ಕೆ ನೀವು ಕೂಡ ಹಣೆಯ ಮೇಲೆ ಶ್ರೀಗಂಧದ ಪೇಸ್ಟ್ ಅನ್ನು ಹಚ್ಚಿಕೊಳ್ಳುವ ಅಭ್ಯಾಸ ಇಟ್ಟುಕೊಳ್ಳ ಬೇಕು.
  • ಏಕೆಂದರೆ ಇದರಲ್ಲಿ ಸಿಗುವ ಅನೇಕ ಬಗೆಯ ಕಿಣ್ವಗಳು ಮತ್ತು ಪೋಷಕಾಂಶ ಗಳು ದೇಹದ ಆರೋಗ್ಯವನ್ನು ವೃದ್ಧಿಸಲು ನೆರವಾಗುತ್ತದೆ. ಅದರಲ್ಲೂ ಪ್ರಮುಖವಾಗಿ ಶ್ರೀಗಂಧದ ಪೇಸ್ಟ್ ಅನ್ನು ಹಣೆಗೆ ಹಚ್ಚುವುದ ರಿಂದ ಅತಿಸಾರ, ಹೊಟ್ಟೆ ನೋವು ಮುಂತಾದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾ ಗುತ್ತವೆ ಎನ್ನಲಾಗುತ್ತದೆ. ಇನ್ನು ಶ್ರೀಗಂಧದ ಎಣ್ಣೆ ನಮ್ಮ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ ಎಂದು ತಜ್ಞರು ಸಲಹೆ ನೀಡುತ್ತಾರೆ…

ಬಾಡಿ ಹಿಟ್ ಕಡಿಮೆ ಮಾಡಲು ನೆರವಾಗುತ್ತದೆ

ಬಾಡಿ ಹಿಟ್ ಕಡಿಮೆ ಮಾಡಲು ನೆರವಾಗುತ್ತದೆ

ಬೇಸಿಗೆಯ ದಿನಗಳಲ್ಲಿ ದೇಹದ ಉಷ್ಣತೆ ಹೆಚ್ಚಾಗುವುದು ನಮಗೆಲ್ಲಾ ಗೊತ್ತೇ ಇದೆ. ಈ ಸಮಯದಲ್ಲಿ ಬಾಡಿ ಹೀಟ್ ಸಮಸ್ಯೆಯಿಂದ ಹೆಚ್ಚಿನವರು ಬಳಲುತ್ತಿರುತ್ತಾರೆ. ಹೀಗಾಗಿ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು, ಹಣೆಯ ಮೇಲೆ ಶ್ರೀಗಂಧದ ಪೇಸ್ಟ್ ಹಚ್ಚಿದರೆ ಒಳ್ಳೆಯದು ಎನ್ನುತ್ತಾರೆ ತಜ್ಞರು. ಇನ್ನು ಸಾಮಾನ್ಯ ಜ್ವರ ಇದ್ದರೂ ಸಹ, ಹಣೆಯ ಮೇಲೆ ಶ್ರೀಗಂಧದ ಪೇಸ್ಟ್ ಹಚ್ಚುವುದರಿಂದ ಸಾಕಷ್ಟು ಪರಿಹಾರ ಸಿಗುತ್ತದೆಯಂತೆ!

ನಿದ್ರಾಹೀನತೆ ಸಮಸ್ಯೆ ದೂರವಾಗುತ್ತದೆ

ನಿದ್ರಾಹೀನತೆ ಸಮಸ್ಯೆ ದೂರವಾಗುತ್ತದೆ

ಅತಿಯಾದ ಒತ್ತಡದ ಜೀವನಶೈಲಿ ಹಾಗೂ ಮಾನಸಿಕ ನೆಮ್ಮದಿ ಇಲ್ಲದಿರು ವವರಲ್ಲಿ ಇನ್‌ಸೋಮ್ನಿಯಾ ಅಥವಾ ನಿದ್ರಾಹೀನತೆಯ ಸಮಸ್ಯೆ ಇಂದಿನ ದಿನಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಈ ಕಾಯಿಲೆಯಿಂದ ಬಳಲುತ್ತಿ ರುವವರಿಗೆ ಸರಿಯಾದ ನಿದ್ದೆ ಬರುವುದಿಲ್ಲ.ಅಲ್ಲದೆ, ಬೆಳಗ್ಗೆ ಎದ್ದ ಬಳಿಕವೂ ಉಲ್ಲಾಸಿತರಾಗಿರುವುದಿಲ್ಲ. ಹೀಗಾಗಿ ಈ ಸಮಸ್ಯೆಯಿಂದ ಬಳಲುತ್ತಿರು ವವರು ಶ್ರೀಗಂಧದ ಪೇಸ್ಟ್ ಹಚ್ಚುವುದರಿಂದ, ನಿದ್ರಾಹೀನತೆ ಸಮಸ್ಯೆಯಿಂದ ದೂರವಿರಬಹುದು.

ನಕಾರಾತ್ಮಕ ಆಲೋಚನೆಗಳು ದೂರವಾಗಿ ಏಕಾಗ್ರತೆ ಹೆಚ್ಚಾಗುತ್ತದೆ

ನಕಾರಾತ್ಮಕ ಆಲೋಚನೆಗಳು ದೂರವಾಗಿ ಏಕಾಗ್ರತೆ ಹೆಚ್ಚಾಗುತ್ತದೆ

ಹಣೆಯ ಮೇಲೆ ಶ್ರೀಗಂಧದ ಪೇಸ್ಟ್ ಹಚ್ಚುವುದರಿಂದ, ದೇಹದ ಉಷ್ಣತೆ ಶಾಂತಗೊಳ್ಳುತ್ತದೆ ಹಾಗೂ ಮಾನಸಿಕ ಒತ್ತಡವು ಕೂಡ ಕಡಿಮೆಯಾ ಗುತ್ತದೆ. ಅಲ್ಲದೆ ನಕಾರಾತ್ಮಕ ಶಕ್ತಿಯನ್ನು ಮತ್ತು ನಕಾರಾತ್ಮಕ ಆಲೋಚನೆ ಗಳನ್ನು ಹೋಗಲಾಡಿಸುವ ಹಾಗು ಏಕಾಗ್ರತೆಯನ್ನು ಹೆಚ್ಚಿಸಲು ನೆರವಾಗುತ್ತದೆ. ನಿಮಗೆ ಗೊತ್ತಿರಲಿ ಹುಬ್ಬುಗಳ ಮಧ್ಯಭಾಗ, ಮೆದುಳಿನಲ್ಲಿ ನಡೆಯುವ ಹಲವಾರು ಪ್ರಕ್ರಿಯೆಗಳ ಪ್ರತಿರೂಪವಾಗಿದೆ ಎಂದು ಯೋಗ ತಜ್ಞರು ಕೂಡ ಹೇಳುತ್ತಾರೆ. ಹೀಗಾಗಿ ಹಣೆಗೆ ಚಂದನದ ಪೇಸ್ಟ್ ಹಚ್ಚುವು ದರಿಂದ ಸಾಕಷ್ಟು ಪ್ರಯೋಜನಗಳು ಪಡೆದುಕೊಳ್ಳಬಹುದು.

ಮೆದುಳಿನ ಆರೋಗ್ಯಕ್ಕೂ ಕೂಡ ಒಳ್ಳೆಯದು

ಮೆದುಳಿನ ಆರೋಗ್ಯಕ್ಕೂ ಕೂಡ ಒಳ್ಳೆಯದು

ಹಣೆಯ ಮೇಲೆ ಶ್ರೀಗಂಧದ ಪೇಸ್ಟ್ ಹಚ್ಚಿದಾಗ, ಮಾನಸಿಕ ಒತ್ತಡಕ್ಕೆ ಬರುತ್ತದೆ, ನಿದ್ರಾಹೀನತೆ ಸಮಸ್ಯೆ ದೂರವಾಗುತ್ತದೆ, ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಮತ್ತು ಅದರ ಸುವಾಸನೆಯು ನರಮಂಡಲವನ್ನು ಶಾಂತ ಗೊಳಿಸುತ್ತದೆ. ಪ್ರಮುಖವಾಗಿ ಇದರಲ್ಲಿರುವ ಶಮನಕಾರಿ ಮತ್ತು ಉರಿಯೂತ ನಿವಾರಕ ಗುಣಗಳು ಒಟ್ಟಾರೆ ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ.

Vijayakarnataka

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *