ಅನುಪಮ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಇಂದು ಕಾರ್ಗಿಲ್ ವಿಜಯದ 25ನೇ ವರ್ಷದ ಸಂಭ್ರಮವನ್ನು ಯುವ ಬ್ರೀಗೇಡ್ ಜೊತೆ ಆಚರಿಸಲಾಯಿತು.

ಚಿತ್ರದುರ್ಗ: ನಗರದ ಅನುಪಮ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಇಂದು ಕಾರ್ಗಿಲ್ ವಿಜಯದ 25ನೇ ವರ್ಷದ ಸಂಭ್ರಮವನ್ನು ಯುವ ಬ್ರೀಗೇಡ್ ಜೊತೆ ಆಚರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಕಾರ್ಗಿಲ್ ವಿಜಯದ ಸಂಭ್ರಮದಲ್ಲಿ ಭಾರತೀಯ ಯೋಧರು ಬಳಸಿದ ಭಾರತದ ಧ್ವಜವನ್ನು ಶಾಲೆಯಲ್ಲಿ ಪ್ರದರ್ಶಿಸಿ ವಿದ್ಯಾರ್ಥಿಗಳಿಗೆ ಕಾರ್ಗಿಲ್ ಯುದ್ಧ ಮತ್ತು ಹುತಾತ್ಮರಾದ ಯೋಧರ ಬಗ್ಗೆ, ಗಾಯಗೊಂಡ ಯೋಧರ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ವಿದ್ಯಾರ್ಥಿಗಳು ಕಾರ್ಗಿಲ್ ವಿಜಯದ ಧ್ವಜವನ್ನು ನೋಡಿ ಸ್ಪರ್ಶಿಸಿ ಖುಷಿ ಪಟ್ಟು ಸಂಭ್ರಮಿಸಿದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷರಾದ ಭಾಸ್ಕರ್ ಎಸ್, ಕಾರ್ಯದರ್ಶಿಗಳಾದ ರಕ್ಷಣ್ ಎಸ್ ಬಿ, ಪ್ರಾಚಾರ್ಯ ರಾದ ಸಂಪತ್ ಕುಮಾರ್ ಸಿ ಡಿ , ಮುಖ್ಯೋಪಾಧ್ಯಾಯರಾದ ವೆಂಕಟೇಶ ಜೆ ಮತ್ತು ಶಾಲೆಯ ಶಿಕ್ಷಕ/ಶಿಕ್ಷಕಿಯರು ಹಾಜರಿದ್ದರು.