ನಾಳೆ ಚಿತ್ರದುರ್ಗಕ್ಕೆ ಮುಖ್ಯಮಂತ್ರಿ ಆಗಮನ : ವಾಹನಗಳು ಸಂಚರಿಸುವ ಈ ಮಾರ್ಗದಲ್ಲಿ ಬದಲಾವಣೆ…!

 

ಚಿತ್ರದುರ್ಗ, (ಮಾ.03): ನಗರದ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಆಯೋಜಿಸಿರುವ “ಫಲಾನುಭವಿಗಳ ಸಮಾವೇಶ” ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪಾಲ್ಗೊಳ್ಳಲಿದ್ದು, ಮುಖ್ಯ ಅತಿಥಿಗಳಾಗಿ ಸರ್ಕಾರದ ಪ್ರಮುಖ ಸಚಿವರು, ಶಾಸಕರುಗಳು ಮತ್ತು ರಾಜಕಾರಣಿಗಳು ಹಾಗೂ ಸಾರ್ವಜನಿಕರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ಈ ಸಂಬಂಧ ನಗರದಲ್ಲಿ ಸಂಚಾರ ದಟ್ಟಣೆ ತಡೆಯುವ ನಿಟ್ಟಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸಂಬಂಧವಾಗಿ ಮಾರ್ಚ್ 04 ರಂದು ಬೆಳಗ್ಗೆ 08-00 ಗಂಟೆಯಿಂದ ಸಂಜೆ 6-00 ಗಂಟೆವರೆಗೆ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಮತ್ತು ಖಾಸಗಿ ಬಸ್ಸುಗಳು ಹಾಗೂ ಭಾರಿ ವಾಹನಗಳು ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ
ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ದಿವ್ಯ ಪ್ರಭು ಜಿ.ಆರ್.ಜೆ. ಆದೇಶಿಸಿದ್ದಾರೆ.

ವಾಹನಗಳು ಸಂಚರಿಸುವ ಮಾರ್ಗ ಬದಲಾವಣೆ ಈ ಕೆಳಕಂಡಂತಿದೆ.

1. ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಹೊರ ಹೋಗುವ ಎಲ್ಲಾ ಬಸ್‌ಗಳು ನಗರದ ಒಳಗೆ ಬರದಂತೆ ನಗರದ ಜೆ.ಎಂಐಟಿ ಸರ್ಕಲ್‌ ಮುಖಾಂತರ ಹೊರ ಹೋಗುವುದು ಹಾಗೂ ಒಳಬರುವುದು.

2. ಚಳ್ಳಕೆರೆ ಮತ್ತು ಹಿರಿಯೂರು ಕಡೆಯಿಂದ ಬರುವ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಕಡೆಗೆ ಬರುವ ಬಸ್ಸುಗಳನ್ನು ನಗರದ ಒಳಗೆ ಬರದಂತೆ ನಗರದ ಜೆ.ಎಂ.ಐ.ಟಿ, ಸರ್ಕಲ್ ಮುಖಾಂತರ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಒಳ ಹೋಗುವುದು ಮತ್ತು ಹೊರ ಬರುವುದು.

3. ಚಳ್ಳಕೆರೆ ಮತ್ತು ಹಿರಿಯೂರು ಕಡೆಯಿಂದ ಬರುವ ಖಾಸಗಿ ಬಸ್‌ ನಿಲ್ದಾಣದ ಕಡೆಗೆ ಬರುವ ಖಾಸಗಿ ಬಸ್ಸುಗಳನ್ನು ನಗರದ ಒಳಗೆ ಬಂದಂತೆ ನಗರದ ಜೆ.ಎಂ.ಐ.ಟಿ ಸರ್ಕಲ್ ಮುಖಾಂತರ ಬಂದು ಆಜಾದ್‌, ಮಿಲ್‌ ಕ್ರಾಸ್ ನಲ್ಲಿ ಎ.ಪಿ.ಎಂ.ಸಿ. ಮಾರುಕಟ್ಟೆ ಒಳಗಿನಿಂದ ಖಾಸಗಿ ಬಸ್ ನಿಲ್ದಾಣದ ಒಳ ಹೋಗುವುದು ಮತ್ತು ಹೊರ ಬರುವುದು.

4. ಹೊಳಲ್ಕೆರೆ, ಶಿವಮೊಗ್ಗ ಕಡೆಯಿಂದ ಬರುವ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ  ಕಡೆಗೆ ಬರುವ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ನಗರದ ಒಳಗೆ ಬರದಂತೆ ನಗರದ ಎಸ್.ಹೆಚ್- 13 ರಸ್ತೆಯಲ್ಲಿ ಮುರುಘಾಮಠದ ಮುಂಭಾಗದಿಂದ ಜೆ.ಎಂ.ಐ.ಟಿ. ಸರ್ಕಲ್ ಮುಖಾಂತರ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಒಳ ಹೋಗುವುದು ಮತ್ತು ಹೊರ ಹೋಗುವರು.

5. ಹೊಳಲ್ಕೆರೆ, ಶಿವಮೊಗ್ಗ ಕಡೆಯಿಂದ ಬರುವ ಖಾಸಗಿ ಬಸ್‌ ನಿಲ್ದಾಣದ ಕಡೆಗೆ ಬರುವ ಖಾಸಗಿ ಬಸ್ಸುಗಳು ನಗರದ ಒಳಗೆ ಬರದಂತೆ ನಗರದ ಎಸ್.ಹೆಚ್-13 ರಸ್ತೆಯಲ್ಲಿ ಮುರುಘಾಮಠದ ಮುಂಭಾಗದಿಂದ ಜೆ.ಎಂ.ಐಟಿ ಸರ್ಕಲ್ ಮುಖಾಂತರ ಬಂದು ಆಜಾದ್ ಮಿಲ್ ಕ್ರಾಸ್ ನಲ್ಲಿ ಎ.ಪಿ.ಎಂ.ಸಿ. ಒಳಗಿನಿಂದ ಖಾಸಗಿ ಬಸ್ ನಿಲ್ದಾಣದ ಒಳ ಹೋಗುವುದು ಮತ್ತು ಹೊರ ಹೋಗುವುದು.

6. ಹೊಸಪೇಟೆ ಕಡೆಯಿಂದ ಬರುವ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬರುವ ಕೆ.ಎಸ್.ಆರ್.ಟಿ ಬಸ್ಸುಗಳು ನಗರದ ಒಳಗೆ ಬರದಂತೆ ನಗರದ ಜೆ.ಎಂ.ಐ.ಟಿ ಸರ್ಕಲ್ ಮುಖಾಂತರ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಒಳ ಹೋಗುವುದು ಮತ್ತು ಹೊರ ಹೋಗುವುದು.

7. ಹೊಸಪೇಟೆ ಕಡೆಯಿಂದ ಖಾಸಗಿ ಬಸ್‌ ನಿಲ್ದಾಣಕ್ಕೆ ಬರುವ ಖಾಸಗಿ ಬಸ್ಸುಗಳು ನಗರದ ಒಳಗೆ ಬರದಂತೆ ನಗರದ ಜೆ.ಎಂ.ಐ.ಟಿ. ಸರ್ಕಲ್ ಮುಖಾಂತರ ಬಂದು ಆಜಾದ್ ಮಿಲ್ ಕ್ರಾಸ್ ನಲ್ಲಿ ಎ.ಪಿ.ಎಂ.ಸಿ. ಒಳಗಿನಿಂದ ಖಾಸಗಿ ಬಸ್ ನಿಲ್ದಾಣದ ಒಳ ಹೋಗುವುದು ಮತ್ತು ಹೊರ ಹೋಗುವುದು.

8. ಭಾರಿ ವಾಹನಗಳು ನಗರದ ಒಳಗೆ ಪ್ರವೇಶ ಮಾಡದಂತೆ ನಿರ್ಬಂಧಿಸಲಾಗಿದ್ದು, ಬದಲಾದ ಮಾರ್ಗಗಳಲ್ಲಿ ಸಂಚರಿಸಿ ಸಹಕರಿಸಲು ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ.

The post ನಾಳೆ ಚಿತ್ರದುರ್ಗಕ್ಕೆ ಮುಖ್ಯಮಂತ್ರಿ ಆಗಮನ : ವಾಹನಗಳು ಸಂಚರಿಸುವ ಈ ಮಾರ್ಗದಲ್ಲಿ ಬದಲಾವಣೆ…! first appeared on Kannada News | suddione.

from ಚಿತ್ರದುರ್ಗ – Kannada News | suddione https://ift.tt/wOQn14z
via IFTTT

Leave a Reply

Your email address will not be published. Required fields are marked *