“ಮಕ್ಕಳ ಹಕ್ಕುಗಳ ಸಂಸತ್: ಮೈಸೂರಿನಲ್ಲಿ ಜಿಲ್ಲಾ ಮಟ್ಟದ ಮಕ್ಕಳ ಸಮಾಲೋಚನೆ ಕಾರ್ಯಾಗಾರ”

“ಮಕ್ಕಳ ಹಕ್ಕುಗಳ ಸಂಸತ್’ 25 ಜಿಲ್ಲಾ ಮಟ್ಟದ ಮಕ್ಕಳ ಸಮಾಲೋಚನೆ ಕಾರ್ಯಾಗಾರ
ದಿನಾಂಕ 13.11.2025 ರಂದು ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ಆರ್.ಎಲ್.ಎಚ್.ಪಿ ಮೈಸೂರು ಮತ್ತು ಯುನೆಸೆಫ್, ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ಮಕ್ಕಳ ಹಕ್ಕುಗಳ ಸಂಸತ್ 25 ಜಿಲ್ಲಾ ಮಟ್ಟದ ಮಕ್ಕಳ ಸಮಾಲೋಚನೆ ಕಾರ್ಯಗಾರ ವನ್ನು ನಡೆಸಲಾಯಿತು.


ಕಾರ್ಯಕ್ರಮದ ಕುರಿತು ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯ ಸಂಯೋಜಕರಾದ ಶ್ರೀ ಶಶಿಕುಮಾರ್ ಎಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.


ಕಾರ್ಯಕ್ರಮದ ಉಧ್ಘಾಟಕರು ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಯುತ ಧನಂಜಯ ಎಲಿಯೂರು, ನಿಕಟಪೂರ್ವ ಸದಸ್ಯರು ಮಕ್ಕಳ ಕಲ್ಯಾಣ ಸಮಿತಿ, ಮೈಸೂರು ಇವರು ಜಿಲ್ಲೆಯ ಮಕ್ಕಳ ಸ್ಥಿತಿಗತಿಗಳು ಮಕ್ಕಳ ಬದುಕು, ಆರೋಗ್ಯ, ರಕ್ಷಣೆ, ಶಿಕ್ಷಣ, ಅಭಿವೃದ್ಧಿ ಮತ್ತು ಭಾಗವಹಿಸುವಿಕೆ ಹಿನ್ನೆಲೆಯಲ್ಲಿ ವಿಶ್ಲೇಷಿಸಲು ಮತ್ತು ಮಕ್ಕಳ ಅವಶ್ಯಕತೆಗಳನ್ನು ರಾಜ್ಯ ಸರ್ಕಾರದ ಗಮನಕ್ಕೆ ತಂದು ಆಗ್ರಹಿಸಲು, ಮಕ್ಕಳ ಪ್ರಮುಖ ಹಕ್ಕುಗಳಾದ ಬದುಕುವ ಹಕ್ಕು, ರಕ್ಷಣೆಯ ಹಕ್ಕು, ಅವಕಾಶ ಮತ್ತು ವಿಕಾಸ ಹೊಂದುವ ಹಕ್ಕು ಮತ್ತು ಭಾಗವಹಿಸುವ ಹಕ್ಕು ಈ ಹಕ್ಕುಗಳನ್ನು ಮಕ್ಕಳು ತಾವು ಅನುಭವಿಸಿ ತಮಗೆ ಇರುವಂತಹ ಸಮಸ್ಯೆಗಳನ್ನು ಕುರಿತು ಚರ್ಚಿಸಲು, ಇಂದಿನ ಮಕ್ಕಳು ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿದ್ದು ಅದಕ್ಕೂ ಮೀರಿದ ಹಲವಾರು ಸಮಸ್ಯೆಗಳು ಮಕ್ಕಳಿಗಿದ್ದು, ಅದರ ಕುರಿತು ಇಂದು ತಾವು ಚರ್ಚಿಸಬೇಕಿದೆ ಅಲ್ಲದೆ ಇದರ ಕುರಿತು ಮುಂದೆ ನಡೆಯುವ ಮಕ್ಕಳ ಸಂಸತ್ತಿನಲ್ಲಿ ರಾಜ್ಯಮಟ್ಟದಲ್ಲಿ ಭಾಗವಹಿಸಿ ಸಮಸ್ಯೆಗಳ ಕುರಿತು ಚರ್ಚಿಸಬೇಕಿದೆ ಈ ಹಿನ್ನೆಲೆಯಲ್ಲಿ ಇಂದು ಕಾರ್ಯಗಾರವನ್ನು ಏರ್ಪಡಿಸಲಾಗಿದೆ. ಸಂವಿಧಾನದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಕಾಶಗಳು ಮತ್ತು ಮಕ್ಕಳಿಗಿರುವ ಸೌಲಭ್ಯಗಳನ್ನು ನಾವೆಲ್ಲರೂ ಒದಗಿಸಿಕೊಡಬೇಕು, ಮಕ್ಕಳ ಪ್ರಸ್ತುತ ಸ್ಥಿತಿಯಲ್ಲಿ ಅವರ ವಿಕಾಸ ಹೇಗೆ ಎಂದು ನೋಡಲು ಇದು ಸರಿಯಾದ ಕಾಲ ಎಂದು ಅನಿಸುತ್ತದೆ. ಭಾಗವಹಿಸುವಿಕೆಯು ವಿಕಾಸದ ಭಾಗವಾಗಬೇಕು. ಮಕ್ಕಳನ್ನು, ಪೋಷಕರನ್ನು ಮತ್ತು ಶಿಕ್ಷಕರನ್ನು ಪ್ರಯೋಗದೊಡನೆ ಅನುಸಂಧಾನ ಮಾಡಬೇಕು ಮತ್ತು ಪ್ರಸ್ತುತ ಅಂಗೈ ಜಗತ್ತಿನಲ್ಲಿ ಶಿಕ್ಷಣ ಸಿಗುತ್ತಿದೆ. ಮಕ್ಕಳಿಗೆ ವಿಶ್ವ ಮಕ್ಕಳ ಒಡಂಬಡಿಕೆ ಜಾರಿ ಹಿನ್ನೆಲೆ ಮತ್ತು ಪ್ರಮುಖ ಹಕ್ಕುಗಳು ಕರ್ತವ್ಯಗಳ ಕುರಿತು ತಿಳಿಸಲಾಯಿತು. ಮೈಸೂರಿನಲ್ಲಿ ಮಕ್ಕಳ ಸ್ಥಿತಿ-ಗತಿ, ಸಮಸ್ಯೆಗಳ ಕುರಿತು ವಿವರಿಸಲಾಯಿತು.

ಇಲ್ಲಿಯವರೆಗೂ ಮೈಸೂರಿನ ರಾಜಕೀಯ ಪ್ರತಿನಿಧಿಗಳು ಮಕ್ಕಳ ಪರವಾಗಿ ಕೇಳಿರುವ ಪ್ರಶ್ನೆಗಳು ಕುರಿತು ವಿವರವಾಗಿ ತಿಳಿಸಲಾಯಿತು.
ಶ್ರೀಮತಿ ಅಪೇಕ್ಷಿತ, ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮೈಸೂರು, ಮಾತನಾಡುತ್ತಾ ಇಂದಿನ ಮಕ್ಕಳು ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿದ್ದು ಅದಕ್ಕೂ ಮೀರಿದ ಹಲವಾರು ಸಮಸ್ಯೆಗಳು ಮಕ್ಕಳಿಗಿದ್ದು ಅದರ ಕುರಿತು ಇಂದು ತಾವು ಚರ್ಚಿಸಬೇಕಿದೆ. ಅಲ್ಲದೆ ಇದರ ಕುರಿತು ಮುಂದೆ ನಡೆಯುವ ಮಕ್ಕಳ ಸಂಸತ್ತಿನಲ್ಲಿ ರಾಜ್ಯಮಟ್ಟದಲ್ಲಿ ಭಾಗವಹಿಸಿ ಸಮಸ್ಯೆಗಳ ಕುರಿತು ಚರ್ಚಿಸಬೇಕಿದೆ ಮೊಬೈಲ್ ಬಳಕೆಯಿಂದ ಯೋಚನಾ ಶಕ್ತಿ ಕುಂಠಿತವಾಗುತ್ತಿದೆ ಸಮಯ ವ್ಯರ್ಥವನ್ನು ಮಾಡದೆ ಯೋಜನೆಗಳನ್ನು ಹಾಕಿಕೊಂಡು ತಾವುಗಳು ಓದಿದಲ್ಲಿ ನಿಜವಾಗಿಯೂ ಯಶಸ್ಸನ್ನು ಕಾಣಲಿಕ್ಕೆ ಸಾಧ್ಯ ಹಾಗಾಗಿ ಯೋಚನೆ ಮಾಡುವ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ ಈ ನಿಟ್ಟಿನಲ್ಲಿ ತಮ್ಮ ಹಕ್ಕುಗಳ ಕುರಿತು ಚರ್ಚಿಸಿ ಎಂದು ತಿಳಿಸಿ ತಮ್ಮೆಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು.


ಕಾರ್ಯಕ್ರಮದಲ್ಲಿ ಮಕ್ಕಳ ಪ್ರತಿನಿಧಿಯಾಗಿ ಕುಮಾರಿ ದೀಕ್ಷ, ಕುಮಾರಿ ಹೇಮಾ ಹಾಗೂ ರಿತೇಶ್, ವಿವಿಧ ತಾಲೂಕುಗಳಿಂದ ಆಗಮಿಸಿದಂತಹ 40 ಮಕ್ಕಳು, ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *