
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಏ. 25 : ಕಾಶ್ಮೀರದ ಫೆಹಲ್ಯಾಮ್ನಲ್ಲಿ ನಡೆದ ಉಗ್ರರ ಭೀಕರ ಕೃತ್ಯವನ್ನು ಖಂಡಿಸುತ್ತಾ ಉಗ್ರರ ವಿರುದ್ಧ ಸೂಕ್ತ ಕ್ರಮಕ್ಕೆ ಸುಲ್ತಾನಿ
ಜಾಮಿಯಾ ಮಸೀದಿ ಅಹ್ಲೆಸುನ್ನತ್ವತಿಯಿಂದ ಪ್ರತಿಭಟನೆಯನ್ನು ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಪ್ರಧಾನ
ಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.
ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರು ನಡೆಸಿದ ದಾಳಿಯನ್ನು ಭಾರತದ ದೇಶದ ಮುಸ್ಲಿಂ ಸಮಾಜ ಖಂಡಿಸಿದೆ.
ಇಂದು ಚಿತ್ರದುರ್ಗದಲ್ಲಿ ಗಾಂಧಿ ವೃತದಿಂದ ಡಿಸಿ ಕಚೇರಿ ವರೆಗೆ ಪ್ರತಿಭಟನೆ ಮೂಲಕ ಉಗ್ರರನ್ನು ಶೂಟ್ ಮಾಡ ಬೇಕೆಂದು
ಪ್ರತಿಭಟನೆ ಮೂಲಕ ಆಕ್ರೋಶ ತೋರಿಸಿದರು.
ಏ.೨೨ ರಂದು ಕಾಶ್ಮೀರದ ಫೆಹಲ್ಯಾಮ್ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ಧಾಳಿಯನ್ನು ಇಸ್ಲಾಂ ಮತ್ತು ಮುಸ್ಲಿಂ
ಸಮಾಜ ಈ ಕೃತ್ಯಕ್ಕೆ ತೀವ್ರವಾಗಿ ಖಂಡಿಸುತ್ತದೆ. ಇಂತಹ ಕೃತ್ಯಗಳನ್ನು ಇಸ್ಲಾಂ ಮತ್ತು ಮುಸ್ಲಿಂ ಸಮಾಜವು ಎಂದೂ
ಕ್ಷಮಿಸುವುದಿಲ್ಲ ಇಂತಹ ಕೃತ್ಯಗಳನ್ನು ಎಸಗುವವರು ಇಸ್ಲಾಂ ಮತ್ತು ಮುಸ್ಲಿಂ ಧರ್ಮದ ವಿರೋಧಿಗಳಾಗಿದ್ದು, ಇಂತಹ ದೇಶದ್ರೋಹಿ
ಕೃತ್ಯ ಎಸಗುವ ಉಗ್ರರಿಗೆ ಕಂಡಲ್ಲಿ ಶೂಟ್ ಮಾಡಿ ಬಿಸಾಕಲು ಇಡೀ ಭಾರತ ದೇಶದ ಮುಸಲ್ಮಾನ ಸಮಾಜವು ತೀವ್ರವಾಗಿ
ಆಗ್ರಹಿಸಿದೆ.
ಈ ದಾಳಿಯಲ್ಲಿ ಸಾವನ್ನಪ್ಪಿದ ಕರ್ನಾಟಕದ ಮೂರು ಜನ ಕನ್ನಡಿಗರು ಅಲ್ಲದೇ ಬೇರೆ ರಾಜ್ಯಗಳ ಭಾರತ ನಿವಾಸಿಗಳಿಗೆ ನಮ್ಮ
ಮುಸ್ಲಿಂ ಸಮಾಜದ ವತಿಯಿಂದ ಅವರುಗಳ ಆತ್ಮಕ್ಕೆ ಶಾಂತಿ ಸಿಗಲೆಂದು ಮತ್ತು ಮೃತರ ಕುಟುಂಬದವರಿಗೆ ದೇವರು ದುಖಃಭರಿಸುವ
ಶಕ್ತಿ ನೀಡಲೆಂದು ಆಶಿಸುತ್ತೇವೆ. ಮತ್ತು ಇಂತಹ ಕೃತ್ಯ ಎಸಗುವ ಬೇರೆ ಯಾರೇ ಆಗಿರಲಿ ಮತ್ತು ಯಾವುದೇ ಧರ್ಮದವರಾಗಿರಲಿ
ಇಂತಹ ರಾಕ್ಷಸರನ್ನು ಮುಸ್ಲಿಂ ಸಮಾಜದ ಜನರು ಎಂದಿಗೂ ಕ್ಷಮಿಸುವುದಿಲ್ಲ ಹಾಗೂ ಇಂತಹ ಕೃತ್ಯ ಎಸಗಿರುವ ಉಗ್ರರಿಗೆ ತಕ್ಕ
ಶಿಕ್ಷೆಯನ್ನು ನೀಡಬೇಕೆಂದು ಒತ್ತಾಯಿಸುತ್ತಾ ಘಟನೆಯಲ್ಲಿ ತಪ್ಪಿತಸ್ಥರಿಗೆ ಉಗ್ರ ಶಿಕ್ಷೆಯಾಗಬೇಕು. ಕಾಶ್ಮೀರದಲ್ಲಿ ಮಡಿದಂತವರಿಗೆ
ರಾಜ್ಯ ಮತ್ತು ಕೇಂದ್ರ ಸರ್ಕಾರ ಪರಿಹಾರ ಘೋಷಿಸಬೇಕು ಎಂದು ಮುಸ್ಲಿಂ ಸಮುದಾಯ ಮನವಿ ಮಾಡುತ್ತಾ ಕಾಶ್ಮೀರವನ್ನು ಮತ್ತೆ
ಪ್ರವಾಸಿ ತಾಣವನ್ನಾಗಿ ಮಾಡಬೇಕು. ಇದರಿಂದಾಗಿ ಇಂತಹ ಕೃತ್ಯಗಳು ಮತ್ತೆ ಈ ದೇಶದಲ್ಲಿ ಮರುಕಳಿಸದಂತೆ ಕೇಂದ್ರ ಸರ್ಕಾರ
ಕ್ರಮ ಕೈಗೊಳ್ಳಬೇಕೆಂದು ಚಿತ್ರದುರ್ಗ ಸುಲ್ತಾನಿ ಜಾಮೀಯ ಮಸ್ಟೀದ್ ಮರ್ಕಜ್-ಎ-ಅಹಲೆ ಸುನ್ನತ್ ಹಾಗೂ ಚಿತ್ರದುರ್ಗದ ಮುಸ್ಲಿಂ
ಸಮುದಾಯದ ಎಲ್ಲಾ ಬಾಂಧವರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಜಾಮಿಯಾ ಮಸೀದಿಯ ಮುತುವಲ್ಲಿ ರಾಧಸಾಧಿಕ್ಭಾಷಾ ಕಾರ್ಯದರ್ಶಿಗಳಾದ ಮಹಿಬೂಲ್ಲಾ , ಕಾಂಗ್ರೆಸ್ಸಿನ
ಜಿಲ್ಲಾಧ್ಯಕ್ಷರಾದ ತಾಜಪೀರ್, ನಗರಸಭಾ ಸದಸ್ಯರಾದ ಸರ್ದಾರ್ ಅಹ್ಮದ್ ಪಾಷಾ , ಎಂಸಿಓ ಬಾಬು, ನ್ಯಾಯವಾದಿ
ವಕೀಲರಾದ ಸಾಧಿಕ್ ಉಲ್ಲಾ , ಕಾಂಗ್ರೆಸಿನ ಅಲ್ಪಸಂಖ್ಯಾತರ ಅಧ್ಯಕ್ಷರಾದ ಸೈಯದ್ ಖುದ್ದುಸ್ , ಅಶ್ವಾಕ್ ರವರು, ಅಪಾನ್ ,
ಮೋಹಿದೀನ್ ಚೋಟು ದಾದಾಪೀರ್ ಇನ್ನು ಅನೇಕ ಮುಸ್ಲಿಂ ಮುಖಂಡರು ಈ ಸಂದರ್ಭದಲ್ಲಿ ಭಾಗಿಯಾಗಿದ್ದರು