ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವುದು ಅಗತ್ಯ: ಪಾರ್ಶ್ವನಾಥ ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಬುಲಾಲ್.

ಚಿತ್ರದುರ್ಗ ನ. 15

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಮಕ್ಕಳಿರುವ ಮನೆ ನಂದನವನವಿದ್ದಂತೆ. ಪುಟ್ಟ ಕಂಗಳಲ್ಲಿ ಸಾವಿರ ಕನಸುಗಳು, ಮುಗ್ಧ ಮನಸ್ಸಿನಲ್ಲಿ ನೂರಾರು ಆಸೆಗಳು, ಪುಟ್ಟ ಹೆಜ್ಜೆಗಳಲ್ಲಿ ಭವಿಷ್ಯದ ಭರವಸೆ ಅಡಗಿರುತ್ತದೆ. ಬಾಲ್ಯದ ಸವಿಯನ್ನು ಸವಿಯುತ್ತಾ ಕನಸುಗಳ ಲೋಕದಲ್ಲಿ ವಿಹರಿಸುವ ಮಕ್ಕಳ ಸಂತೋಷಕ್ಕೆ ಮಿತಿಯೇ ಇಲ್ಲ. ಇಂತಹ ಮುಗ್ಧ ಮನಸ್ಸುಗಳ ನಗು, ಸಂತೋಷ ಹಾಗೂ ಹಕ್ಕುಗಳನ್ನು ಗೌರವಿಸುವ ವಿಶೇಷ ದಿನವೇ ಮಕ್ಕಳ ದಿನಾಚರಣೆ ಎಂದು ಪಾಶ್ವನಾಥ್ ವಿದ್ಯಾ ಸಂಸ್ಥೆಯ ಆಧ್ಯಕ್ಷರಾದ ಬಾಬುಲಾಲ್ ತಿಳಿಸಿದರು.

ನಗರದ ಧರ್ಮ ಶಾಲಾ ರಸ್ತೆಯಲ್ಲಿನ ಪಾಶ್ರ್ವನಾಥ್ ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ಶನಿವಾರ ನೆದ ಮಕ್ಕಳ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಕ್ಕಳ ದಿನಾಚರಣೆ ವಿಶೇಷ ದಿನವಾಗಿದ್ದು, ಮಕ್ಕಳ ಹಕ್ಕುಗಳು, ಆರೈಕೆ ಮತ್ತು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಲು ಭಾರತದಾದ್ಯಂತ ಆಚರಿಸಲಾಗುತ್ತದೆ. ಇದನ್ನು ಪ್ರತಿವರ್ಷ ನವೆಂಬರ್ 14 ರಂದು ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರಿಗೆ ಗೌರವವಾಗಿ ಆಚರಿಸಲಾಗುತ್ತದೆ, ಮಕ್ಕಳಲ್ಲಿ ಚಾಚಾ ನೆಹರೂ ಎಂದು ಪ್ರೀತಿಯಿಂದ ಕರೆಯುತ್ತಾರೆ, ಅವರು ಮಕ್ಕಳು ಶಿಕ್ಷಣವನ್ನು ಪೂರೈಸಬೇಕೆಂದು ಸಲಹೆ ನೀಡಿದರು. ಭಾರತದಾದ್ಯಂತ ಮಕ್ಕಳಿಗಾಗಿ ಅನೇಕ ಶೈಕ್ಷಣಿಕ ಮತ್ತು ಪ್ರೇರಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದರು.

ಭಾರತದಲ್ಲಿ ಮಕ್ಕಳ ದಿನಾಚರಣೆಯ ಆಚರಣೆಯು 1956 ರ ಹಿಂದಿನದು. ಪಂ. ಜವಾಹರಲಾಲ್ ನೆಹರು, ಭಾರತವು ಮಕ್ಕಳ ದಿನವನ್ನು ನವೆಂಬರ್ 20 ರಂದು ಆಚರಿಸಿತು ಜವಾಹರಲಾಲ್ ನೆಹರೂ ಅವರ ನಿಧನದ ನಂತರ ಅವರ ಜನ್ಮ ದಿನಾಚರಣೆಯನ್ನು ಭಾರತದಲ್ಲಿ ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತದೆ. ಅವರು ಮಕ್ಕಳೊಂದಿಗೆ ಚಾಚಾ ನೆಹರು ಎಂದು ಬಹಳ ಜನಪ್ರಿಯರಾಗಿದ್ದರಿಂದ ಇದನ್ನು ಮಾಡಲಾಯಿತು, ಆದ್ದರಿಂದ, ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಅವರಿಗೆ ವಿದಾಯ ಹೇಳಲು ಸಂಸತ್ತಿನಲ್ಲಿ ನಿರ್ಣಯವನ್ನು ಅಂಗೀಕರಿಸಲಾಯಿತು ಎಂದು ತಿಳಿಸಿದರು.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳ ಮೇಲೆ ಓದಿನ ಒತ್ತಡ, ಅಂಕಗಳ ಒತ್ತಡ ಹಾಗೂ ಸಾಧನೆಯ ನಿರೀಕ್ಷೆಗಳು ಹೆಚ್ಚಾಗುತ್ತಿವೆ. ಆದರೆ ಪ್ರತಿಯೊಂದು ಮಗುವೂ ಒಂದೇ ರೀತಿಯ ಪ್ರತಿಭೆ ಹೊಂದಿರುವುದಿಲ್ಲ. ಕೆಲವರಿಗೆ ಓದಿನಲ್ಲಿ ಆಸಕ್ತಿ ಇದ್ದರೆ, ಇನ್ನು ಕೆಲವರಿಗೆ ಕ್ರೀಡೆ, ಸಂಗೀತ, ಕಲೆ ಅಥವಾ ಸೃಜನಶೀಲ ಚಟುವಟಿಕೆಗಳಲ್ಲಿ ವಿಶೇಷ ಆಸಕ್ತಿ ಇರುತ್ತದೆ. ಮಕ್ಕಳನ್ನು ಪರಸ್ಪರ ಹೋಲಿಸುವ ಬದಲು ಅವರ ಆಸಕ್ತಿ ಮತ್ತು ಸಾಮಥ್ರ್ಯವನ್ನು ಗುರುತಿಸಿ ಪ್ರೋತ್ಸಾಹಿಸುವುದು ಅಗತ್ಯ. ಮಕ್ಕಳಿಗೆ ಕೇವಲ ಉತ್ತಮ ಅಂಕಗಳೇ ಬದುಕಿನ ಯಶಸ್ಸಿನ ಮಾನದಂಡವಲ್ಲ, ಉತ್ತಮ ಸಂಸ್ಕಾರ, ಮಾನವೀಯತೆ, ಆತ್ಮವಿಶ್ವಾಸ ಮತ್ತು ಸ್ವತಂತ್ರವಾಗಿ ಆಲೋಚಿಸುವ ಗುಣಗಳೂ ಅಷ್ಟೇ ಮುಖ್ಯವಾಗಿದೆ ಎಂದರು.

ಕಾರ್ಯದರ್ಶಿ ಸುರೇಶ್ ಕುಮಾರ್ ಮಾತನಾಡಿ, ಮಕ್ಕಳ ಸಂಭ್ರಮದ ಜತೆಗೆ ಅವರ ಭವಿಷ್ಯದ ಹೊಣೆಗಾರಿಕೆಯನ್ನು ನೆನಪಿಸುವ ಈ ದಿನಕ್ಕೆ ತನ್ನದೇ ಆದ ಇತಿಹಾಸ ಮತ್ತು ಮಹತ್ವವಿದೆ. ಮಕ್ಕಳ ನಗುವಿನಲ್ಲಿದೆ ಭಾರತದ ನಾಳಿನ ಭವಿಷ್ಯ ಅಡಗಿದೆ ಬಾಲ್ಯವನ್ನು ಸಂಭ್ರಮಿಸುವುದರ ಜತೆಗೆ ಮಕ್ಕಳ ಹಕ್ಕು, ಶಿಕ್ಷಣ, ಆರೋಗ್ಯ ಮತ್ತು ಸುರಕ್ಷತೆಯ ಮಹತ್ವವನ್ನು ಸಾರುವ ದಿನವೇ ಮಕ್ಕಳ ದಿನಾಚರಣೆ ಈ ದಿನ ಕೇವಲ ಮಕ್ಕಳಿಗೆ ಸಿಹಿ ಹಂಚಿ, ಆಟವಾಡಿಸಿ ಸಂಭ್ರಮಿಸುವ ದಿನವಲ್ಲ; ಬದಲಾಗಿ ಮಕ್ಕಳನ್ನು ನಾವು ಹೇಗೆ ನೋಡುತ್ತಿದ್ದೇವೆ, ಅವರ ಕನಸುಗಳಿಗೆ ಎಷ್ಟು ಬೆಲೆ ಕೊಡುತ್ತಿದ್ದೇವೆ, ಅವರ ಭವಿಷ್ಯಕ್ಕಾಗಿ ಸಮಾಜವಾಗಿ ಏನು ಮಾಡುತ್ತಿದ್ದೇವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳುವ ದಿನವೂ ಹೌದು. ಭಾರತದ ಮೊದಲ ಪ್ರಧಾನಮಂತ್ರಿ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನವೇ 1889ರ ನವೆಂಬರ್ 14ರಂದು ಜನಿಸಿದ ನೆಹರು ಅವರಿಗೆ ಮಕ್ಕಳ ಮೇಲೆ ಅಪಾರ ಪ್ರೀತಿ ಮತ್ತು ಕಾಳಜಿ ಇತ್ತು. ಮಕ್ಕಳೊಂದಿಗೆ ಬೆರೆಯುವುದು, ಅವರ ಮಾತುಗಳನ್ನು ಆಲಿಸುವುದು, ಅವರ ಸಂತೋಷದಲ್ಲಿ ಭಾಗಿಯಾಗುವುದು ಅವರಿಗೆ ಬಹಳ ಇಷ್ಟವಾಗಿತ್ತು. ಮಕ್ಕಳ ಮುಗ್ಧತೆ ಮತ್ತು ಅವರಲ್ಲಿದ್ದ ಅಪಾರ ಸಾಮಥ್ರ್ಯದ ಬಗ್ಗೆ ಅವರಿಗೆ ಅಪಾರ ನಂಬಿಕೆಯಿತ್ತು. ಹೀಗಾಗಿಯೇ ಮಕ್ಕಳು ಅವರನ್ನು ಪ್ರೀತಿಯಿಂದ ‘ಚಾಚಾ ನೆಹರು’ ಎಂದು ಕರೆಯುತ್ತಿದ್ದರು.

ಮಕ್ಕಳ ದಿನಾಚರಣೆಯ ನಿಜವಾದ ಆಶಯ ಪ್ರತಿಯೊಂದು ಮಗುವಿಗೂ ಸಮಾನ ಅವಕಾಶ ಕಲ್ಪಿಸುವುದಾಗಿದೆ. ಮಗು ಶ್ರೀಮಂತ ಮನೆಯಲ್ಲಾಗಲಿ, ಬಡ ಕುಟುಂಬದಲ್ಲಾಗಲಿ ಜನಿಸಿರಬಹುದು. ಆದರೆ ಶಿಕ್ಷಣ ಪಡೆಯುವ ಹಕ್ಕು, ಸುರಕ್ಷಿತವಾಗಿ ಬದುಕುವ ಹಕ್ಕು ಮತ್ತು ತನ್ನ ಪ್ರತಿಭೆಯನ್ನು ತೋರಿಸುವ ಅವಕಾಶ ಪ್ರತಿಯೊಬ್ಬ ಮಗುವಿಗೂ ಸಮಾನವಾಗಿ ದೊರೆಯಬೇಕು. ಯಾವುದೇ ಮಗು ಬಡತನದಿಂದ ಶಿಕ್ಷಣದಿಂದ ವಂಚಿತವಾಗಬಾರದು. ಬಾಲಕಾರ್ಮಿಕತೆ, ಬಾಲ್ಯವಿವಾಹ, ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಶೋಷಣೆಯಂತಹ ಸಾಮಾಜಿಕ ಪಿಡುಗುಗಳಿಂದ ಮಕ್ಕಳನ್ನು ರಕ್ಷಿಸುವ ಜವಾಬ್ದಾರಿ ಸಮಾಜದ ಪ್ರತಿಯೊಬ್ಬರ ಮೇಲಿದೆ ಎಂಬ ಅರಿವು ಮೂಡಿಸುವುದೂ ಈ ದಿನದ ಪ್ರಮುಖ ಉದ್ದೇಶವಾಗಿದೆ

ಮಕ್ಕಳ ದಿನಾಚರಣೆ ಒಂದು ದಿನದ ಸಂಭ್ರಮಕ್ಕೆ ಸೀಮಿತವಾಗಬಾರದು. ಶಾಲೆಗೆ ಹೋಗಬೇಕಾದ ವಯಸ್ಸಿನಲ್ಲಿ ದುಡಿಮೆಗೆ ಇಳಿಯುವ ಮಕ್ಕಳು, ಶಿಕ್ಷಣದಿಂದ ವಂಚಿತರಾಗಿರುವ ಬಾಲಕರು, ರಕ್ಷಣೆ ಮತ್ತು ಪ್ರೀತಿಗಾಗಿ ಹಂಬಲಿಸುವ ಅನೇಕ ಮುಗ್ಧ ಮನಸ್ಸುಗಳು ನಮ್ಮ ಸಮಾಜದ ಮುಂದಿರುವ ಕಹಿ ವಾಸ್ತವಗಳಾಗಿವೆ. ಇಂತಹ ಮಕ್ಕಳ ಬದುಕಿನಲ್ಲಿಯೂ ಬೆಳಕು ಮೂಡಿದಾಗ ಮಾತ್ರ ಮಕ್ಕಳ ದಿನಾಚರಣೆಯ ಆಚರಣೆಗೆ ನಿಜವಾದ ಅರ್ಥ ಬರುತ್ತದೆ. ಮಕ್ಕಳಿಗೆ ಆಸ್ತಿಯನ್ನು ಕೊಡುವುದಕ್ಕಿಂತ ಉತ್ತಮ ಶಿಕ್ಷಣ ನೀಡುವುದು, ಕನಸು ಕಾಣಲು ಅವಕಾಶ ಕೊಡುವುದು ಮತ್ತು ಆ ಕನಸು ನನಸಾಗಿಸಲು ಬೆಂಬಲವಾಗಿ ನಿಲ್ಲುವುದು ಅತ್ಯಂತ ದೊಡ್ಡ ಕೊಡುಗೆ. ಏಕೆಂದರೆ ಇಂದು ನಾವು ಮಕ್ಕಳಿಗೆ ನೀಡುವ ಪ್ರೀತಿ, ಶಿಕ್ಷಣ ಮತ್ತು ಸಂಸ್ಕಾರವೇ ನಾಳೆ ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ತಿಳಿಸಿದರು.

ಮಕ್ಕಳ ಕಣ್ಣಲ್ಲಿ ಕನಸುಗಳಿರಲಿ, ಮನಸ್ಸಿನಲ್ಲಿ ಆತ್ಮವಿಶ್ವಾಸವಿರಲಿ, ಬದುಕಿನಲ್ಲಿ ಸಮಾನ ಅವಕಾಶಗಳಿರಲಿ. ಅವರ ನಗುವಿಗೆ ಬಡತನದ ನೆರಳು ಬೀಳದಿರಲಿ, ಅವರ ಬಾಲ್ಯಕ್ಕೆ ಭಯದ ಕಹಿ ತಟ್ಟದಿರಲಿ. ಪ್ರತಿಯೊಂದು ಮಗುವಿಗೂ ಸುಂದರ ಬಾಲ್ಯ ದೊರೆತಾಗಲೇ ಸುಂದರ ಸಮಾಜದ ನಿರ್ಮಾಣ ಸಾಧ್ಯ. ಮಕ್ಕಳನ್ನು ಸಂಭ್ರಮಿಸುವುದಷ್ಟೇ ಅಲ್ಲ, ಅವರ ಬಾಲ್ಯವನ್ನು ಕಾಪಾಡೋಣ; ಅವರ ಕನಸುಗಳಿಗೆ ರೆಕ್ಕೆ ನೀಡಿ, ಭವಿಷ್ಯಕ್ಕೆ ಭದ್ರ ಬುನಾದಿ ಹಾಕೋಣ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಶಿಕ್ಷಕರು ವಿವಿಧ ರೀತಿಯ ಸಾಂಸ್ಕøತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಸಂಸ್ಥೆಯ ಸಹ ಕಾರ್ಯದರ್ಶಿ ಸುರೇಶ್ ಪಟ್ಟಿಯಾರ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಯರಾದ ನಾಜಿಮಾ ಸ್ವಾಲೆಹ ಪ್ರೌಢಶಾಲಾ ಮುಖ್ಯೋಪಾಧ್ಯಯರಾದ ಜನಕ ರೆಡ್ಡಿ, ಚಿತ್ರ ಕಲಾವಿದರಾದ ನಾಗರಾಜ್ ಬೇದ್ರೇ ಭಾಗವಹಿಸಿದ್ದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.

🟢 WhatsApp Group

Join WhatsApp Group

🔵 Facebook Page

Follow Facebook Page

⚫ Twitter / X

Follow on X (Twitter)

🟣 Threads

Follow on Threads

🟠 Instagram

Follow on Instagram

🔵 Telegram

Join Telegram Channel

🟢 WhatsApp Channel

Follow WhatsApp Channel

📰 ಸಮಗ್ರ ಸುದ್ದಿ

ನಿಖರತೆಗೆ ಮತ್ತೊಂದು ಹೆಸರು

📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು

Leave a Reply

Your email address will not be published. Required fields are marked *