ಸಮಗ್ರ ಸುದ್ದಿ ಸೆಪ್ಟೆಂಬರ್ 26, ಭೀಮಸಮುದ್ರ ಗ್ರಾಮದ ಒಳಗಡೆ ಲಾರಿ ಬಿಡುವುದಿಲ್ಲ ಎಂದು ಆಕ್ರೋಶಗೊಂಡ ಗ್ರಾಮಸ್ಥರು.
ಭೀಮಸಮುದ್ರ ರೈತ ಸಂಘ ಇಂದಿನಂತೆ ಇಂದು ರೈತರು ಹಾಗೂ ಮಹಿಳೆಯರು ಪ್ರತಿಭಟನ ಜಾಗಕ್ಕೆ ಆಗಮಿಸಿದ್ದರು.

ಪೊಲೀಸ ಅಧಿಕಾರಿಗಳ ಆಗಮಿಸಿ 15 ಜನ ರೈತರನ್ನು ಪೊಲೀಸ್ ಅರೆಸ್ಟ್ ಮಾಡಿ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಗ್ರಾಮದ ಮಹಿಳೆಯರು ಆಗಮಿಸಿ ಪೊಲೀಸ್ ಸ್ಟೇಷನ್ ಕರೆದುಕೊಂಡು ಹೋಗಲು ನಾವು ಬಿಡುವುದಿಲ್ಲ ಎಂದು ಪ್ರತಿಭಟನೆ ನಡೆಸಿದರು
ಗ್ರಾಮದೊಳಗೆ ಲಾರಿಗಳ ಸಂಚಾರ ಮಾಡುವುದನ್ನು ನಿಲ್ಲಿಸಬೇಕು ಇಲ್ಲದಿದ್ದರೆ ತೀವ್ರವಾದ ಪ್ರತಿಭಟನೆ ನಡೆಸುತ್ತೇವೆ ಎಂದು ಗ್ರಾಮದ ಮಹಿಳೆಯರು ಹಾಗೂ ಗ್ರಾಮಸ್ಥರು ತೀವ್ರವಾಗಿ ಖಂಡಿಸಿದ್ದಾರೆ
V ಪಾಳ್ಯ ಗ್ರಾಮದ 80 ವರ್ಷದ ನಾಗಮ್ಮ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿ. ಲಾರಿ ಸಂಚಾರದಿಂದ ಬಹಳಷ್ಟು ತೊಂದರೆ ಆಗುತ್ತಿದೆ ವಿ ಪಾಳ್ಯ ಗ್ರಾಮದ ಒಳಗಡೆ ಅಂಬುಲೆಸ್ ಬರುವುದಿಲ್ಲ ರಸ್ತೆಯಲ್ಲಿ ಸುಮಾರು 50ರಿಂದ 100 ಜನ ಬಿದ್ದಿದ್ದಾರೆ ಆದರೂ ಕೂಡ ರಸ್ತೆ ಸರಿಪಡಿಸಿಲ್ಲ ಲಾರಿ ಸಂಚಾರ ಬೇಡವೇ ಬೇಡ ದಯಮಾಡಿ ಲಾರಿ ಸಂಚಾರ ನಿಲ್ಲಿಸಬೇಕು ಎಂದು ಕಳವಳ ವ್ಯಕ್ತಪಡಿಸಿದರು
ಗ್ರಾಮದ ಮಹಿಳೆ ರೇಖಾ ಮಾತನಾಡಿ . ಗ್ರಾಮದ ಒಳಗಡೆ ಲಾರಿ ಸಂಚಾರದಿಂದ ಗ್ರಾಮದ ಒಳಗಡೆ ಕಾಯಿಲೆಗಳು ಹೆಚ್ಚಾಗುತ್ತಿವೆ ಮನೆ ಒಳಗಡೆ ಊಟ ಮಾಡುವ ಆಹಾರದಲ್ಲಿ ದೂಳು ಹೆಚ್ಚಾಗಿ ಕಾಣುತ್ತದೆ ಲಾರಿ ಸಂಚಾರದಿಂದ ಶಾಲಾ ಮಕ್ಕಳಿಗೆ ತುಂಬಾ ತೊಂದರೆಯಾಗುತ್ತದೆ ಲಾರಿ ಸಂಚಾರಿಸಲು ಕರಿಡಾರ್ ಯೋಜನೆಯನ್ನು ಮಾಡಿಕೊಂಡು ಓಡಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು
ಭೀಮಸಮುದ್ರ ರೈತ ಸಂಘದ ಅಧ್ಯಕ್ಷರಾದ ಶಂಕ್ರಮೂರ್ತಿ ಮಾತನಾಡಿ. ತಡರಾತ್ರಿ 100 ಲಾರಿಗಳನ್ನು ಲೋಡಾಗಿ ಬಂದಿವೆ ರಸ್ತೆಯಲ್ಲಿ ನಿಲ್ಲಿಸಿದ್ದಾರೆ ನಾವು ಪ್ರತಿಭಟನೆ ಮಾಡುವಾಗ 15 ಜನ ರೈತರನ್ನು ಪೊಲೀಸ್ ಜಿಪಿನಲ್ಲಿ ಹತ್ತಿಸಿಕೊಂಡು ಪೊಲೀಸ್ ಠಾಣೆಗೆ ಕರೆದೊಯ್ಯಲು ಪ್ರಯತ್ನಿಸಿದರು ರಸ್ತೆ ಮಧ್ಯದಲ್ಲಿ ಗ್ರಾಮದ ಮಹಿಳೆಯರು ಆಗಮಿಸಿ ಕರೆದುಕೊಂಡು ಹೋಗಲು ಬಿಡುವುದಿಲ್ಲ ಬಿಡುವುದಿಲ್ಲ ಎಂದು ಹೇಳಿದರು ಕರೆದುಕೊಂಡು ಹೋಗುವುದಾದರೆ ನಾವು ಕೂಡ ಜೊತೆಯಲ್ಲಿ ಬರುತ್ತೇವೆ.ಗ್ರಾಮದಲ್ಲಿ 50 ದಿನಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಗ್ರಾಮದ ಮಹಿಳೆಯರು ಒಗ್ಗಟ್ಟಾಗಿ ಬಂದಿದ್ದಾರೆ ಬಾಳ ಸಂತೋಷಕರ ನಮ್ಮ ಉದ್ದೇಶ ಗ್ರಾಮದ ಒಳಗಡೆ ಲಾರಿ ಸಂಚಾರ ಬೇಡ ಎಂದು ತಿಳಿಸಿದರು.
ರೈತ ಸಂಘದ ಸದಸ್ಯ ಡಿ ಎಂ ಪ್ರಸನ್ನ ಕುಮಾರ್ ಮಾತನಾಡಿ.ಸುಪ್ರೀಂ ಕೋರ್ಟ್ ಆದೇಶದಂತೆ ಇದ್ದರೂ ಗ್ರಾಮದ ಒಳಗಡೆ ಲಾರಿ ಸಂಚಾರಿಸುತ್ತೇವೆ
ಗ್ರಾಮದ ಒಳಗಡೆ ಲಾರಿಗಳು ಓಡಾಡಬಾರದು ದೌರ್ಜನ್ಯದ ಮೂಲಕ ನಮ್ಮನ್ನು ಇದು ಎರಡನೇ ಬಾರಿಗೆ ಅರೆಸ್ಟ್ ಮಾಡಿ ಕರೆದುಕೊಂಡು ಹೋಗುತ್ತಿರುವುದು ನಾವು ಮಾಡುತ್ತಿರುವುದು ಸಮಾಜ ಸೇವೆ ಕೆಲಸ ಇದರಲ್ಲಿ ಯಾವುದೇ ರೀತಿಯ ವೈಯಕ್ತಿಕ ನಮ್ಮ ಮನೆಗೆ ಪ್ರತಿಭಟನೆ ಮಾಡುತ್ತಿಲ್ಲ ಶಾಸಕರು ಜಿಲ್ಲಾಧಿಕಾರಿಗಳು ಇದರ ಬಗ್ಗೆ ಯಾವುದೇ ರೀತಿಯ ಗಮನಹರಿಸದಿರುವುದು ವಿಷಾದಕರ ಸಂಗತಿ ಪ್ರತಿಭಟನೆ ನಡೆಸುತ್ತಿರುವುದು ಗ್ರಾಮದ ಒಳಿತಿಗಾಗಿ ಇದನ್ನು ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು ಎಂದು ಹೇಳಿದರು.
ಪ್ರತಿಭಟನ ಜಾಗಕ್ಕೆKSRP ತುಕಡಿ ಆಗಮಿಸಿತ್ತು ಸುಮಾರು 50ಕ್ಕೂ ಪೊಲೀಸರು ಬೆಳಗಿನ ಇಂದ ಕಾರ್ಯನಿರ್ಸಿದ್ದಾರೆ ಇದೇ ಸಂದರ್ಭದಲ್ಲಿ
ರೂರಲ್ ಪೊಲೀಸ್ ಸ್ಟೇಷನ್ ಸಬ್ಇನ್ಸ್ಪೆಕ್ಟರ್ ಬಾಲಚಂದ್ರ ನಾಯಕ್ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರು ತದನಂತರ ಗ್ರಾಮದ ರೈತರು ಲಾರಿ ಸಂಚರಿಸುವ ಮಾರ್ಗದ ನಕ್ಷೆ ತೋರಿಸಿ ಈ ಮಾರ್ಗದಲ್ಲಿ ಲಾರಿ ಸಂಚರಿಸಲು ಆದೇಶವಿಲ್ಲ ಆದರೂ ಕೂಡ ಸಂಚರಿಸುತ್ತಿವೆ ಲಾರಿ ಓಡಾಡಲು ನಾವು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಪ್ರತಿಭಟನೆ ಮುಂದುವರಿಸಿದ್ದರು
ಪ್ರತಿಭಟನ ಜಾಗದಲ್ಲಿ ರೈತರು ಹಾಗೂ ಗ್ರಾಮಸ್ಥರುಗಳಾದ ವೀರೇಶ್ ರಘು ನಿರಂಜನ್ ಪಾಳ್ಯ ಸ್ವಾಮಿ ಚಂದ್ರಮ್ಮ ಲಲಿತಮ್ಮ ಶಾಂತಮ್ಮ ಕೆಂಚ್ವೀರಪ್ಪ ಸುರೇಶ್ ತಿಪ್ಪೇಸ್ವಾಮಿ ರತ್ನಮ್ಮ ಶಾರದಮ್ಮ ಎಲ್ಲಮ್ಮ ಲಕ್ಷ್ಮಿ ದೇವಿ ಕುಮಾರ್ ರೇಖಾ ಗಿರೀಶ್ ಕುಮಾರ್ 500ಕ್ಕೂ ಹೆಚ್ಚು ಜನ ಗ್ರಾಮಸ್ಥರುಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.