ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (RLHP) ಮೈಸೂರು ಒಂದು ಸ್ವಯಂ ಸೇವಾ ಸಂಸ್ಥೆಯಾಗಿದ್ದು, ಕಳೆದ 40 ವರ್ಷಗಳಿಂದ ಬಡಜನರ ಅಭಿವೃದ್ಧಿಗಾಗಿ ಕರ್ನಾಟಕದ 8 ಜಿಲ್ಲೆಗಳಾದ ಮೈಸೂರು, ಮಂಡ್ಯ, ಚಾಮರಾಜನಗರ, ದಾವಣಗೆರೆ, ಚಿತ್ರದುರ್ಗ, ರಾಯಚೂರು, ಕಲಬುರಗಿ ಮತ್ತು ಬೀದರ್ ಜಿಲ್ಲೆಗಳ ಗ್ರಾಮೀಣ ಮತ್ತು ಕೊಳಚೆ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ನವೆಂಬರ್ ತಿಂಗಳನ್ನು ಪ್ರತಿವರ್ಷ ಮಕ್ಕಳ ಮಾಸ ಎಂದು ಆಚರಿಸುತ್ತಾರೆ. ಈ ತಿಂಗಳಲ್ಲಿ ಮಕ್ಕಳಿಗಾಗಿ ಮತ್ತು ಮಕ್ಕಳ ಹಕ್ಕುಗಳ ಜಾಗೃತಿಗಾಗಿ ಪ್ರತಿದಿನ ಒಂದಲ್ಲ ಒಂದು ಕಾರ್ಯಕ್ರಮ ನಡೆಯುತ್ತಾ ಇರುತ್ತದೆ ಮುಖ್ಯವಾಗಿ ಕರ್ನಾಟಕ ರಾಜ್ಯಕ್ಕೆ ಬಂದಾಗ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಗಳು, ಜಾಗತಿಕ ಮಕ್ಕಳ ಹಕ್ಕುಗಳ ದಿನಾಚರಣೆ, ಲೈಂಗಿಕ ಶೋಷಣೆ ವಿರುದ್ಧ ಮಕ್ಕಳ ರಕ್ಷಣೆಯ ಅಂತಾರಾಷ್ಟ್ರೀಯ ದಿನ, ಮಕ್ಕಳ ದಿನಾಚರಣೆ ಹೀಗೆ ಹಲವು ಬಗೆಯ ಕಾರ್ಯಕ್ರಮಗಳು ನಡೆಯುತ್ತಿವೆ.
ಮಕ್ಕಳ ಹಕ್ಕುಗಳ ಮಾಸ ಅಂಗವಾಗಿ ಸಂಸ್ಥೆಯು ಕಾರ್ಯನಿರ್ವಹಿಸುತ್ತಿರುವ ಕೊಳಚೆ ಪ್ರದೇಶಗಳ ಸುಮಾರು 300ಕ್ಕೂ ಹೆಚ್ಚು ಮಕ್ಕಳನ್ನು ಒಂದು ವೇದಿಕೆಯಲ್ಲಿ ಸೇರಿಸುವ ಮೂಲಕ ಅವರಿಗೆ ಚಿತ್ರಕಲೆ, ರಸಪ್ರಶ್ನೆ, ಪ್ರಬಂಧ ಸ್ಪರ್ದೆ, ಆಟೋಟ ಸ್ಪರ್ಧಗಳ ಮೂಲಕ ಬಾಲ್ಯ ವಿವಾಹ ತಡಗಟ್ಟುವಿಕೆ, ಬಾಲ ಗರ್ಭಿಣಿ ಸಮಸ್ಯೆ ಮತ್ತು ಭ್ರೂಣ ಹತ್ಯೆ ತಡೆ, ಶಾಲೆ ಬಿಡುವ ಮಕ್ಕಳ ಸಮಸ್ಯೆ, ಬಾಲಕಾರ್ಮಿಕ ಮಕ್ಕಳ ಸಮಸ್ಯೆ ಹಾಗೂ ಮಕ್ಕಳ ಹಕ್ಕುಗಳ ಕುರಿತು ಮಕ್ಕಳಲ್ಲಿ ಜಾಗೃತಿ ಮತ್ತು ಮಕ್ಕಳ ಪ್ರತಿಭೆ ಮತ್ತು ಅವರ ಆಸಕ್ತಿಗಳನ್ನು ಗುರುತಿಸಿ ಅವರ ಪ್ರತಿಬೆಗಳ ಪ್ರದರ್ಶಮನಕ್ಕೆ ವೇದಿಕೆ ನೀಡುವ ಉದ್ದೇಶದಿಂದ ಜಾನಪದ ಕಲೆಗಳಾದ ಡೊಳ್ಳು ಕುಣಿತ, ಮಾರಿಕುಣಿತ, ಕಂಸಾಳೆ, ಭರತನ್ಯಾಟ, ಜಾಗೃತಿ ಹಾಡುಗಳು, ಪ್ರಕೃತಿ ಸಂರಕ್ಷಣೆ ಜಾಗೃತಿ ನೃತ್ಯ ಹೀಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಕ್ಕಳ ದಿನಾಚರಣೆ ಅಂಗವಾಗಿ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (RLHP) ಮೈಸೂರು ಮತ್ತು ಚೈಲ್ಡ್‌ಫಂಡ್ ಇಂಟರ್‌ನ್ಯಾಷನಲ್ ಸಂಯುಕ್ತಾಶ್ರಯದಲ್ಲಿ ದಿನಾಂಕ 23/11/2025ರಂದು ರಂಗಾಯಣದ ವನರಂಗ ವಯಲು ರಂಗಮಂದಿರದಲ್ಲಿ “ಚಿಣ್ಣರ ಚಿಲಿಪಿಲಿ” ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಈ ಕಾಯಕ್ರಮವನ್ನು ಉಧ್ಘಾಟನೆ ಮಾಡಿದ ಮೈಸೂರು ಜಿಲ್ಲೆಯ ಖ್ಯಾತ ರಂಗಕರ್ಮಿಗಳು ಹಿರಿಯ ಚಲನಚಿತ್ರ ನಟಿ ಮತ್ತು ಮಹಿಳಾ ಹೋರಾಟಗಾರ್ತಿಯಾದ ಶ್ರೀಮತಿ ರಾಮೇಶ್ವರಿ ವರ್ಮ ಇವರು ಮಾತನಾಡುತ್ತ ಮಕ್ಕಳಿಗಾಗಿ ಇಂಥ ವಿನೂತನ ಕಾರ್ಯಕ್ರಮ ಆಯೋಜನೆ ಮಾಡಿರುವುದು ತುಂಬಾ ಸಂತೋಷದ ವಿಷಯ ಹಾಗೂ ಮಕ್ಕಳಿಗೆ ತಮ್ಮ ಪ್ರತಿಭೆಗಳನ್ನು ವ್ಯಕ್ತಪಡಿಸಲು ಇಂಥ ವೇದಿಕೆಯನ್ನು ನಿರ್ಮಾಣ ಮಾಡಿ ಕೊಟ್ಟಿರುವುದು ವಿಶೇಷವಾಗಿದೆ. ಮಕ್ಕಳಲ್ಲಿ ಹಲವಾರು ಪ್ರತಿಭೆಗಳು ಇದ್ದರೂ ಇವತ್ತು ಅವಕಾಶಗಳ ಕೊರತೆಯಿಂದಾಗಿ ಅವುಗಳನ್ನು ಅಲ್ಲೇ ಮಟಕುಗೊಳಿಸುತ್ತಿದ್ದಾರೆ ಆದರೆ ಇಂಥ ವೇದಿಕೆಗಳು ದೊರೆತಲ್ಲಿ ಅವರ ಪ್ರತಿಭೆಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಇಂತಹ ವೇದಿಕೆಗಳು ಮಕ್ಕಳಿಗೆ ಆತ್ಮವಿಶ್ವಾಸ, ಧೈರ್ಯ ಮತ್ತು ಸಮಾಜವನ್ನು ಎದುರಿಸುವ ಸಾಮರ್ಥ್ಯಗಳನ್ನು ತುಂಬುತ್ತದೆ. ಪ್ರಸ್ತುತ ಸಮಾಜದಲ್ಲಿ ಮಕ್ಕಳು ತಮ್ಮ ಜವಾಬ್ದಾರಿಗಳು ಮತ್ತು ಹಕ್ಕುಗಳನ್ನು ಅರಿತುಕೊಂಡು ಪ್ರಜ್ಞಾವಂತ ನಾಗರಿಕರಾಗಿ ಬೆಳೆಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮೈಸೂರು ಜಿಲ್ಲೆಯ ಖ್ಯಾತ ರಂಗಕರ್ಮಿಗಳಾದ ಶ್ರೀಮತಿ, ಸುಮತಿ ಕೆ ಆರ್ ಇವರು ಮಾತನಾಡುತ್ತ ಇಷ್ಟು ಮಕ್ಕಳನ್ನು ಒಂದು ವೇದಿಕೆಯಲ್ಲಿ ನೋಡುತ್ತಿರುವುದು ತುಂಬಾ ಖುಷಿ ನೀಡುತ್ತಿದೆ. ಮಕ್ಕಳು ಧೈರ್ಯದಿಂದ ತಮ್ಮ ಪ್ರತಿಭೆಗಳನ್ನು ವ್ಯಕ್ತಪಡಿಸಬೇಕು, ಹೀಗೆ ಸಿಗುವ ಅವಕಾಶಗಳನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಂಡು ಮುಂದೆ ದೊಡ್ಡ ವ್ಯಕ್ತಿಗಳು ಆಗಬೇಕು. ಇವತ್ತು ಅದೆಷ್ಟೋ ಮಕ್ಕಳು ಅವಕಾಶಗಳು ಸಿಗದೇ ವಂಚಿತರಾಗುತ್ತಿದಾರೆ. ಆದರೆ ತಮಗೆ ಇಂತಹ ಒಂದು ವೇದಿಕೆ ಸಿಕ್ಕಿರುವುದು ನಿಮ್ಮ ಒಂದು ಅದೃಷ್ಟ, ಮಕ್ಕಳು ಇಂತಹ ವೇದಿಕೆಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು. ಈ ಕಾರ್ಯಕ್ರಮದ ಉದ್ದೇಶ, ಸಂಸ್ಥೆಯ ಪರಿಚಯ ಮತ್ತು ಕಾರ್ಯಕ್ರಮಗಳ ಕುರಿತು ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ. ಸರಸ್ವತಿ ಇವರು ಪ್ರಾಥಮಿಕ ಮಾತುಗಳನ್ನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಸೂರಿನ ಖ್ಯಾತ ರಂಗಕರ್ಮಿಗಳು ಮತ್ತು ಮಹಿಳಾ ಹೋರಾಟಗಾರರಾದ ಶ್ರೀಮತಿ ಸುಮತಿ ಕೆ.ಆರ್ ಇವರು ವಹಿಸಿದ್ದರು ಮತ್ತು ವೇದಿಕೆಯಲ್ಲಿ ಆರ್.ಎಲ್.ಎಚ್.ಪಿ ಸಂಸ್ಥೆಯ ಕಾರ್ಯದರ್ಶಿಗಳಾದ ಪ್ರೋ.ಜೋಸ್ ವಿ.ಕೆ ಮತ್ತು ಮಕ್ಕಳ ಪ್ರತಿನಿಧಿಗಳಾಗಿ ಕು. ಎಂಜೆಲ್ ಮೇರಿ ಮತ್ತು ಕು.ಶಂಕರ್ ಇವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುಮಾರು 300ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ಜಾನಪದ ಕಲೆಗಳಾದ ಡೊಳ್ಳು ಕುಣಿತ, ಮಾರಿಕುಣಿತ, ಕಂಸಾಳೆ, ಭರತನ್ಯಾಟ, ಜಾಗೃತಿ ಹಾಡುಗಳು, ಪ್ರಕೃತಿ ಸಂರಕ್ಷಣೆ ಜಾಗೃತಿ ನೃತ್ಯ ಹೀಗೆ ಹಲವು ಕಾರ್ಯಕ್ರಮಗಳನ್ನು ನೀಡುವ ಮೂಲಕ ತಮ್ಮ ಪ್ರತಿಭೇಗಳನ್ನು ಪ್ರದರ್ಶನ ಮಾಡಿದರು ಮತ್ತು ಗೆದ್ದವರಿಗೆ ಬಹುಮಾನಗಳನ್ನು ನೀಡಲಾಯಿತು.
Views: 55