ಬೇಸಿಗೆಗೆ ಬೆಸ್ಟ್ ರಿಮೋಟ್ ಕಂಟ್ರೋಲ್ ಫ್ಯಾನ್..‌ ಅಮೆಜಾನ್‌ನಲ್ಲಿ ಅತಿ ಕಡಿಮೆ ಬೆಲೆಗೆ ಲಭ್ಯ, ಇಂದೇ ಖರೀದಿಸಿ!

Remote Control Ceiling Fans: ಬೇಸಿಗೆಯ ಸಮೀಪದಲ್ಲಿ ನಿಮ್ಮ ಮನೆಯನ್ನು ತಂಪಾಗಿಡುತ್ತದೆ ಈ ರಿಮೋಟ್ ಕಂಟ್ರೋಲ್ ಫ್ಯಾನ್. Amazon ನಲ್ಲಿ ಈ ರಿಮೋಟ್ ಕಂಟ್ರೋಲ್ ಸೀಲಿಂಗ್ ಫ್ಯಾನ್‌ ಅತಿ ಕಡಿಮೆ ಬೆಲೆಗೆ ಲಭ್ಯವಿದೆ. 

  • ರಿಮೋಟ್ ಕಂಟ್ರೋಲ್ ಫ್ಯಾನ್
  • ಬೆಸ್ಟ್‌ ರಿಮೋಟ್ ಕಂಟ್ರೋಲ್ ಫ್ಯಾನ್ ಯಾವುದು?
  • ಅತಿ ಕಡಿಮೆ ಬೆಲೆಗೆ ಮೋಟ್ ಕಂಟ್ರೋಲ್ ಫ್ಯಾನ್

Ceiling Fan With Remote Control Price: ಬೇಸಿಗೆ ಕಾಲ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಕಲ್ಲಂಗಡಿ, ಸೌತೆಕಾಯಿಯಂತಹ ಹಣ್ಣುಗಳು ಇದೀಗ ರಸ್ತೆಗಳಲ್ಲಿ ನಿಮ್ಮ ಕಣ್ಣುಗಳನ್ನು ಸೆಳೆಯಲು ಪ್ರಾರಂಭಿಸಿರಬಹುದು. ಮಧ್ಯಾಹ್ನದ ಬಿಸಿಲಿನಲ್ಲಿ ನೀವು ಹೊರಗೆ ಹೋಗಲು ಸಹ ಸಾಧ್ಯವಿಲ್ಲ ಮತ್ತು ನೀವು ಮನೆಯಲ್ಲಿ ಬಿಸಿಲ ಬೇಗೆಯನ್ನು ಅನುಭವಿಸಬಹುದು. 

ಬೇಸಿಗೆಯಲ್ಲಿ ದೇಹವನ್ನು ತೇವಾಂಶದಿಂದ ಇಡಲು ಪ್ರತಿಯೊಬ್ಬರೂ ಸಾಕಷ್ಟು ನೀರು ಮತ್ತು ಹಣ್ಣಿನ ರಸವನ್ನು ಕುಡಿಯಬೇಕು ಎಂದು ವೈದ್ಯರು ಶಿಫಾರಸು ಮಾಡುತ್ತಾರೆ. ಅಲ್ಲದೆ, ಬೇಸಿಗೆಯಲ್ಲಿ ತಂಗಾಳಿ ಬೀಸುವ ಜಾಗದಲ್ಲಿ ಕೂರಲು ಪ್ರತಿಯೊಬ್ಬರು ಇಷ್ಟಪಡುತ್ತಾರೆ. ಅನೇಕ ಜನರು ಬೇಸಿಗೆ ಬರುವ ಮುನ್ನವೇ ತಮ್ಮ ಮನೆಗೆ ಹೊಸ ಎಸಿ ಖರೀದಿಸುತ್ತಾರೆ.

ಎಸಿ ಇದ್ದರೆ ಹೆಚ್ಚಿನ ವಿದ್ಯುತ್ ಬಿಲ್ ಕಟ್ಟಬೇಕಾದ ಟೆನ್ಷನ್‌ ಕಾಡಬಹುದು. ಅಲ್ಲದೇ ಎಸಿ ಗಾಳಿಯು ಕೆಲವರ ದೇಹಕ್ಕೆ ಸರಿಹೊಂದುವುದಿಲ್ಲ. ಕೆಲವು ಆರೋಗ್ಯ ಸಮಸ್ಯೆ ಇರುವವರು ಎಸಿ ರೂಮ್‌ನಲ್ಲಿ ಮಲಗಬಾರದು. ಹೀಗಾಗಿ ಅವರು ಫ್ಯಾನ್ ಗಾಳಿಯಲ್ಲಿ ಮಲಗುತ್ತಾರೆ.

ಮುಂಚೆಲ್ಲ ಫ್ಯಾನ್‌ ತಿರುಗುವಿಕೆ ಹೆಚ್ಚು ಕಡಿಮೆ ಮಾಡಲು, ಸ್ವಿಚ್‌ ಬೋರ್ಡ್‌ನಲ್ಲಿ ಇಂದು ಕಂಟ್ರೋಲರ್‌ ಇರುತ್ತಿತ್ತು. ಆದರೆ ಈಗ ರಿಮೋಟ್ ಕಂಟ್ರೋಲ್ ಸೀಲಿಂಗ್ ಫ್ಯಾನ್‌ಗಳು ಬಂದಿವೆ. ರಿಮೋಟ್‌ನಿಂದ ನೀವು ನಿಮ್ಮ ಫ್ಯಾನ್‌ ಅನ್ನು ಕುಳಿತಲ್ಲೇ ನಿಯಂತ್ರಿಸಬಹುದು. ಅನೇಕ ರಿಮೋಟ್ ಕಂಟ್ರೋಲ್ ಸೀಲಿಂಗ್ ಫ್ಯಾನ್‌ಗಳು ಪ್ರಸ್ತುತ ಅಮೆಜಾನ್‌ನಲ್ಲಿ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. 

ಆಟಂಬರ್ಗ್ ಫ್ಯಾನ್‌

ಆಟಂಬರ್ಗ್ ಫ್ಯಾನ್‌ನ ವಿನ್ಯಾಸವು ಸೊಗಸಾಗಿದೆ. ಅಲ್ಲದೇ ಸಾಕಷ್ಟು ವಿಶಿಷ್ಟವಾಗಿದೆ. ವಿಶೇಷವಾಗಿ ಈ ಫ್ಯಾನ್‌ನಲ್ಲಿ ಎಲ್ಇಡಿ ಬಲ್ಬ್‌ ಗಳನ್ನು ಹಾಕಲಾಗಿದೆ. ಈ ವೈಶಿಷ್ಟ್ಯವು ಗ್ರಾಹಕರಿಗೆ ತುಂಬಾ ಆಕರ್ಷಕವಾಗಿದೆ. ಫ್ಯಾನ್‌ನ ಬ್ಲೇಡ್‌ಗೆ ಹೊಳಪು ನೀಡಿರುವುದನ್ನು ಕಾಣಬಹುದು. ಇದನ್ನು ಐಆರ್ ರಿಮೋಟ್ ಮೂಲಕ ನಿಯಂತ್ರಿಸಬಹುದು. ಇದು ಟೈಮರ್, ಸ್ಲೀಪ್ ಮತ್ತು ಬೂಸ್ಟ್ ಮೋಡ್‌ಗಳನ್ನು ಸಹ ಹೊಂದಿದೆ. ನೀವು ಅದನ್ನು ಕೇವಲ ಒಂದು ಕ್ಲಿಕ್‌ನಲ್ಲಿ ಬಳಸಬಹುದು.

ಈ ಫ್ಯಾನ್ 350 RPM ವೇಗದಲ್ಲಿ ಗಾಳಿಯನ್ನು ಉತ್ಪಾದಿಸುತ್ತದೆ. ಇದು 65 ಪ್ರತಿಶತ ಕಡಿಮೆ ವಿದ್ಯುತ್ ಅನ್ನು ಬಳಸುತ್ತದೆ ಮತ್ತು 1 ವರ್ಷದ ವಾರಂಟಿಯೊಂದಿಗೆ ಬರುತ್ತದೆ. Amazon ನಲ್ಲಿ ಇದರ ಬೆಲೆ 3,499 ರೂ. 

ಹ್ಯಾವೆಲ್ಸ್ ಸೇವಿಂಗ್ಸ್ ಸೀಲಿಂಗ್ ಫ್ಯಾನ್

ಹ್ಯಾವೆಲ್ಸ್ ಉತ್ಪನ್ನಗಳನ್ನು ಅನೇಕ ಜನರು ಬಳಸುತ್ತಾರೆ. ಹ್ಯಾವೆಲ್ಸ್‌ನ ಈ ರಿಮೋಟ್ ಕಂಟ್ರೋಲ್ ಫ್ಯಾನ್‌ನಲ್ಲಿ ಇಂಡಕ್ಷನ್ ಮೋಟಾರ್ ಅನ್ನು ಒದಗಿಸಲಾಗಿದೆ. ಅದರ ಮೇಲೆ ಸುಲಭವಾಗಿ ಧೂಳು ಬೀಳುವುದಿಲ್ಲ. ಇದಕ್ಕೆ ಮೋಟಾರ್ ಪೇಂಟ್ ಫಿನಿಶ್ ನೀಡಲಾಗಿದೆ. ಇದು ನಿಮಗೆ ವಿದ್ಯುತ್ ಬಿಲ್‌ನ್ನು ಸಹ ಉಳಿಸುತ್ತದೆ. Amazon ನಲ್ಲಿ ಈ ಫ್ಯಾನ್ ಬೆಲೆ 3,048 ರೂ.

ಕ್ರೋಂಪ್ಟನ್ ಎನರ್ಜಿನ್ ಕ್ರೋಮೇರ್ ಸೀಲಿಂಗ್ ಫ್ಯಾನ್ 

ಕ್ರಾಂಪ್ಟನ್ ಕಂಪನಿಯ ಈ ರಿಮೋಟ್ ಕಂಟ್ರೋಲ್ ಫ್ಯಾನ್ 5 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಅಂದರೆ, ಇದು ಅತ್ಯಂತ ಕಡಿಮೆ ವಿದ್ಯುತ್‌ನ್ನು ಬಳಸುತ್ತದೆ. ರಿಮೋಟ್ ಮೂಲಕ ಇದರ ವೇಗವನ್ನು ಹೆಚ್ಚಿಸಬಹುದು ಮತ್ತು ಕಡಿಮೆ ಮಾಡಬಹುದು. ಇದು 28W ಹೈ ಸ್ಪೀಡ್ ಮೋಟಾರ್ ಹೊಂದಿದೆ. ಇದು 350 RPM ವೇಗದಲ್ಲಿ ಗಾಳಿಯನ್ನು ತಲುಪಿಸುತ್ತದೆ ಎಂದು ಹೇಳಲಾಗುತ್ತದೆ. ಈ ಫ್ಯಾನ್ ಸುಲಭವಾಗಿ ತುಕ್ಕು ಹಿಡಿಯುವುದಿಲ್ಲ. ಇದು 5 ವರ್ಷಗಳ ವಾರಂಟಿಯೊಂದಿಗೆ ಬರುತ್ತದೆ. ನೀವು ಇದನ್ನು ಅಮೆಜಾನ್‌ನಿಂದ 3,298 ರೂ.ಗೆ ಖರೀದಿಸಬಹುದು.  

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *