ಕಾರ್ಟಿಂಗ್ ಉತ್ಸಾಹಿಗಳಿಗೆ ಬಂಪರ್ ಅವಕಾಶ; ಗೆದ್ದವರಿಗೆ ಸಿಗಲಿದೆ 2 ಕೋಟಿ ರೂಪಾಯಿ ಸ್ಕಾಲರ್​ಶಿಪ್

ಕಾರ್ಟಿಂಗ್ ಉತ್ಸಾಹಿಗಳಿಗೆ ಬಂಪರ್ ಅವಕಾಶ; ಗೆದ್ದವರಿಗೆ ಸಿಗಲಿದೆ 2 ಕೋಟಿ ರೂಪಾಯಿ ಸ್ಕಾಲರ್​ಶಿಪ್

ಕಾರ್ಟ್ ರೇಸಿಂಗ್ ಉತ್ಸಾಹಿಗಳಿಗೆ ಬಂಪರ್ ಅವಕಾಶ ಸಿಕ್ಕಿದೆ. ಬೆಂಗಳೂರು ಸೇರಿದಂತೆ ಆರು ನಗರಗಳಲ್ಲಿ ಕಾರ್ಟಿಂಗ್ ರೇಸ್ ನಡೆಯುತ್ತಿದೆ. ಈ ಮೂಲಕ ಭಾರತದ ಮುಂದಿನ ಕಾರ್ಟಿಂಗ್ (Karting) ಚಾಂಪಿಯನ್​ನ ಹುಡುಕಲು ತಯಾರಿ ನಡೆದಿದೆ. ಈ ವಾರದಿಂದಲೇ ಸ್ಪರ್ಧೆ ಆರಂಭ ಆಗಲಿದೆ. ಇದನ್ನು ಆರಂಭಿಸಿದ ಆರ್​ಪಿಪಿಎಲ್​ (ರೇಸಿಂಗ್ ಪ್ರಮೋಷನ್ಸ್ ಪ್ರೈವೇಟ್ ಲಿಮಿಟೆಡ್) ಈ ಬಗ್ಗೆ ಸೋಮವಾರ (ಏಪ್ರಿಲ್ 24) ಅಧಿಕೃತ ಘೋಷಣೆ ಮಾಡಿದೆ. ಇದಕ್ಕೆ ಕಾರ್ಟಿಂಗ್ ಸೂಪರ್ ಸೀರಿಸ್ ಎಂದು ಹೆಸರು ಇಡಲಾಗಿದೆ. ಮೋಟಾರ್​ಸ್ಪೋರ್ಟ್​​ನ ವೃತ್ತಿ ಆಗಿ ತೆಗೆದುಕೊಳ್ಳಬೇಕು ಎಂದು ಆಲೋಚಿಸಿದವರಿಗೆ ಆರ್​ಪಿಪಿಎಲ್ ರೇಸ್ ಸಹಕಾರಿ ಆಗಲಿದೆ.

ಏಪ್ರಿಲ್ 19ರಿಂದ ಕಾರ್ಟಿಂಗ್ ರೇಸ್ ಆರಂಭ ಆಗಲಿದೆ. ಚೆನ್ನೈನ ನಗರದಲ್ಲಿ ಮೊದಲು ಈ ರೇಸ್ ನಡೆಯಲಿದೆ. ಜೂನ್​ 4ರಂದು ಹೈದರಾಬಾದ್​ನಲ್ಲಿ ಫೈನಲ್ ನಡೆಯಲಿದೆ. ಚೆನ್ನೈನಲ್ಲಿ ಏಪ್ರಿಲ್ 20-30ರವರೆಗೆ ರೇಸ್ ಇರಲಿದೆ. ಬಳಿಕ ಬೆಂಗಳೂರು, ತ್ರಿಶೂರ್, ಮುಂಬೈ, ದೆಹಲಿ ಹಾಗೂ ಹೈದರಾಬಾದ್​ನಲ್ಲಿ ಸ್ಪರ್ಧೆ ನಡೆಯಲಿದೆ. ಬೆಂಗಳೂರಿನ ಮೆಕೋ ಕಾರ್ಟೋಪಿಯಾದಲ್ಲಿ ಕಾರ್ಟಿಂಗ್ ರೇಸ್ ಆಯೋಜಿಸಲಾಗಿದೆ.

ಇಲ್ಲಿ ಸ್ಪರ್ಧಿಸುವವರ ವಯಸ್ಸು 15 ದಾಟಿರಬೇಕು. ಫಿನಾಲೆಯಲ್ಲಿ ಗೆದ್ದವರು ಜುಲೈನಲ್ಲಿ ಪ್ರಾರಂಭವಾಗುವ FMSCI ರಾಷ್ಟ್ರೀಯ ಕಾರ್ಟಿಂಗ್ ಚಾಂಪಿಯನ್‌ಶಿಪ್‌ಗಾಗಿ 1.5-2 ಕೋಟಿ ರೂಪಾಯಿ ಮೌಲ್ಯದ ವಿದ್ಯಾರ್ಥಿವೇತನ ಪಡೆಯುತ್ತಾರೆ. ಸ್ಕಾಲರ್​ಶಿಪ್ ಹೊಸ ಕಾರ್ಟ್​ ಸಿದ್ಧಪಡಿಸುವುದು ಸೇರಿ ಅನೇಕ ತರಬೇತಿಗಳನ್ನು ಒಳಗೊಂಡಿದೆ.

ವಿವಿಧ ನಗರಗಳಿಂದ 36 ರೇಸರ್​ಗಳ ಆಯ್ಕೆ ಮಾಡಲಾಗುತ್ತದೆ. ಹೈದರಾಬಾದ್​ನಲ್ಲಿ ನಡೆಯುವ ಫಿನಾಲೆಯಲ್ಲಿ ಇವರು ಭಾಗಿ ಆಗಲಿದ್ದಾರೆ. ಪ್ರತಿ ಬ್ಯಾಚ್​ನಲ್ಲಿ 9 ಮಂದಿ ಇರುತ್ತಾರೆ. ಅಭ್ಯಾಸ ಹಾಗೂ ಅರ್ಹತಾ ಸುತ್ತು ಇರಲಿದೆ. ಪ್ರತಿ ನಗರದಲ್ಲಿ ಆಯ್ಕೆ ಆದ ಟಾಪ್ 3 ರೇಸರ್​ಗಳಿಗೆ ಟ್ರೋಫಿ ಸಿಗಲಿದೆ. ಇನ್ನು ಫಿನಾಲೆಯಲ್ಲಿ ಟಾಪ್ 6 ಡ್ರೈವರ್​ಗಳಿಗೆ ಎಫ್​ಎಂಎಸ್​ಸಿಐನಿಂದ ಸ್ಕಾಲರ್​ಶಿಪ್ ಸಿಗಲಿದೆ.  (Source)

ಇದನ್ನೂ ಓದಿ: ಭಾರತದಲ್ಲಿ ಮೊದಲ ಬಾರಿಗೆ ನಡೆದ ಫಾರ್ಮುಲಾ ಇ-ರೇಸ್ ಗೆದ್ದ ಜೀನ್ ಎರಿಕ್; ಸ್ಪರ್ಧೆಗೆ ಮೆರಗು ತಂದ ಸೆಲೆಬ್ರಿಟಿಗಳು

ಆರ್​ಪಿಪಿಎಲ್​ನ ಮುಖ್ಯಸ್ಥ ಹಾಗೂ ಎಂಡಿ ಅಖಿಲ್ ರೆಡ್ಡಿ ಮಾತನಾಡಿ, ‘ಈ ಹೊಸ ಕಾರ್ಟಿಂಗ್ ಸರಣಿಯನ್ನು ಭಾರತದಲ್ಲಿ ಪರಿಚಯಿಸಲು ನಮಗೆ ಖುಷಿ ಇದೆ. ಯುವ ರೇಸರ್​​ಗಳು ತಮ್ಮ ಪ್ರತಿಭೆಯನ್ನು ಅನಾವರಣ ಮಾಡಲು ಮತ್ತು ಮೋಟಾರ್‌ಸ್ಪೋರ್ಟ್‌ಗಳಲ್ಲಿ ತಮ್ಮ ವೃತ್ತಿಜೀವನವನ್ನು ಸಮರ್ಥವಾಗಿ ಕಟ್ಟಿಕೊಳ್ಳಲು ಇದು ವೇದಿಕೆಯನ್ನು ಒದಗಿಸುತ್ತೇವೆ. ಭಾರತದಲ್ಲಿ ಕ್ರೀಡೆಯನ್ನು ಬೆಳೆಸಲು ನಾವು ಒತ್ತು ನೀಡುತ್ತಿದ್ದೇವೆ. ಇದರ ಭಾಗವಾಗಿ ಈ ರೇಸ್​ನಲ್ಲಿ ಗೆದ್ದವರಿಗೆ ಸ್ಕಾಲರ್​ಶಿಪ್ ನೀಡುತ್ತಿದ್ದೇವೆ’ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

source https://tv9kannada.com/sports/rppl-announces-the-new-four-stroke-karting-series-will-begin-on-april-29-winners-will-get-2-crore-rs-scholarship-rmd-au34-563097.html

Views: 0

Leave a Reply

Your email address will not be published. Required fields are marked *