ಭೀಮಸಮುದ್ರ:
ವರದಿ ಮತ್ತು ಫೋಟೋ ಕೃಪೆ ವೇದಮೂರ್ತಿ ಭೀಮಸಮುದ್ರ ಮೊ : 8088076203
ಗ್ರಾಮದ ಶ್ರೀ ಭೀಮೇಶ್ವರ ಗ್ರಾಮಾಂತರ ಪ್ರೌಢಶಾಲೆಯ ವಿದ್ಯಾರ್ಥಿಗಳು 2026-27ನೇ ಸಾಲಿನ ಒಲೆಯ ಮಠ ಕ್ರೀಡಾಕೂಟದಲ್ಲಿ ವಿವಿಧ ಕ್ರೀಡಾ ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.
ಗುಂಪು ಆಟಗಳು ಹಾಗೂ ಅಥ್ಲೆಟಿಕ್ಸ್ ಸೇರಿದಂತೆ ಒಟ್ಟು 10 ವಿಭಾಗಗಳಲ್ಲಿ ವಿದ್ಯಾರ್ಥಿಗಳು ವಿಜೇತರಾಗಿ ಗಮನ ಸೆಳೆದಿದ್ದಾರೆ.
ಗುಂಪು ಆಟಗಳಲ್ಲಿ ಸಾಧನೆ
- ಬಾಲಕಿಯರ ಕಬಡ್ಡಿ – ಪ್ರಥಮ ಸ್ಥಾನ
- ಬಾಲಕರ ಖೋ-ಖೋ – ದ್ವಿತೀಯ ಸ್ಥಾನ
ಅಥ್ಲೆಟಿಕ್ಸ್‌ನಲ್ಲಿ ಸಾಧನೆ
- ಎತ್ತರ ಜಿಗಿತ – ಪ್ರಥಮ ಸ್ಥಾನ
- ಜಾವಲಿನ್ ಎಸೆತ – ಪ್ರಥಮ ಸ್ಥಾನ
- 3000 ಮೀಟರ್ ಓಟ – ಪ್ರಥಮ ಸ್ಥಾನ
- 3000 ಮೀಟರ್ ಓಟ – ದ್ವಿತೀಯ ಸ್ಥಾನ
- ಟ್ರಿಪಲ್ ಜಂಪ್ – ದ್ವಿತೀಯ ಸ್ಥಾನ
- 4×400 ಮೀಟರ್ ರಿಲೇ ಬಾಲಕಿಯರು – ದ್ವಿತೀಯ ಸ್ಥಾನ
- 800 ಮೀಟರ್ ಓಟ – ದ್ವಿತೀಯ ಸ್ಥಾನ
- 1500 ಮೀಟರ್ ಓಟ – ತೃತೀಯ ಸ್ಥಾನ
- ಬಾಲಕಿಯರ ಗುಂಡು ಎಸೆತ – ತೃತೀಯ ಸ್ಥಾನ
- 3000 ಮೀಟರ್ ನಡಿಗೆ – ತೃತೀಯ ಸ್ಥಾನ
ವಿವಿಧ ಕ್ರೀಡಾ ವಿಭಾಗಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸ್ಥಳೀಯ ಸಲಹಾ ಸಮಿತಿ ವತಿಯಿಂದ ಅಭಿನಂದನೆ ಹಾಗೂ ಶುಭಹಾರೈಸಲಾಯಿತು.
ಈ ಸಂದರ್ಭದಲ್ಲಿ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷರಾದ ಬಿ.ಟಿ. ಪುಟ್ಟಪ್ಪ, ಉಪಾಧ್ಯಕ್ಷರಾದ ಎ.ಎಂ. ಧನ್ಯಕುಮಾರ್, ಸದಸ್ಯರಾದ ಶರಣ್, ಬಿ.ಕೆ. ಕಲ್ಲಪ್ಪ, ವಿನಯ್ ಕುಮಾರ್, ಮಹೇಶ್ವರಪ್ಪ, ಕೆಂಚವೀರಪ್ಪ, ಮಾನಂಗಿ ಜಯಪ್ಪ ಹಾಗೂ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಈ ಕ್ರೀಡಾ ಸಾಧನೆಗೆ ಶಾಲೆಯ ಶಿಕ್ಷಕರು, ಪೋಷಕರು ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Whats App Channel: https://whatsapp.com/channel/0029VbDbOsBD8SE2H0L3d40j