ಶ್ರೀ ಬಸವಣ್ಣನವರ ಜಯಂತ್ಸೋತ್ಸವದ ಅಂಗವಾಗಿ ವೀರಶೈವ ಯುವ ಸಂಘಟನೆವತಿಯಿಂದ ಬೈಕ್ ರ‍್ಯಾಲಿ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಏ. ೨೫ ವಿಶ್ವ ಗುರು, ಮಹಾಮಾನವತಾವಾದಿ ಸಾಂಸ್ಕೃತಿಕ ನಾಯಕ ಶ್ರೀ ಬಸವಣ್ಣನವರ ಜಯಂತ್ಸೋತ್ಸವದ ಅಂಗವಾಗಿ ವೀರಶೈವ ಸಮಾಜ ಹಾಗೂ ಜಿಲ್ಲಾಡಳಿತದವತಿಯಿಂದ ಏ. ೨೯ ಮತ್ತು ಏ. ೩೦ ರಂದು ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ
ಎಂದು ವೀರಶೈವ ಸಮಾಜದ ಅಧ್ಯಕ್ಷರಾದ ಹೆಚ್.ಎನ್.ತಿಪ್ಪೇಸ್ವಾಮಿ ತಿಳಿಸಿದ್ದಾರೆ.


ಚಿತ್ರದುರ್ಗ ನಗರದ ವೀರಶೈವ ಸಮಾಜ ಕಾರ್ಯಾಲಯದಲ್ಲಿ ಸುದ್ದಿಗೋಷ್ಟಿಯಲ್ಲಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿ
ಮಾತನಾಡಿದ ಅವರು, ಏ.೨೯ರ ಮಂಗಳವಾರ ಮಧ್ಯಾಹ್ನ ೩ ಗಂಟೆಗೆ ವಿಶ್ವ ಗುರು, ಮಹಾಮಾನವತಾವಾದಿ ಸಾಂಸ್ಕೃತಿಕ
ನಾಯಕ ಶ್ರೀ ಬಸವಣ್ಣನವರ ಜಯಂತ್ಸೋತ್ಸವದ ಅಂಗವಾಗಿ ವೀರಶೈವ ಯುವ ಸಂಘಟನೆವತಿಯಿಂದ ಬೈಕ್ ರ‍್ಯಾಲಿಯೂ
ಹೊಳಲ್ಕೆರೆ ರಸ್ತೆಯ ಚಂದ್ರವಳ್ಳಿ ಕ್ರಾಸ್‌ನ ಬಸವ ಪುತ್ಥಳಿಯಿಂದ ಪ್ರಾರಂಭವಾಗಿ ನಗರದ ವಿವಿಧ ಬಡಾವಣೆಗಳಲ್ಲಿ ಸಂಚಾರ
ಮಾಡಲಿದೆ ಎಂದರು.
ಏ. ೩೦ರ ಬುಧವಾರ ಮಧ್ಯಾಹ್ನ ೩ ಗಂಟೆಗೆ ಶ್ರೀ ನೀಲಕಂಠೇಶ್ವರ ದೇವಾಲಯದಿಂದ ಶ್ರೀ ಬಸವೇಶ್ವರ ಭಾವಚಿತ್ರದ ಮೆರವಣಿಗೆ
ನಡೆಯಲಿದ್ದು, ಇದರ ಉದ್ಘಾಟನೆಯನ್ನು ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್
ಹಾಗೂ ಜನಪದ ಕಲಾ ಮೇಳದ ಉದ್ಘಾಟನೆಯನ್ನು ಶಾಸಕ ರಾದ ಕೆ.ಸಿ.ವಿರೇಂದ್ರ ಪಪ್ಪಿ ಯವರು ಉದ್ಘಾಟನೆ ಮಾಡಲಿದ್ದಾರೆ.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಜಿಲ್ಲಾಧಿಕಾರಿಗಳಾದ ಟಿ.ವೆಂಕಟೇಶ್ ಭಾಗವಹಿಸಲಿದ್ದಾರೆ
ಎಂದು ತಿಳಿಸಿದರು.
ವೀರಶೈವ ಸಮಾಜದ ಕಾರ್ಯದರ್ಶಿ ವಿರೇಂದ್ರಕುಮಾರ್ ಮಾತನಾಡಿ ಈ ಮೆರವಣಿಗೆಯಲ್ಲಿ ಸುಮಾರು ೧೦ ರಿಂದ ೧೫ ಕಲಾ
ತಂಡಗಳು ಭಾಗವಹಿಸಲಿದ್ದು, ಅಂದು ಮಧ್ಯಾಹ್ನ ೩ ಗಂಟೆಯಿಂದ ಸಚಿವರು, ಶಾಸಕರು ಉದ್ಘಾಟನೆ ಮಾಡಿದ ನಂತರ
ಸಂತೇಪೇಟೆವೃತ್ತ, ಅನೆಬಾಗಿಲು, ಚಿಕ್ಕಪೇಟೆ, ಉಚ್ಚಂಗಿಯಲ್ಲಮ್ಮ ದೇವಾಲಯ, ದೊಡ್ಡಪೇಟೆ, ರಂಗಯ್ಯನಬಾಗಿಲು,
ಬಸವಮಂಟಪ, ಗುರುಭವನ, ಡಾ.ಬಿ.ಆರ್.ಅಂಬೇಡ್ಕರ್‌ವೃತ್ತ, ಮಹಾವೀರವೃತ್ತ, ಎಸ್.ಬಿ.ಎಂ.ವೃತ್ತ, ಬಿ.ಡಿ.ರಸ್ತೆಯ
ಮೂಲಕ ಮರಳಿ ಶ್ರೀ ನೀಲಕಂಠೇಶ್ವರ ದೇವಾಲಯ ತಲುಪಲಿದೆ ಎಂದರು.
ಈ ಮೆರವಣಿಗೆಯಲ್ಲಿ ಶ್ರೀ ಜಗದ್ಗುರು ಮುರಾಘರಾಜೇಂದ್ರ ಬೃಹನ್ಮಠ, ವೀರಶೈವ ಸಮುದಾಯದ ವಿವಿಧ ಸಂಘಟನೆಯ ನೌಕರರು,
ಪದಾಧಿಕಾರಿಗಳು, ಸಿಬ್ಬಂದಿ ವರ್ಗದವರು ಭಾಗವಹಿಸಲಿದ್ದಾರೆ. ಇದರೊಂದಿಗೆ ಜಂಗಮ ಸಮಾಜ, ಅಖಿಲ ಭಾರತ ವೀರಶೈವ
ಮಹಾಸಭಾ, ಪಂಚಮಸಾಲಿ ಸಂಘ, ಸಾಧು-ಸದ್ದರ್ಮ, ಶಿವಸಿಂಪಿ, ಗಾಣಿಗ, ಕುಂಚಿಟಿಗ, ಹೇಮರೆಡ್ಡಿ ಮಲ್ಲಮ್ಮ, ಕುಂಬಾರ,
ಹಡಪದ, ನೊಳಂಬ ಸಮಾಜ ಯುವ ವೇದಿಕೆ, ಯುವ ಘಟಕ ಸೇರಿದಂತೆ ಇತರೆ ಸಂಘಟನೆಗಳ ಪದಾಧಿಕಾರಿಗಳು ಚಿತ್ರದುರ್ಗದ
ಸುತ್ತಾ-ಮುತ್ತಲ್ಲಿನ ಜನತೆ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಈ ಗೋಷ್ಟಿಯಲ್ಲಿ ವೀರಶೈವ ಸಮಾಜದ ನಿದೇಶಕರಾದ ಪಟೇಲ್ ಶಿವಕುಮಾರ್, ಎಸ್.ಷಡಾಕ್ಷರಯ್ಯ, ಡಿ.ಎಸ್.ಮಲ್ಲಿಕಾರ್ಜನ್,
ಪರಮೇಶ್ ಎಸ್.ಸಿದ್ದವ್ವಹಳ್ಳಿ, ಎಸ್.ವಿ.ಸಿದ್ದೇಶ್, ಶ್ರೀಮತಿ ವೀಣಾ ಸುರೇಶಬಾಬು, ಡಾ.ಸಿ.ಟಿ.ಜಯ್ಯಣ್ಣ, ಸಿದ್ದಪ್ಪ
ಪಿ.ಎಂ.ಪಿಳ್ಳೇಕೇರನಹಳ್ಳಿ ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಸಂಘದ ಗೌರವಾಧ್ಯಕ್ಷರಾದ ಪಿ.ಎಂ.ರಾಜೇಶ್, ಅಧ್ಯಕ್ಷರಾದ
ಬಿ.ವಿರೇಶ್ ಚಿನ್ಮಯಾನಂದ ಭಾಗವಹಿಸಿದ್ದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *