ಖಾಲಿ ಹೊಟ್ಟೆಯಲ್ಲಿ ಮಜ್ಜಿಗೆ ಕುಡಿಯೋದ್ರಿಂದ ಆಗುವ ಪ್ರಯೋಜನಳೇನು ಗೊತ್ತೇ?

Butter Milk: ಇದೀಗ ಸುಡು ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಜನರು ನಾನಾ ತರಹದ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಆದರೆ ಅವುಗಳಲ್ಲಿ ಮಜ್ಜಿಗೆ ಅತ್ಯಂತ ಪ್ರಯೋಜನಕಾರಿ.. ಮಜ್ಜಿಗೆ ಕುಡಿಯುವುದರಿಂದ ದೇಹ ತಂಪಾಗುತ್ತದೆ. ಹೊಟ್ಟೆಯ ಆರೋಗ್ಯಕ್ಕೂ ಇದು ತುಂಬಾ ಒಳ್ಳೆಯದು. ಇಂದು ನಾವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮಜ್ಜಿಗೆ ಕುಡಿಯುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಯೋಣ.   

  • ಬೇಸಿಗೆಯ ಬಿಸಿಲಿನಿಂದ ಮುಕ್ತಿ ಪಡೆಯಲು ಜನರು ಐಸ್ ಕ್ರೀಂ ಹಾಗೂ ತಂಪು ಪಾನೀಯ ಸೇವಿಸುತ್ತಾರೆ
  • ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಇರುವವರು ಬೆಳಗಿನ ಉಪಹಾರವಾಗಿ ಮಜ್ಜಿಗೆ ಕುಡಿಯಬಹುದು.

Butter Milk Benefits: ಬೇಸಿಗೆಯ ಬಿಸಿಲಿನಿಂದ ಮುಕ್ತಿ ಪಡೆಯಲು ಜನರು ಐಸ್ ಕ್ರೀಂ ಹಾಗೂ ತಂಪು ಪಾನೀಯ ಸೇವಿಸುತ್ತಾರೆ. ಆದರೆ ಕೆಲವು ದೈಹಿಕ ಕಾಯಿಲೆಗಳಿಂದ ಬಳಲುತ್ತಿರುವವರು ಇಂತವುಗಳಿಂದ ದೂರವಿರುವುದು ಒಳಿತು.. 

ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಇರುವವರು ಬೆಳಗಿನ ಉಪಹಾರವಾಗಿ ಮಜ್ಜಿಗೆ ಕುಡಿಯಬಹುದು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮಜ್ಜಿಗೆ ಕುಡಿಯುವುದರಿಂದ ಹೊಟ್ಟೆಯ ಸಮಸ್ಯೆಗಳಾದ ಮಲಬದ್ಧತೆ, ಅಜೀರ್ಣ ಮತ್ತು ಗ್ಯಾಸ್ ಸಮಸ್ಯೆ ನಿವಾರಣೆಯಾಗುತ್ತದೆ.  

ಮಜ್ಜಿಗೆ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಮಜ್ಜಿಗೆ ಕುಡಿಯುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ಇದರಲ್ಲಿ ಕ್ಯಾಲ್ಸಿಯಂ, ವಿಟಮಿನ್ ಬಿ12, ಸತು, ರೈಬೋಫ್ಲಾವಿನ್ ಮತ್ತು ಪ್ರೊಟೀನ್ ಹೇರಳವಾಗಿವೆ.. ಆಯುರ್ವೇದದ ಪ್ರಕಾರ.. ಹಗಲಿನಲ್ಲಿ ಯಾವಾಗಲೂ ಮಜ್ಜಿಗೆ ಕುಡಿಯಬೇಕು.. ಇದಲ್ಲದೇ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆ ಇರುವವರು. ಜನರು ಬೆಳಿಗ್ಗೆ ಬೇಗನೆ ಖಾಲಿ ಹೊಟ್ಟೆಯಲ್ಲಿ ಮಜ್ಜಿಗೆ ಕುಡಿಯಬಹುದು.  

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮಜ್ಜಿಗೆ ಕುಡಿಯುವುದರಿಂದ ದಿನವಿಡೀ ಉತ್ಸಾಹದಿಂದ ಇರಬಹುದು.. ಮಜ್ಜಿಗೆ ಕುಡಿಯುವುದರಿಂದ ದೇಹದಲ್ಲಿನ ನೀರಿನ ಕೊರತೆಯೂ ದೂರವಾಗುತ್ತದೆ.. 

Source:https://zeenews.india.com/kannada/health/do-you-know-the-benefits-of-drinking-buttermilk-on-an-empty-stomach-285504

Leave a Reply

Your email address will not be published. Required fields are marked *