
ಚಿತ್ರದುರ್ಗ : ಚಿನ್ಮೂಲಾದ್ರಿ ರಾಷ್ಟ್ರೀಯ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಯನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಡೀನ್ ಆದಾ ಡಾ.ಗೋಪಾಲ್ ಅವರು ಮಾತಾನಾಡಿ ಶಿಕ್ಷಕರ ಮಹತ್ವ ಅವರ ಜವಾಬ್ದಾರಿ ಯನ್ನು ಕುರಿತು ತಿಳಿಸಿದರು.

ಪ್ರಾಚಾರ್ಯರಾದ ಡಾ. ಬಿ ನಾಗರಾಜ್ ಅವರು ಮಾತಾನಾಡುತ್ತ ವಿದ್ಯಾರ್ಥಿಗಳು ಕೇವಲ ಒಂದು ದಿನ ಮಾತ್ರ ಶಿಕ್ಷಕರಿಗೆ ಗೌರವ ನೀಡಿ ನಂತರ ಅವರ ಮಾತುಗಳನ್ನು ತಿರಸ್ಕರಿಸುವುದು ಗೌರವ ಕೊಡದೆ ಇರುವುದು ಸಂಸ್ಕಾರವಲ್ಲ ವಿದ್ಯಾರ್ಥಿಗಳು ಜೀವನದಲ್ಲಿ ಶಿಕ್ಷಕರ ಪಾತ್ರವನ್ನು ಮರೆಯಬಾರದು ಎಂದು ಹೇಳಿದರು.

ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಉಪನ್ಯಾಸಕರಿಗಾಗಿ ಆಟಗಳನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕ ವರ್ಗದವರು, ಸಹಾಯಕ ಸಿಬ್ಬಂದಿಯವರು ಹಾಜರಿದ್ದರು.