ಚಿತ್ರದುರ್ಗ ಸೆ. 19
ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್
ಹಂಡಿ ಜೋಗಿಯವರಿಗೆ ಜಾತಿ ಪ್ರಮಾಣ ಪತ್ರ ಹಾಗೂ ಮೂಲಭೂತ ಸೌಕರ್ಯವನ್ನು ಒದಗಿಸುವಂತೆ ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಅಖಂಡ ಕರ್ನಾಟಕ ಅಲೆಮಾರಿ ಪರಿಶಿಷ್ಟ ಜಾತಿ ಹಂಡಿಜೋಗಿಸ್ ಸಮಾಜ ಸುಧಾರಕ ಸಂಘದಿಂದ ಆಗ್ರಹಿಸಲಾಯಿತು.
ಚಿತ್ರದುರ್ಗ ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿಯಲ್ಲಿ ಪ್ರತಿಭಟನೆಯನ್ನು ನಡೆಸಿದ ಹಂಡಿಜೋಗಿ ಜನತೆ ಜಿಲ್ಲೆಯಲ್ಲಿ ಹೊಳಲ್ಕೆರೆ, ಹಿರಿಯೂರು, ಮೊಳಕಾಲ್ಮೂರು, ಚಳ್ಳಕೆರೆಯಲ್ಲಿ ಹಂಡಿ ಜೋಗಿಗಳಿದ್ದು, ಇವರ ಅರ್ಥಿಕವಾಗಿ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಮುಖ್ಯವಾಹಿನಿಗೆ ಬಾರದ ಕಾರಣ ಇವರು ಅಭಿವೃದ್ದಿಯಾಗಿಲ್ಲ ಇವರ ಮಕ್ಕಳು ಸಹಾ ಶಿಕ್ಷಣವನ್ನು ಪಡೆದಿಲ್ಲ ಇದರಿಂದ ವಿದ್ಯಾಬ್ಯಾಸ ಕುಂಠಿತವಾಗಿದೆ.ಈ ತಾಲ್ಲೂಕುಗಳಲ್ಲಿ ಹಂಡಿ ಜೋಗಿಗಳಿದ್ದರೂ ಸಹಾ ಅಧಿಕಾರಿಗಳು ಸರಿಯಾಗಿ ಪರಿಶೀಲನೆ ಮಾಡದೇ ನಮ್ಮ ಸಮಾಜದ ಜಾತಿ ಪ್ರಮಾಣ ಪತ್ರವನ್ನು ನೀಡಲು ಹಿಂದೇಟು ಹಾಕುತ್ತಿದ್ದಾರೆ ಇದರಿಂದ ನಮ್ಮ ಎಷ್ಟೋ ಮಕ್ಕಳ ವಿದ್ಯಾಭ್ಯಾಸ ಕುಂಠಿತವಾಗಿದೆ ಎಂದು ದೂರಿದ್ದಾರೆ.
ಅರ್ಹ ವಿದ್ಯಾರ್ಥಿಗಳು ಕಾನೂನು ಬದ್ದವಾಗಿ ಸಿಗಬೇಕಾದ ಮೂಲಭೂತ ಸೌಕರ್ಯಗಳು ಮತ್ತು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಸರ್ಕಾರ ಇವರಿಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಸಹಾ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ಮತ್ತು ಜ್ಞಾನದ ಕೊರತೆಯಿಂದ ಹಂಡಿಜೋಗಿ ಸಮಾಜ ಮತ್ತು ಇತರೆ ಸಮಾಜಗಳ ಜಾತಿಗಳ ಬಗ್ಗೆ ತಿಳಿದುಕೊಳ್ಳದೇ ಇರುವುದರಿಂದ ಸರ್ಕಾರದ ಕೆಲಸಗಳು ಮಂದಗತಿಯಲ್ಲಿ ನಡೆಯುತ್ತಿವೆ ಎಂದು ತಿಳಿಸಿದರು.
ಪ್ರಸ್ತುತ ದಿನದಲ್ಲಿ ಒಳ ಮೀಸಲಾತಿ ವಿಚಾರವಾಗಿ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳನ್ನು ಕಡೆಗಣಿಸಲಾಗಿದೆ. ಅಯೋಗ ನೀಡಿದ ಶೇ.1ರ ಮೀಸಲಾತಿಯನ್ನು ನೀಡದೇ ಅಲೆಮಾರಿಗಳ ಅನ್ನ ಮತ್ತು ಶಿಕ್ಷಣವನ್ನು ಕಸಿದುಕೊಳ್ಳಲಾಗಿದೆ. ಅಲೆಮಾರಿಗಳ ಸ್ಥಿತಿಗತಿಗಳನ್ನು ತಿಳಿದುಕೊಂಡು ಸಿದ್ದರಾಮಯ್ಯರವರು ನಮ್ಮ ಸಮುದಾಯಕ್ಕೆ ಶೆ.1ರಷ್ಟು ಮೀಸಲಾತಿಯನ್ನು ನೀಡಬೇಕು, ಕುರುಬ ಜಾತಿಯನ್ನು ಎಸ್.ಟಿ.ಗೆ ಸೇರಿಸುವ ಕಾಳಜಿಯನ್ನು ನಮ್ಮ ಸಮುದಾಯದ ಮೇಲೂ ತೋರಿಸಬೇಕಿದೆ ನಮ್ಮ ಸಮುದಾಯದ ಸ್ಥಿತಿಯನ್ನು ತಿಳಿದುಕೊಂಡು ಕೇವಲ ಜೀವವನ್ನು ಉಳಿಸಲು ನೆರವಾಗದೇ ಸ್ವಯಂ ಉದ್ಯೋಗ ಮತ್ತು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕೆಂದು ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ಅಲೆಮಾರಿ ಪರಿಶಿಷ್ಟ ಜಾತಿ ಹಂಡಿಜೋಗಿಸ್ ಸಮಾಜ ಸುಧಾರಕ ಸಂಘದ ಗೌರವಾಧ್ಯಕ್ಷರಾದ ಪ್ರತಾಪ್ ಜೋಗಿ, ಕಾರ್ಯಾಧ್ಯಕ್ಷರಾದ ರಾವಣ್ಣ ಸಿರಗೇರಿ, ಖಂಜಾಚಿ ರಮೇಶ್ ಹೊಸಪೇಟೆ, ರಾಜ್ಯ ಸಂಚಾಲಕರಾದ ರಾಮಾಂಜನಿ, ಮೈಲಾರಿ, ಸಂಘಟನಾ ಕಾರ್ಯದರ್ಶಿ ಮಹೇಶ್ ಕುಡುತಿನಿ ಮುಖಂಡರುಗಳಾದ ಕೃಷ್ಣ ಹೊಸಪೇಟೆ, ಶಿವಪುರದ ಮಂಜು, ನಾಗರಾಜು ಹೊಸಪೇಟೆ, ಕಾಶಿನಾಥ್ ಹೊಸಪೇಟೆ, ಮಂಜುನಾಥ್ ಶಿವಪುರ, ಕುಬೇರ ನೀರಲಗಿ ಮಂಜು ರಮೇಶ್ ಪರಮೇಶ್ ಕೋತವಾಲ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಯರ್ರಿಸ್ವಾಮಿ ಸೇರಿದಂತೆ ಇತರರು ಭಾಗವಹಿಸಿದ್ದರು.
Views: 2