Cashless India: ಮುಂದಿನ 3 ವರ್ಷಗಳಲ್ಲಿ ದೇಶದ ಶೇ.50ರಷ್ಟು ವಹಿವಾಟು ಕ್ಯಾಶ್‌ಲೆಸ್‌!

Cashless India: ದೇಶದಲ್ಲಿ ‘ಕ್ಯಾಶ್‌ಲೆಸ್‌’ ಆರ್ಥಿಕತೆಗೆ ಯುಪಿಐ ಭದ್ರ ಬುನಾದಿ ಹಾಕಿದೆ. ಇದೇ ರೀತಿ ಮುಂದುವರೆದರೆ ಮುಂದಿನ 3 ವರ್ಷಗಳ ಬಳಿಕ ದೇಶದ ಶೇ.50ರಷ್ಟು ಆರ್ಥಿಕತೆ ನಗದು ರಹಿತವಾಗಲಿದೆ ಎಂದು ಅಮೆರಿಕ ಮೂಲದ ಬೇನ್‌ ಆ್ಯಂಡ್‌ ಕಂಪನಿಯ ವರದಿ ತಿಳಿಸಿದೆ.

ನವದೆಹಲಿ: ದೇಶದಲ್ಲಿ ಸ್ಮಾರ್ಟ್‌ಫೋನ್‌ ಬಳಕೆದಾರರು ಹೆಚ್ಚಾಗುತ್ತಿದ್ದಂತೆಯೇ ವ್ಯಾಪಾರ-ವಹಿವಾಟಿಗೆ ಫೋನ್‌ ಪೇ, ಗೂಗಲ್‌ ಪೇ, ಪೇಟಿಎಂ, ಅಮೆಜಾನ್‌ ಪೇ ಮೂಲಕ ಹಣ ಪಾವತಿಸುವ ರೂಢಿ ಜನರಲ್ಲಿ ಹೆಚ್ಚಾಗಿದೆ. ತಮ್ಮ ಖಾತೆಯಿಂದ ಮತ್ತೊಬ್ಬರ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆಗೂ ಇಂದು ಬಹುತೇಕರು ಯುಪಿಐ ಆಧಾರಿತ ಆ್ಯಪ್‌ ಸೇವೆಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಈ ಮೂಲಕ ದೇಶದಲ್ಲಿ ಡಿಜಿಟಲ್‌ ವಹಿವಾಟು ಅತ್ಯಧಿಕ ಪ್ರಮಾಣದಲ್ಲಿ ನಡೆಯುತ್ತಿದೆ. ಪ್ರಧಾನಿ ಮೋದಿಯವರ ಕನಸಿನ ಡಿಜಿಟಲ್ ಇಂಡಿಯಾಗೆ ಇದು ದೊಡ್ಡ ಕೊಡುಗೆ ನೀಡುತ್ತಿದೆ.

ಹೇಳಬೇಕು ಅಂದರೆ ದೇಶದಲ್ಲಿ ‘ಕ್ಯಾಶ್‌ಲೆಸ್‌’ ಆರ್ಥಿಕತೆಗೆ ಯುಪಿಐ ಭದ್ರ ಬುನಾದಿ ಹಾಕಿದೆ. ಇದೇ ರೀತಿ ಮುಂದುವರೆದರೆ ಮುಂದಿನ 3 ವರ್ಷಗಳ ಬಳಿಕ ದೇಶದ ಶೇ.50ರಷ್ಟು ಆರ್ಥಿಕತೆ ನಗದು ರಹಿತವಾಗಲಿದೆ ಎಂದು ಅಮೆರಿಕ ಮೂಲದ ಬೇನ್‌ ಆ್ಯಂಡ್‌ ಕಂಪನಿಯ ವರದಿ ತಿಳಿಸಿದೆ. ಕ್ಯಾಶ್‌ಲೆಸ್‌ ವಹಿವಾಟಿನಲ್ಲಿ ಕ್ರೆಡಿಟ್‌ ಕಾರ್ಡ್‌ಗಳ ವಹಿವಾಟು ಮತ್ತು ‘ಈಗ ಖರೀದಿಸಿ, ನಂತರ ಪಾವತಿಸಿ(Buy Now, Pay Later –BNPL ಮತ್ತು No Cost EMI)ವ್ಯವಸ್ಥೆಯ ಪ್ರಮಾಣವು ಶೇ.8ರಷ್ಟಿದೆ.  

ಕನ್ಸಲ್ಟಿಂಗ್ ಫರ್ಮ್ ಬೈನ್ & ಕಂಪನಿಯ ‘ದಿ ಫ್ಯೂಚರ್ ಆಫ್ ಇಂಡಿಯಾ ರಿಟೇಲ್ ಪೇಮೆಂಟ್ಸ್’ ವರದಿಯ ಪ್ರಕಾರ, FY26ರ ವೇಳೆಗೆ Household consumption $3 ಟ್ರಿಲಿಯನ್‌ಗಿಂತಲೂ ಹೆಚ್ಚು ತಲುಪುವ ನಿರೀಕ್ಷೆಯಿದೆ. ‘ಪ್ರಸ್ತುತ ತಾಂತ್ರಿಕ ಮತ್ತು ಆರ್ಥಿಕ ಆವೇಗದೊಂದಿಗೆ, ಭಾರತವು ಮುಂದಿನ 3 ವರ್ಷಗಳಲ್ಲಿ ಸುಮಾರು 350-400 ಮಿಲಿಯನ್ ಡಿಜಿಟಲ್ ಗ್ರಾಹಕರೊಂದಿಗೆ ಬಳಕೆಯಲ್ಲಿ ಸುಮಾರು ಶೇ.50ರಷ್ಟು ನಗದುರಹಿತ ಆರ್ಥಿಕತೆಯಾಗುವ ನಿರೀಕ್ಷೆಯಿದೆ’ ಎಂದು ಬೈನ್ ಮತ್ತು ಕಂಪನಿಯ ಹಣಕಾಸು ಪಾಲುದಾರ ಮತ್ತು ನಾಯಕ ಸೌರಭ್ ಟ್ರೆಹಾನ್ ಹೇಳಿದ್ದಾರೆ.  

160 ಲಕ್ಷ ಕೋಟಿ ರೂ.: 2022ನೇ ಹಣಕಾಸು ವರ್ಷದ ಅಂತ್ಯಕ್ಕೆ ಗೃಹ ಬಳಕೆಯ ನಗದುರಹಿತ ವಹಿವಾಟಿನ ಪ್ರಮಾಣ.

30-35% : 2022ನೇ ಹಣಕಾಸು ವರ್ಷದಲ್ಲಿ ಆಗಿರುವ ವಹಿವಾಟು ಪೈಕಿ ಕ್ಯಾಶ್‌ಲೆಸ್‌ ಪಾವತಿಯ ಪ್ರಮಾಣ ಇಷ್ಟಿದೆ.

138.91 ಲಕ್ಷ ಕೋಟಿ ರೂ: ವ್ಯಕ್ತಿಯಿಂದ ವ್ಯಾಪಾರಿಗೆ (P2M) 2022-23ನೇ ಸಾಲಿನಲ್ಲಿ ಆಗಿರುವ ಡಿಜಿಟಲ್‌ ಮೂಲದ ವಹಿವಾಟಿನ ಒಟ್ಟು ಮೊತ್ತವಿದು.

31.05 ಲಕ್ಷ ಕೋಟಿ ರೂ.: ಆ್ಯಪ್‌ ಬಳಕೆದಾರಿಂದ ಮತ್ತೊಬ್ಬ ಬಳಕೆದಾರರಿಗೆ 2022-23ನೇ ಸಾಲಿನಲ್ಲಿ ಆಗಿರುವ ಒಟ್ಟಾರೆ ಡಿಜಿಟಲ್‌ ವಹಿವಾಟಿನ ಮೊತ್ತವಿದು.

245.14 ಲಕ್ಷ ಕೋಟಿ ರೂ.: 2026ರ ಹಣಕಾಸು ವರ್ಷಾಂತ್ಯಕ್ಕೆ ಗೃಹ ಬಳಕೆ ಡಿಜಿಟಲ್‌ ವಹಿವಾಟುಗಳ ಪ್ರಮಾಣ ಈ ಮಟ್ಟಕ್ಕೆ ಏರಿಕೆಯಾಗಲಿದೆ. ಮೇಲ್ ಮಧ್ಯಮ ವರ್ಗ ಹಾಗೂ ಹೆಚ್ಚಿನ ಸಂಬಳ ಪಡೆಯುವವರು ಇದನ್ನು ಹೆಚ್ಚಾಗಿ ಬಳಸುತ್ತಾರೆ.

35-40 ಕೋಟಿ: ಮುಂದಿನ 3 ವರ್ಷಗಳಲ್ಲಿ ನಗದು ರಹಿತ ಆರ್ಥಿಕತೆಗೆ ಕೊಡುಗೆ ನೀಡುವ ಡಿಜಿಟಲ್‌ ಆ್ಯಪ್‌ ಬಳಕೆದಾರರ ಸಂಖ್ಯೆ ಈ ಮಟ್ಟಕ್ಕೆ ತಲುಪಲಿದೆ.

Source : https://zeenews.india.com/kannada/business/indias-consumption-is-expected-to-become-50-cashless-by-fy26-says-report-141956

Leave a Reply

Your email address will not be published. Required fields are marked *