ಸಂಭ್ರಮದ ಹೌಸ್ ಮುಕ್ತಾಯ ಸಮಾರಂಭ: ಅನುಪಮಾ ಶಾಲೆಯಲ್ಲಿ ಪ್ರತಿಭೆಗಳ ಅನಾವರಣ.

ಮಾರ್ಚ್ 12: ನಗರದ ಅನುಪಮಾ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ವಾರ್ಷಿಕ ಕ್ರೀಡಾ ಕೂಟದ ಬಹುಮಾನ ವಿತರಣ ಕಾರ್ಯಕ್ರಮ ಮತ್ತು ಹೌಸ್ ಮುಕ್ತಾಯ ಸಮಾರಂಭ ನಡೆಯಿತು.

ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಸಂಪತ್ ಕುಮಾರ್ ಮಾತಾನಾಡುತ್ತ ಕ್ರೀಡೆಗಳು ವಿದ್ಯಾರ್ಥಿ ಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕ ವಾಗುತ್ತದೆ. ಎಂದರು ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಂಸ್ಥೆಯ ನಿರ್ದೇಶಕರಾದ ಕಾರ್ತಿಕ್ ಎಸ್. ಬಿ ರವರಿಂದ ಬಹುಮಾನ ವಿತರಿಸಲಾಯಿತು.

ಶಾಲಾ ಹಂತದಲ್ಲಿ ಹೌಸ್ ಗಳನ್ನು ರಚಿಸುವುದರಿಂದ ಪ್ರತಿ ಮಗುವಿನ ಕಡೆ ಗಮನಹರಿಸಿ ವೖಯಕ್ತಿಕ ಬೆಳವಣಿಗೆಗೆ ಪೂರಕ ಅಂಶಗಳನ್ನು ಕಲ್ಪಿಸಲಾಗುತ್ತದೆ. ಎಂದು ಮುಖ್ಯೋಪಾಧ್ಯಾಯರಾದ ವೆಂಕಟೇಶ್ ರವರು ಹೇಳಿದರು. 4,5ನೇ ತರಗತಿ ವಿದ್ಯಾರ್ಥಿನಿಯರಿಂದ ನೃತ್ಯ ಕಾರ್ಯಕ್ರಮ ಮನರಂಜನೆ ನೀಡಿತು.

ಈ ಕಾರ್ಯಕ್ರಮ ವನ್ನು ಶಿಕ್ಷಕಿ ಮೇಘನಾ ರವರು ನಿರೂಪಿಸಿದರು.

ಶಾಲೆಯ ಅಧ್ಯಕ್ಷರಾದ ಎಸ್ ಭಾಸ್ಕರ್, ಕಾರ್ಯದರ್ಶಿಗಳಾದ ಎಸ್ ಬಿ ರಕ್ಷಣ್, ಸಂಸ್ಥೆಯ ನಿರ್ದೇಶಕರಾದ ಕಾರ್ತಿಕ್ ಎಸ್ ಬಿ, ಪ್ರಾಚಾರ್ಯರಾದ ಸಂಪತ್ ಕುಮಾರ್ ಉಪ ಪ್ರಾಚಾರ್ಯರಾದ ಪ್ರಫುಲ್ ಬಾರಿಕ್ ಮುಖ್ಯಶಿಕ್ಷಕರಾದ ವೆಂಕಟೇಶ್ ಸಂಯೋಜಕರಾದ ಕೆ. ಬಸವರಾಜ್, ಟಿ ಏಕಾಂತ ರೆಡ್ಡಿ ವೇದಿಕೆಯನ್ನು ಅಲಂಕರಿಸಿದ್ದರು.

ಶಾಲೆಯ ಶಿಕ್ಷಕ/ಶಿಕ್ಷಕಿಯರು ಮತ್ತು ಶಿಕ್ಷಕೇತರ ವರ್ಗದವರು ಭಾಗವಹಿಸಿದ್ದರು

Leave a Reply

Your email address will not be published. Required fields are marked *