ನಮ್ಮೊಳಗಿನ ದುರಾಲೋಚನೆಗಳೆ ನಮ್ಮ ನಿಜವಾದ ಶತ್ರು: ಬ್ರಹ್ಮಕುಮಾರಿ ರಶ್ಮಿ ಅಭಿಪ್ರಾಯ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ನಗರದ ಭಾರತೀಯ ಯೋಗ ಶಿಕ್ಷಣ ಸಂಸ್ಥೆಯಲ್ಲಿ ಪವಿತ್ರ ರಕ್ಷಾಬಂಧನ ಆಚರಣೆ.

ಚಿತ್ರದುರ್ಗ: ಆ. 27 : ಚಿತ್ರದುರ್ಗ ನಗರದ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಯೋಗ ಕೇಂದ್ರದಲ್ಲಿ ಮಂಗಳವಾರ ಪವಿತ್ರ ರಕ್ಷಾಬಂಧನ ಮಹೋತ್ಸವ ಆಚರಿಸಲಾಯಿತು. ಚಿತ್ರದುರ್ಗ ಈಶ್ವರಿ ವಿಶ್ವವಿದ್ಯಾಲಯದ ಬ್ರಹ್ಮಕುಮಾರಿ ರಶ್ಮಿಯವರು ಕಾರ್ಯಕ್ರಮ ನಡೆಸಿಕೊಟ್ಟರು. ಪವಿತ್ರ ರಕ್ಷಾಬಂಧನ ಮಹೋತ್ಸವ ಆಚರಣೆಯ ಮಹತ್ವವನ್ನು ಕುರಿತು ಮಾತನಾಡಿದ ಅವರು ” ಪವಿತ್ರರಕ್ಷಾಬಂಧನವೂ ಭಾರತೀಯ ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಸಾರುವ ಆಧ್ಯಾತ್ಮಿಕ ಮೌಲ್ಯಗಳನ್ನು ಮತ್ತು ವಿಶ್ವಬಂಧುತ್ವವನ್ನು ಸರ್ವರಿಗೂ ನೀಡುವ ಅದ್ಭುತವಾದ ಹಬ್ಬವಾಗಿದೆ” ಎಂದು ಹೇಳಿದರು.

ಹಬ್ಬ ಆಶೀರ್ವಾದ ತುಂಬಿದ ಹಬ್ಬವಾಗಿದೆ. ಯಾವುದೇ ಮಾನವ ಬಂಧನ ಇಷ್ಟಪಡುವುದಿಲ್ಲ. ಪ್ರತಿಯೊಬ್ಬ ಮನುಷ್ಯಾತ್ಮನು ಸ್ವತಂತ್ರ್ಯವಾಗಿರಲು ಬಯಸುತ್ತಾನೆ. ನಮ್ಮ ಮನಸ್ಸಿನಲ್ಲಿ ಮೂಡುವ ದುರ್ವಿಚಾರಗಳೆ ನಮ್ಮ ದೊಡ್ಡ ಶತ್ರುಗಳು ದುರ್ಗುಣಗಳೆನ್ನುವುದೇ ಬಂಧನ ದುರ್ಗುಣಗಳಿಗೆ ಒಳಗಾದ ಮನುಷ್ಯ ದುಃಖ, ದುರಾಲೋಚನೆ, ದುರ್ವಿಚಾರ, ದುಶ್ಚಟಗಳಿಗೆ ಬಲಿಯಾಗುತ್ತಾನೆ. ಸದ್ಭಾವನೆ, ಸದ್ಗುಣ, ಸಚ್ಚಾರಿತ್ರ್ಯ, ಸಹೋದರತ್ವದ ಭಾವನೆ ಬೆಳೆದಾಗ ಬಂಧನ ದೂರವಾಗುತ್ತದೆ. ಆದ್ದರಿಂದ ಸದ್ಗುಣಗಳನ್ನು ಧರಿಸಿ, ಶ್ರೇಷ್ಠಕರ್ಮಗಳಿಂದ ನಮ್ಮನ್ನು ಬಂಧಿಸಿಕೊಳ್ಳೋಣ. ನಿಸ್ವಾರ್ಥ ಸೇವೆ, ಉಪಕಾರ ಮನೋಭಾವ, ಪ್ರಾಮಾಣಿಕ ಕಾಯಕ, ನಿರಂತರ ಪರಿಶ್ರಮ,  ಬದುಕಿನಲ್ಲಿ ನೆಮ್ಮದಿ ಶಾಂತಿಯ ಬದುಕನ್ನು ನೀಡುತ್ತದೆ ರಕ್ಷಾಬಂಧನದ ಹಬ್ಬದಲ್ಲಿ ಸೋದರತ್ವದ ಆತ್ಮೀಯ ರಾಖಿಯನ್ನು ಬಂಧಿಸಿಕೊಳ್ಳುವ ಜೊತೆ-ಜೊತೆಗೆ ಶ್ರೇಷ್ಠತೆಯಲ್ಲಿ ನಮ್ಮನ್ನು ಬಂಧಿಸಿಕೊಳ್ಳೋಣ. ಯಾರನ್ನೇ ನೋಡುವಾಗಲೂ ಇವರು ನಮ್ಮ ಸೋದರ, ನಮ್ಮ ಸೋದರಿ ಎನ್ನುವ ಪವಿತ್ರ ದೃಷ್ಟಿಯಿಂದ ನೋಡಬೇಕು. ದುರ್ಗುಣವನ್ನು ತೊರೆದು, ಸದ್ಗುಣದಿಂದ ಶೃಂಗರಿಸಿಕೊಳ್ಳಲು ಸ್ವರಕ್ಷ ಣೆಗಾಗಿ ದೃಢ ಪ್ರತಿಜ್ಞೆಯನ್ನು ಮಾಡೋಣ ಎಂದರು.

ನಂತರ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ವತಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರನ್ನೂ ಎದುರುಬದುರಾಗಿ ಕೂರಿಸಿ ಪರಸ್ಪರ ರಕ್ಷಾಬಂಧನ ಕಟ್ಟಿಸಿ ಸಿಹಿಹಂಚಲಾಯಿತು.

ಇದೇ ಸಂಧರ್ಭದಲ್ಲಿ ಭಾರತೀಯ ಯೋಗ ಶಿಕ್ಷಣ ಸಂಸ್ಥೆಯ ಯೋಗ ಪ್ರಚಾರಕ ಹಾಗೂ ಯೋಗ ಗುರು ರವಿ ಕೆ.ಅಂಬೇಕರ್ ಬ್ರಹ್ಮಕುಮಾರಿ ರಶ್ಮಿ ಅಕ್ಕನವರಿಗೆ  ಯೋಗ ಸಂಸ್ಥೆ ವತಿಯಿಂದ ಕಿರುಕಾಣಿಕೆ ನೀಡಿ ಅಭಿನಂದಿಸಿ ಮಾತನಾಡಿ ” ಭ್ರಾತೃತ್ವ ಪ್ರೇಮ ಉಜ್ವಲಗೊಳಿಸುವ ‘ರಕ್ಷಾಬಂಧನ’ ಕಾರ್ಯಕ್ರಮ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ಪ್ರಮುಖ ಉತ್ಸವವಾಗಿದ್ದು ಈ ಉತ್ಸವದ ಮೂಲಕ ಸಮಾಜದಲ್ಲಿ ಎಲ್ಲರಲ್ಲೂ ಸಹೋದರತ್ವ ಭಾವನೆಯನ್ನು ಬಿತ್ತುವ ಕೆಲಸ ಮಾಡಲಾಗುತ್ತಿದೆ ಇವರ ಈ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ ಎಂದು ಅಭಿಪ್ರಾಯ ಪಟ್ಟರು.

ರಕ್ಷಾಬಂಧನದ ಹಬ್ಬದಲ್ಲಿ ಸೋದರತ್ವದ ಆತ್ಮೀಯ ರಾಖಿಯನ್ನು ಬಂಧಿಸಿಕೊಳ್ಳುವ ಜೊತೆ-ಜೊತೆಗೆ ಶ್ರೇಷ್ಠತೆಯಲ್ಲಿ ನಮ್ಮನ್ನು ಬಂಧಿಸಿಕೊಳ್ಳೋಣ. ಯಾರನ್ನೇ ನೋಡುವಾಗಲೂ ಇವರು ನಮ್ಮ ಸೋದರ, ನಮ್ಮ ಸೋದರಿ ಎನ್ನುವ ಪವಿತ್ರ ದೃಷ್ಟಿಯಿಂದ ನೋಡಬೇಕು. ದುರ್ಗುಣವನ್ನು ತೊರೆದು, ಸದ್ಗುಣದಿಂದ ಶೃಂಗರಿಸಿಕೊಳ್ಳಲು ಸ್ವರಕ್ಷಣೆಗಾಗಿ ದೃಢ ಪ್ರತಿಜ್ಞೆಯನ್ನು ನಾವೆಲ್ಲರೂ ಮಾಡೋಣ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾರತೀಯ ಯೋಗ ಶಿಕ್ಷಣ ಸಂಸ್ಥೆಯ ಹಲವಾರು ಸಾಧಕರಾದ ಶ್ರೀಮತಿ ವನಜಾಕ್ಷಮ್ಮ, ತಿಪ್ಪಮ್ಮ, ಅಂಬುಜಾಕ್ಷಿ, ಶಿವಕುಮಾರ್, ರೂಪ, ಅನಸೂಯಮ್ಮ, ಮಂಜುಳ, ವಸಂತಲಕ್ಷ್ಮಿ, ಚೈತ್ರ, ಪುಷ್ಪ ಭಾಗ್ಯಮ್ಮ,ಸುಧಾ, ಹೇಮಲತಾ,ಶೈಲಾ,ಸರಳಮ್ಮ, ಇನ್ನಿತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *