ತಂತ್ರಜ್ಞಾನ ಮುಂದುವರೆದಿದೆ ಮಕ್ಕಳು ತಂತ್ರಜ್ಞಾನವನ್ನು ಬಳಸಿಕೊಂಡು ನೀವು ನಿಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಬೇಕು ಜಿಎಸ್ ಅನಿತ ಕುಮಾರ ಕುಮಾರ್ ಇಂದು ಮಕ್ಕಳ ದಿನಾಚರಣೆಯ ಪ್ರಯುಕ್ತ ಭೀಮಸಮುದ್ರ ಶ್ರೀ ಭೀಮೇಶ್ವರ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಹೂವಿನ ಗಿಡಕ್ಕೆ ನೀರಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿದ್ದ ಆಗಮಿಸಿದ್ದ ಉದ್ಯಮಿಗಳು ಹಾಗೂ ಯುವ ಮುಖಂಡರುಆದ
ಜಿ ಎಸ್ ಅನಿತ ಕುಮಾರ್ ಮಾತನಾಡಿ ಸಮಾಜ ಹಾಗೂ ಪ್ರಪಂಚ ಎಂಬುದು ಒಂದು ಕುಟುಂಬ ನಾವು ಇಲ್ಲಿ ನಮ್ಮ ಬದುಕನ್ನು ಕಟ್ಟಿಕೊಳ್ಳಬೇಕು ತಂತ್ರಜ್ಞಾನ ಮುಂದುವರಿದ ಈ ಕಾಲದಲ್ಲಿ ಮಕ್ಕಳು ಒಳ್ಳೆಯ ವಿದ್ಯಾಭ್ಯಾಸವನ್ನು ಮಾಡಬೇಕು ಮಕ್ಕಳು ಸ್ವಾವಲಂಬಿಯಾಗಿ ಬದುಕನ್ನು ರೂಪಿಸಿಕೊಳ್ಳಿ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಬೇಕು ಶಾಲೆಗೆ ಹಾಗೂ ತಂದೆ ತಾಯಿಗಳಿಗೆ ಒಳ್ಳೆಯ ಹೆಸರನ್ನು ತರಬೇಕು ಎಂದು ತಿಳಿಸಿದರು ಶಾಲೆಯ ಸಲಹಾ ಸಮಿತಿ ಸದಸ್ಯರಾದ BK ಕಲ್ಲಪ್ಪ ಮಾತನಾಡಿ ಪೋಷಕರು ಮಕ್ಕಳನ್ನು ಮನೆಯಲ್ಲಿ ದಿನನಿತ್ಯ ಶಾಲೆಯಿಂದ ಬಂದ ಮೇಲೆ ಅವರಿಗೆ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸುವಂತೆ ಉತ್ತೇಜನ ನೀಡಬೇಕು ಎಂದು ತಿಳಿಸಿದರು
ಶಾಲೆಯ ಸಲಹಾ ಸಮಿತಿಯ ಸದಸ್ಯರಾದ ಮಾನಂಗಿ ಜಯಪ್ಪ ಮಾತನಾಡಿ ಪೋಷಕರಿಗೆ ಮಕ್ಕಳು ನಮ್ಮ ಆಸ್ತಿ ಇದ್ದಂತೆ ನಾವು ಹೂಡಿಕೆ ಪ್ರಮಾಣದಲ್ಲಿ ನೋಡಿದರೆ ನಾನೇ ಉದಾಹರಣೆ ನನ್ನ ಮಕ್ಕಳು ಈಗ ಹೊರದೇಶದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಗಳಾಗಿದ್ದಾರೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಹಾಲಮ್ಮ ಮಲ್ಲಿಕಾರ್ಜುನಪ್ಪ ಚಾರಿಟೇಬಲ್ ಟ್ರಸ್ಟ್ ವತಿಯಿಂದ 200 ಮಕ್ಕಳಿಗೆ ಸಮವಸ್ತ್ರ ವಿತರಣೆ ಮಾಡಲಾಯಿತು
ಈ ಕಾರ್ಯಕ್ರಮದಲ್ಲಿ BK ಕಲ್ಲಪ್ಪ ಅಧ್ಯಕ್ಷತೆ ವಹಿಸಿಕೊಂಡಿದ್ದರು ಸಲಹಾ ಸಮಿತಿ ಸದಸ್ಯರುಗಳಾದ ಕುಮಾರ್ ಮಹೇಶ್ವರಪ್ಪ ಹಾಗೂ ಮುಖ್ಯ ಉಪಾಧ್ಯಾಯರಾದ ಸುಮಾ ಎಲ್ ಕೆ ಮಮತಾ ಕೋಮಲದೇವಿ ಪ್ರದೀಪ್ ಕುಮಾರ್ ಗಿರೀಶ್ ಐಶ್ವರ್ಯ ಸಿಂಧು ಹಾಗೂ ಶಾಲೆಯ ಮಕ್ಕಳ ಪೋಷಕರು ಗ್ರಾಮದ ಮುಖಂಡರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
Views: 13