Bhoochakra Gadde: ರಾಮನ ಹಸಿವು ನೀಗಿಸಿದ್ದ ಈ ಭೂಚಕ್ರ ಗೆಡ್ಡೆ ಪ್ರಯೋಜನಗಳ ಬಗ್ಗೆ ತಿಳಿಯಿರಿ.

Benefits of this Bhoochakra Gadde: ಸಿಹಿ ರುಚಿ ಹೊಂದಿರುವ ಈ ಗೆಡ್ಡೆಯ ಎಲೆ, ಹೂವು, ಕಾಂಡ ಆಯುರ್ವೇದದಲ್ಲಿ ಔಷಧವಾಗಿ ಬಳಕೆಯಾಗುತ್ತದೆ. ಇದರ ಸೇವನೆಯಿಂದ ದೇಹದ ಉಷ್ಣತೆ ನಿವಾರಣೆಯಾಗಿ ರಕ್ತವು ಶುದ್ಧಿಯಾಗುತ್ತದಂತೆ.

  • ವನವಾಸದಲ್ಲಿದ್ದಾಗ ಪ್ರಭು ಶ್ರೀ ರಾಮಚಂದ್ರ ಹಸಿವು ನೀಗಿಸಿದ್ದ ಭೂಚಕ್ರ ಗೆಡ್ಡೆ
  • ಸಿಹಿರುಚಿ ಹೊಂದಿರುವ ಈ ಗೆಡ್ಡೆಯ ಎಲೆ, ಹೂವು, ಕಾಂಡ ಔಷಧವಾಗಿ ಬಳಕೆ
  • ಭೂಚಕ್ರ ಗೆಡ್ಡೆ ಸೇವನೆಯಿಂದ ದೇಹದ ಉಷ್ಣತೆ ನಿವಾರಣೆಯಾಗಿ ರಕ್ತ ಶುದ್ಧಿಯಾಗುತ್ತದೆ

Bhoochakra Gadde: ವನವಾಸದಲ್ಲಿದ್ದಾಗ ಪ್ರಭು ಶ್ರೀ ರಾಮಚಂದ್ರ ಹಸಿವು ನೀಗಿಸಿಕೊಳ್ಳಲು ಸೇವಿಸಿದ್ದ ಈ ಭೂಚಕ್ರ ಗೆಡ್ಡೆ ಹಲವಾರು ಆರೋಗ್ಯಕರ ಪ್ರಯೋಜನ ಹೊಂದಿದೆ. ಉಷ್ಣ ಪ್ರದೇಶಗಳ ಪೊದೆಗಳಲ್ಲಿ ಬೆಳೆಯುವ ಈ ಅಪರೂಪದ ಸಸ್ಯವು ಭೂಮಿಯೊಳಗೆ ಐದಾರು ಅಡಿವರೆಗೂ ಬೇರುಬಿಟ್ಟಿರುತ್ತದೆ. ಸಿಹಿ ರುಚಿ ಹೊಂದಿರುವ ಈ ಗೆಡ್ಡೆಯ ಎಲೆ, ಹೂವು, ಕಾಂಡ ಆಯುರ್ವೇದದಲ್ಲಿ ಔಷಧವಾಗಿ ಬಳಕೆಯಾಗುತ್ತದೆ. ಇದರ ಸೇವನೆಯಿಂದ ದೇಹದ ಉಷ್ಣತೆ ನಿವಾರಣೆಯಾಗಿ ರಕ್ತವು ಶುದ್ಧಿಯಾಗುತ್ತದಂತೆ.

ತ್ರೇತ್ರಾಯುಗದಲ್ಲಿ ಶ್ರೀರಾಮನು ಅರಣ್ಯ ವಾಸದಲ್ಲಿದ್ದಾಗ ಸೀತೆ ಮತ್ತು ಲಕ್ಷ್ಮಣನ ಜೊತೆಗೂಡಿ ಈ ಭೂಚಕ್ರ ಗೆಡ್ಡೆಯನ್ನು ಸೇವಿಸುತ್ತಿದ್ದರಂತೆ. ಹನುಮಂತ ಹಾಗೂ ವಾನರ ಸೇನೆಗೂ ಸಹ ಈ ಭೂಚಕ್ರ ಗೆಡ್ಡೆ ಪ್ರಿಯ ಆಹಾರವಾಗಿತ್ತಂತೆ. ಹೇಮಕಂದ, ರಾಮಕಂದ, ನೆಲ ಸಕ್ರೆ ಗೆಡ್ಡೆ, ಭೂ ಚಕ್ರ ಗೆಡ್ಡೆ ಎಂದು ಕರೆಯಲ್ಪಡುವ ಈ ಕಂದಮೂಲ ಗೆಡ್ಡೆಗೆ ಆಂಗ್ಲ ಭಾಷೆಯಲ್ಲಿ Maerua oblongifolia(ಮೇರುವಾ ಆಬ್ಲೋಂಗಿಫೋಲಿಯಾ), Desert caper ಎಂದು, ಸಂಸ್ಕೃತ ಭಾಷೆಯಲ್ಲಿ ಮಧು ಸ್ರವ, ಮುರಹರಿ ಎಂದು ಕರೆಯಲಾಗುತ್ತದೆ. 

ಕುರುಚಲು ಕಾಡುಗಳ ಮಧ್ಯೆ ಬೆಳೆಯುವ ಈ ಸಸ್ಯದ ಬೇರು ತಿನ್ನಲು ಯೋಗ್ಯವಾಗಿದ್ದು, ತೆಂಗಿನಕಾಯಿಯ ತಿರುಳಿನಂತಿರುತ್ತದೆ. ಆಯುರ್ವೇದದಲ್ಲಿ ಉಲ್ಲೇಖವಿರುವ ಔಷಧೀಯ ಗುಣ ಹೊಂದಿರುವ ಈ ಗೆಡ್ಡೆಯನ್ನು ಸಕ್ಕರೆಯೊಂದಿಗೆ ಸೇವಿಸಲಾಗುತ್ತದೆ. ಭಾರತ ಮೂಲದ ಈ ಭೂ ಚಕ್ರ ಗೆಡ್ಡೆ ಪೊದೆಯಾಕಾರದ ಮರಗಳ ಬುಡದಲ್ಲಿ ದೊರೆಯುತ್ತದೆ. ಇದರ ಮೂಲ ಭಾರತವಾದರೂ ಪಾಕಿಸ್ತಾನ, ಸೌದಿಅರೇಬಿಯಾ ಮತ್ತು ಆಫ್ರಿಕಾ ದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.  

ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಉತ್ತರ ಭಾರತದ ಹಿಮಾಲಯ ಪರ್ವತ ಶ್ರೇಣಿಯ ರಾಜ್ಯಗಳಲ್ಲಿಯೂ ಹೆಚ್ಚಾಗಿ ಕಂಡುಬರುತ್ತವೆ. ಮಹಾ ಕುಂಭ ಮೇಳದಲ್ಲಿ ರಾಮಕಂದ, ರಾಮ ಫಲವೆಂಬ ಹೆಸರುಗಳಿಂದ ಈ ಭೂಚಕ್ರ ಗೆಡ್ಡೆಯನ್ನು ಮಾರಲಾಗುತ್ತದೆ. ಹಿಂದೆ ಮಹರ್ಷಿಗಳು, ಋಷಿ ಮುನಿಗಳು ಕಂದಮೂಲ ಆಹಾರ (ಗೆಡ್ಡೆ-ಗೆಣಸು) ಸೇವಿಸುತ್ತಿದ್ದರಂತೆ. ಇಂತಹ ಗೆಡ್ಡೆಗಳಲ್ಲಿ ಭೂಚಕ್ರ ಗೆಡ್ಡೆ ಗಾತ್ರದಲ್ಲಿ ದೊಡ್ಡದು.

೮೦ರ ದಶಕದವರೆಗೂ ಈ ಭೂಚಕ್ರ ಗೆಡ್ಡೆಗಳನ್ನು ತಮಿಳುನಾಡು, ಆಂಧ್ರಪ್ರದೇಶ ಕಡೆಯಿಂದ ತಂದು ಸಂತೆ ಮತ್ತು ಜಾತ್ರೆಗಳಲ್ಲಿ ಮಾಡಲಾಗುತ್ತಿತ್ತು. ಆಗ ಕಡಿಮೆ ಬೆಲೆ ಒಂದು ಪೀಸ್‌ಅನ್ನು ಸಕ್ಕರೆ ಸವರಿ ಕೊಡುತ್ತಿದ್ದರಂತೆ. ಇದೀಗ ಒಂದು ಪೀಸ್‌ಗೆ ೧೦ ರೂ.ನಂತೆ ಮಾರಾಟ ಮಾಡಲಾಗುತ್ತದೆ. 

ಭೂಚಕ್ರ ಗೆಡ್ಡೆಯ ಮರದ ಕಾಂಡ, ಎಲೆ, ಹೂವು, ಹಣ್ಣು ಆಯುರ್ವೇದ, ಸಿದ್ಧ ಹಾಗೂ ಪಾರಂಪರಿಕ ಚಿಕಿತ್ಸೆಗಳಲ್ಲಿ ಉಪಯೋಗಿಸುತ್ತದೆಯಂತೆ. ಭೂಚಕ್ರ ಗೆಡ್ಡೆಯ ಮರ ಬೆಳೆಯಲು ೧೦-೧೨ ವರ್ಷ ಬೇಕಾಗುತ್ತದೆ. ಭೂಮಿಯಿಂದ ಈ ಗೆಡ್ಡೆ ತೆಗೆಯಲು ಮರವನ್ನೇ ಕತ್ತರಿಸಬೇಕಾಗುತ್ತದಂತೆ.  

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *