ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಸೆ. 29 ಸಾಹಿತ್ಯಕ್ಕೂ ಜಾತಿ ಧರ್ಮಕ್ಕೂ ಒಂದಕ್ಕೊಂದು ಸಂಬಂಧವಿಲ್ಲ. ಜಾತಿ ಧರ್ಮ ಮೀರಿ ಎಲ್ಲರೂ ಸಾಹಿತ್ಯದ ಕೆಲಸ ಮಾಡಬೇಕೆಂದು ಹಿರಿಯ ನ್ಯಾಯವಾದಿ ಹಾಗೂ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಗೌರವಾಧ್ಯಕ್ಷ ಬಿ.ಕೆ.ರಹಮತ್‍ವುಲ್ಲಾ ಹೇಳಿದರು.
ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯ ಹದಿನೆಂಟನೆ ವಾರ್ಷಿಕೋತ್ಸವದ ಅಂಗವಾಗಿ ಪತ್ರಕರ್ತರ ಭವನದಲ್ಲಿ ಭಾನುವಾರ
ಹಮ್ಮಿಕೊಳ್ಳಲಾಗಿದ್ದ ಸಾಹಿತ್ಯ ಹಾಗೂ ಸಾಂಸ್ಕøತಿಕ ಹಬ್ಬ ಉದ್ಗಾಟಿಸಿ ಮಾತನಾಡಿ ಜಾತಿ ಧರ್ಮ ಎನ್ನುವುದಕ್ಕಿಂತ ಮುಖ್ಯವಾಗಿ
ಸಾಹಿತ್ಯದ ಸೇವೆ ಮಾಡುವ ಕೈಗಳು ಹೆಚ್ಚಾಗಬೇಕು. ದೇಶಭಕ್ತಿ, ಪರಿಸರ ಪ್ರಜ್ಞೆ ಎಲ್ಲರಲ್ಲಿಯೂ ಮೂಡಬೇಕು. ಪಂಪ, ರನ್ನ, ಕುವೆಂಪು
ಇವರುಗಳು ಕನ್ನಡಕ್ಕೆ ಸಲ್ಲಿಸಿರುವ ಸೇವೆ ಅಮೋಘವಾದುದು. ಡಾ.ನಿಸಾರ್ ಅಹಮದ್ ಹುಟ್ಟಿನಿಂದ ಮುಸಲ್ಮಾನರಾದರೂ ಅವರೊಬ್ಬ
ಹೆಸರಾಂತ ಕವಿಯಾಗಿ ಕನ್ನಡದ ಸೇವೆ ಮಾಡಿದ್ದರಿಂದ ಇಂದಿಗೂ ಎಲ್ಲರ ಮನದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆಂದು ಸ್ಮರಿಸಿದರು.
ನಡುಗನ್ನಡದಲ್ಲಿ ಕುಮಾರವ್ಯಾಸ, ರಾಘವಾಂಕ, ಹರಿಹರ ಇವರುಗಳು ದೇವರು ಧರ್ಮ ಪುರಾಣವನ್ನು ರಚಿಸಿದ್ದಾರೆ.. ಪ್ರಗತಿಶೀಲ
ಸಾಹಿತ್ಯದ ಚಿಂತನೆಯಿದೆ. ನವ್ಯ ಸಾಹಿತ್ಯದಲ್ಲಿ ಯಾವುದು ಬೇಕು, ಯಾವುದು ಬೇಡ ಎನ್ನುವ ಪರಿಕಲ್ಪನೆಯಿದೆ. ಈಗಿನ ದಲಿತ ಮತ್ತು
ಬಂಡಾಯ ಸಾಹಿತ್ಯದ ಕಾಲದಲ್ಲಿ ಬಂಜಗೆರೆ ಜಯಪ್ರಕಾಶ್ ಹಾಗೂ ದೇವನೂರು ಮಹದೇವ ಇವರುಗಳ ಕೊಡುಗೆಯೂ ಅಪಾರ.
ಗೋವಿಂದ ಪೈ ಮೊದಲನೆ ರಾಷ್ಟ್ರಕವಿ ಎಂದು ಗುರುತಿಸಿಕೊಂಡಿದ್ದು, ಹೆಗ್ಗಳಿಕೆಯಾಗಿದೆ ಸಾಹಿತ್ಯಕ್ಕೆ ಎಲ್ಲರನ್ನು ಒಂದೂಡಿಸಿ
ಸೌಹಾರ್ಧತೆಯಿಂದ ಬದುಕಿಸುವಂತ ಶಕ್ತಿಯಿದೆ. ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಆರಂಭದಲ್ಲಿ ಚಿಕ್ಕ ಗಿಡವಾಗಿ ಹುಟ್ಟಿಕೊಂಡಿದ್ದು, ಇಂದು
ದೊಡ್ಡ ಆಲದ ಮರವಾಗಿ ಬೆಳೆದು ನಿಂತಿದೆ. ಇದಕ್ಕೆ ಎಲ್ಲರ ಸಹಕಾರ ಕಾರಣ ಎಂದು ಹರ್ಷ ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಕೆ.ಎಂ.ವೀರೇಶ್ ಕನ್ನಡ ನಾಡು, ನುಡಿ, ನೆಲ, ಜಲ,
ಭಾಷೆಯ ಬಗ್ಗೆ ಎಲ್ಲರಲ್ಲೂ ಅಭಿಮಾನವಿರಬೇಕು ವಚನ ಸಾಹಿತ್ಯ, ಶರಣ ಸಾಹಿತ್ಯ ಹನ್ನೆರಡನೆ ಶತಮಾನದ ಬಸವಾದಿಶರಣರ
ಪರಿಕಲ್ಪನೆ. ಯಾವುದೇ ಒಂದು ಸಂಸ್ಥೆ ವೇದಿಕೆಯನ್ನು ಕಟ್ಟುವಾಗ ಅನೇಕ ಹಿಂಸೆ ನೋವು ಸಂಕಟ ಅವಮಾನ ಅನುಭವಿಸಬೇಕಾಗುತ್ತದೆ.
ನಂತರ ಸನ್ಮಾನ ಹುಡುಕಿಕೊಂಡು ಬರುತ್ತದೆ.. ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ನನ್ನ ಸೇವೆಯನ್ನು ಗುರುತಿಸಿ ಮೈಸೂರು
ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ ಎಂದು ನುಡಿದರು.
ಗೌರವ ಡಾಕ್ಟರೇಟ್ ಪ್ರಶಸ್ತಿಯಿಂದ ನನ್ನ ಮೇಲೆ ಜವಾಬ್ದಾರಿ ಜಾಸ್ತಿಯಾಗಿದೆ. ಸಾಹಿತ್ಯದ ಸೇವೆ ಮಾಡುವ ಮನಸ್ಸುಗಳು ಹೆಚ್ಚಾಗಬೇಕು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷನಾಗಿದ್ದಾಗ ಚಿತ್ರದುರ್ಗದಲ್ಲಿ ಎಪ್ಪತ್ತೈದನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
ಯಶಸ್ವಿಯಾಗಿ ನಡೆಸಿದ್ದೇನೆ. ಈಗ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಸಮ್ಮೇಳನ ಚಿತ್ರದುರ್ಗದಲ್ಲಿ ನಡೆಸುವ ಅವಕಾಶ ಸಿಕ್ಕಿದೆ
ಎಂದು ಹೇಳಿದರು.
ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಸಂಸ್ಥಾಪಕಿ ದಯಾ ಪುತ್ತೂರ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿ ಹದಿನೆಂಟು ವರ್ಷಗಳಿಂದಲೂ
ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯನ್ನು ಮುನ್ನಡೆಸಿಕೊಂಡು ಬರುತ್ತಿರುವುದಕ್ಕೆ ಅನೇಕರ ಸಹಕಾರವಿದೆ. ಎಸ್.ಎಚ್.ಶಫಿವುಲ್ಲಾರವನ್ನು
ವೇದಿಕೆಗೆ ಅಧ್ಯಕ್ಷರನ್ನಾಗಿ ಮಾಡಬೇಕಾದರೆ ಅನೇಕರು ಅಸಮಾಧಾನ ಹೊರ ಹಾಕಿದರು. ಆದರೆ ಅವರು ವೇದಿಕೆಯ ಅಧ್ಯಕ್ಷ ಸ್ಥಾನ
ವಹಿಸಿಕೊಂಡ ಮೇಲೆ ಒಳ್ಳೊಳ್ಳೆ ಕಾರ್ಯಕ್ರಮಗಳು ನಡೆಯುತ್ತಾ ಬರುತ್ತಿರುವುದನ್ನು ಗಮನಿಸಿದರೆ ಎಲ್ಲಾ ಜಾತಿ ಧರ್ಮದವರನ್ನು
ವಿಶ್ವಾಸಕ್ಕೆ ತೆಗೆದುಕೊಂಡು ಒಟ್ಟೊಟ್ಟಿಗೆ ಕರೆದೊಯ್ಯುತ್ತಿದ್ದಾರೆನ್ನುವುದು ಗೊತ್ತಾಗುತ್ತಿದೆ. ಜಾತಿ ಧರ್ಮಕ್ಕಿಂತ ಮುಖ್ಯವಾಗಿ ಪ್ರತಿಭೆಯನ್ನು
ಗುರುತಿಸುವುದು ನಮ್ಮ ವೇದಿಕೆಯ ಉದ್ದೇಶ. ಜಾತಿ, ಅಂತಸ್ತು, ಅಲಂಕಾರದಿಂದ ಯಾರನ್ನು ಅಳೆಯಬಾರದು. ನಿಜವಾದ ಪ್ರತಿಭೆ
ಬಹುದಿನಗಳ ಕಾಲ ಉಳಿಯುತ್ತದೆ ಎಂದು ತಿಳಿಸಿದರು.
ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಅಧ್ಯಕ್ಷ ಎಸ್.ಎಚ್.ಶಫಿವುಲ್ಲಾ ಹದಿನೆಂಟನೆ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ
ವಹಿಸಿದ್ದರು.ತನುಶ್ರಿ ಪ್ರಕಾಶನದ ಸಂಸ್ಥಾಪಕ ರಾಜು ಸೂಲೇನಹಳ್ಳಿ ಉಪನ್ಯಾಸ ನೀಡಿದರು.ಶೋಭ ಮಲ್ಲಿಕಾರ್ಜುನ್, ಸತ್ಯಪ್ರಭಾ ವಸಂತಕುಮಾರ್ ವೇದಿಕೆಯಲ್ಲಿದ್ದರು.