
ಶಾರುಖ್ ಖಾನ್ ಒಂದು ಸಕ್ಸಸ್ ಗಾಗಿ ಕಾಯುತ್ತಾ ಇದ್ದರು. ಜೀರೋ ಸೋಲಿನ ಬಳಿಕ ಪಠಾಣ್ ಸಿನಿಮಾ ಒಂದೊಳ್ಳೆ ಗೆಲುವನ್ನು ನೀಡುತ್ತೆ ಎನ್ನಲಾಗಿತ್ತು. ಆದರೆ ಅದ್ಯಾಕೋ ಆರಂಭದಲ್ಲಿಯೇ ಅಡೆತಡೆಗಳು ಉಂಟಾಗಿದೆ. ಸಿನಿಮಾದಲ್ಲಿದ್ದ ಬೇಷರಂ ಹಾಡಿಗೆ ಹಿಂದೂಪರ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿತ್ತು. ಇದೀಗ ಸೆನ್ಸಾರ್ ಮಂಡಳಿ ಕೂಡ ಸಿನಿಮಾ ತಂಡಕ್ಕೆ ಶಾಕ್ ನೀಡಿದೆ.
ಪಠಾಣ್ ಸಿನಿಮಾ ವೀಕ್ಷಿಸಿದ ಸೆನ್ಸಾರ್ ಮಂಡಳಿ ತುಂಬಾ ಎಕ್ಸ್ ಪೋಸ್ ಇರುವಂತ ಬೇಷರಂಗ್ ಹಾಡಿನ ದೃಶ್ಯ ತೆಗೆಯುವಂತೆ ಸೂಚಿಸಿದೆ. ಅದರ ಜೊತೆಗೆ ಸಿನಿಮಾದಲ್ಲಿ ಇರುವ ಕೆಲವೊಂದು ದೃಶ್ಯಗಳನ್ನು ಡಿಲೀಟ್ ಮಾಡಿ ರಿಲೀಸ್ ಮಾಡಲು ಸೆನ್ಸಾರ್ ಮಂಡಳಿಯ ಅಧ್ಯಕ್ಷ ಪ್ರಸೂನ್ ಜೋಶಿ ತಿಳಿಸಿದ್ದಾರೆ.
ಪಠಾಣ್ ಸಿನಿಮಾ 2023ರ ಜನವರಿ 25ರಂದು ತೆರೆಗೆ ಬರಲು ಸಜ್ಜಾಗಿದೆ. ಸಿದ್ಧಾರ್ಥ್ ಆನಂದ್ ಪಠಾಣ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾದ ಬೇಷರಂಗದ ಹಾಡಿನಲ್ಲಿ ದೀಪಿಕಾ ಪಡುಕೋಣೆ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಕೇಸರಿ ಬಿಕಿನಿ ತೊಟ್ಟ ಕಾರಣ ಹಿಂದೂಪರ ಸಂಘಟನೆಯಿಂದ ವಿರೋಧ ಅನುಭವಿಸಿದ್ದರು.
The post ‘ಪಠಾಣ್’ ಸಿನಿಮಾದ ಬೇಷರಂ ಹಾಡು ಸೇರಿದಂತೆ ಹಲವು ದೃಶ್ಯಗಳಿಗೆ ಕತ್ತರಿ ಹಾಕಲು ಸೂಚಿಸಿದ ಸೆನ್ಸಾರ್ ಮಂಡಳಿ..! first appeared on Kannada News | suddione.
from ರಾಷ್ಟ್ರೀಯ ಸುದ್ದಿ – Kannada News | suddione https://ift.tt/T4HeU2W
via IFTTT