ಚಿತ್ರದುರ್ಗ|ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದವತಿಯಿಂದ ಕರಾಳ ದಿನಾಚರಣೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಗರದ ಪ್ರವಾಸಿ ಮಂದಿರದಿಂದ ಕಪ್ಪು ಪಟ್ಟಿ ಧರಿಸಿ ಮೆರವಣಿಗೆ
ಮೂಲಕ ಬಂದು ಕರಾಳ ದಿನಾಚರಣೆ ನಡೆಸಿದ್ದಾರೆ.

ಭದ್ರಾ ಮೇಲ್ದಂಡೆ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಮತದೊಂದಿಗೆ ಶೀಘ್ರದಲ್ಲಿ ಕಾಮಗಾರಿ ಮುಕ್ತಾಯಗೊಳಿಸಿ
ಚಿತ್ರದುರ್ಗ ಜಿಲ್ಲೆಗೆ ನೀರು ಹರಿಸಬೇಕು. ಕೃಷಿ ಐ.ಪಿ.ಸೆಟ್‍ಗಳಿಗೆ ಆಧಾರ್ ನಂಬರ್ ಜೋಡಣೆಯನ್ನು ಕೂಡಲೇ ಕೈಬಿಡಬೇಕು.
ಬೋರ್‍ವೆಲ್ ಕೊರೆಸಲು ಸರ್ಕಾರವೇ ಬೆಲೆ ನಿಗದಿ ಮಾಡಬೇಕು ಹಾಗೂ ಅಧಿಕಾರಿಗಳು, ಬೋರ್‍ವೆಲ್ ಮಾಲೀಕರು ಮತ್ತು ರೈತರು
ಒಳಗೊಂಡ ಸಮಿತಿ ರಚಿಸಬೇಕು. ಕೃಷಿ ಸಾಲ ಒತ್ತಾಯ ಪೂರ್ವಕವಾಗಿ ಬ್ಯಾಂಕ್‍ಗಳು ವಸೂಲಿ ಮಾಡಬಾರದು ಎನ್.ಓ.ಸಿ.ಗೆ ಶುಲ್ಕ
ಸಂಗ್ರಹಿಸಬಾರದು. ಸಾಲ ನೀಡುವಾಗ ರೈತರನ್ನು ಸಿಬಿಲ್‍ನಿಂದ ಹೊರತುಪಡಿಸಬೇಕು. ಮೈಕ್ರೋ ಪೈನಾನ್ಸ್ ಕಂಪನಿಗಳ ಹಣಕಾಸು
ವ್ಯವಹಾರದ ಮೇಲೆ ಸರ್ಕಾರಗಳು ನಿಯಂತ್ರನ ವಹಿಸಬೇಕು. ರೈತರ ಜಮೀನುಗಳ ದಾರಿ ಸಮಸ್ಯೆಗಳನ್ನು ಕೂಡಲೇ ಸರಿಪಡಿಸಬೇಕು.
ಪಹಣಿ ಮತ್ತು ಭೂ ದಾಖಲೆಗಳನ್ನು 5 ರೂ.ಗೆ ನೀಡಬೇಕು ಇದನ್ನು ವ್ಯಾಪಾರವಾಗಿ ಪರಿಗಣಿಸದೇ ಸೇವೆಯಾಗಿ ಪರಿಗಣಿಸಬೇಕು
ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಲಾಯಿತು.

ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸುವ ಮೂಲಕ ಜಿಲ್ಲಾಧಿಕಾರಿ ಕಚೇರಿ ಬಳಿ ಆಗಮಿಸಿದ್ದು ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಿಡುವಂತೆ
ರೈತ ಸಂಘದ ಮುಖಂಡರು ಆಗ್ರಹ ಮಾಡಿದ್ದು ಪೋಲಿಸರು ಬಿಡದಿದ್ದಾಗ ಈ ವೇಳೆಯಲ್ಲಿ ರೈತರು ಹಾಗೂ ಪೊಲೀಸರ ನಡುವೆ ಮಾತಿನ
ಚಕಮಕಿ ನಡೆದು ಪ್ರತಿಭಟನಾಕಾರರನ್ನು ತಡೆಯಲು ಹಾಕಿದ್ದ ಬ್ಯಾರೀಕೇಡ್‍ಗಳನ್ನ ದಬ್ಬಿ ಕೆಳಗೆ ಬೀಳಿಸಿದ ರೈತ ಸಂಘದ ಸದಸ್ಯರು
ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ನುಗ್ಗಿ ಕೂತು ಪ್ರತಿಭಟನೆ ನಡೆಸಿದ್ದು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿಯನ್ನು
ಸಲ್ಲಿಸಿದರು.

ಈ ಪ್ರತಿಭಟನೆಯ ನೇತೃತ್ವವನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯ ಕಾರ್ಯಾಧ್ಯಕ್ಷರಾದ ಈಚಘಟ್ಟದ
ಸಿದ್ದವೀರಪ್ಪ, ಮೊಳಕಾಲ್ಮೂರು ತಾ,ಅಧ್ಯಕ್ಷ ಮರ್ಲೇಹಳ್ಳಿ ರವಿಕುಮಾರ್, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜನ್ ಡಿ.ಎಸ್.ಹಳ್ಳಿ, ಜಿಲ್ಲಾ ಪೃಧಾನ
ಕಾರ್ಯದರ್ಶಿ ನಿಜಲಿಂಗಪ್ಪ, ತಿಮ್ಮಣ್ಣ, ಈರಣ್ಣ, ರಾಜಪ್ಪ, ಬಸಪ್ಪ, ಪರದಪ್ಪ, ನಿರಂಜನ, ನಾಗರಾಜಪ್ಪ, ತಿಮ್ಮಾರೆಡ್ಡಿ, ಆಂಜನಪ್ಪ,
ಶಿವಮೂರ್ತಿ ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *