Chinese Scientists: ಇನ್ನು ಮನುಷ್ಯರು 130 ವರ್ಷ ಬದುಕಬಹುದು! ಚೀನಾ ವಿಜ್ಞಾನಿಗಳ ಸಂಶೋಧನೆ

ಇಲಿಗಳ ರಕ್ತದಲ್ಲಿ ವಯಸ್ಸನ್ನು ನಿಯಂತ್ರಿಸುವ ಅಂಶವನ್ನು ಚೀನಾದ ವಿಜ್ಞಾನಿಗಳು (Chinese Scientists) ಪತ್ತೆ ಮಾಡಿದ್ದು, ಇದು ಮಾನವನ ವಯಸ್ಸನ್ನು ಸುಮಾರು 120-130 ವರ್ಷಗಳವರೆಗೆ ವಿಸ್ತರಿಸಬಹುದು ಎಂದು ಹೇಳಿದ್ದಾರೆ. ಈ ಕುರಿತ ಕುತೂಹಲಕರ ಮಾಹಿತಿ ಇಲ್ಲಿದೆ.

ಚೀನಾದ ವಿಜ್ಞಾನಿಗಳು (Chinese Scientists) ಇಲಿಗಳ (mouse) ರಕ್ತದಲ್ಲಿ ವಯಸ್ಸನ್ನು ನಿಯಂತ್ರಿಸುವ (anti-ageing) ಅಂಶವನ್ನು ಪತ್ತೆ ಮಾಡಿರುವುದಾಗಿ ಹೇಳಿದ್ದು, ಅವರ ಸಂಶೋಧನೆಯ ಪ್ರಕಾರ ಇಲಿಯು 1,266 ದಿನಗಳವರೆಗೆ ಜೀವಿಸುತ್ತದೆ. ಇಲಿಗಳಲ್ಲಿರುವ ವಯಸ್ಸನ್ನು ನಿಯಂತ್ರಿಸುವ ಗುಣವನ್ನು ಮಾನವನ ದೇಹಕ್ಕೆ ಸೇರಿಸಿದರೆ ಮಾನವನ ವಯಸ್ಸನ್ನು ಸುಮಾರು 120-130 ವರ್ಷಗಳವರೆಗೆ ವಿಸ್ತರಿಸಬಹುದು ಎನ್ನುತ್ತಾರೆ ಅವರು.

ನೇಚರ್ ಏಜಿಂಗ್ ಜರ್ನಲ್‌ನಲ್ಲಿ ಪ್ರಕಟವಾದ ಪೀರ್-ರಿವ್ಯೂಡ್ ಅಧ್ಯಯನದ ಪ್ರಕಾರ, 840 ದಿನಗಳ ಸರಾಸರಿ ಜೀವಿತಾವಧಿ ಹೊಂದಿರುವ 20 ತಿಂಗಳ ವಯಸ್ಸಿನ ಗಂಡು ಇಲಿಗಳು ವಯಸ್ಸನ್ನು ನಿಯಂತ್ರಿಸುವ ರಕ್ತದ ಅಂಶದ ಸಾಪ್ತಾಹಿಕ ಚುಚ್ಚುಮದ್ದನ್ನು ಸ್ವೀಕರಿಸಿದವು. 1,031 ದಿನಗಳ ಸರಾಸರಿ ಶೇ. 22.7ರಷ್ಟು ಏರಿಕೆಯಾಗಿದೆ ಎಂದು ಸಂಶೋಧಕರು ವರದಿ ಮಾಡಿದ್ದಾರೆ.

ಅಧ್ಯಯನದ ಸಹ-ಮುಖ್ಯಸ್ಥ ಜಾಂಗ್ ಚೆನ್ಯು ಪ್ರಕಾರ, ಚುಚ್ಚುಮದ್ದುಗಳು ಹಳೆಯ ಇಲಿಗಳಲ್ಲಿ ವಯಸ್ಸಿಗೆ ಸಂಬಂಧಿಸಿದ ಕ್ರಿಯಾತ್ಮಕ ಕ್ಷೀಣಿಸುವಿಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತವೆ ಎಂದು ತಿಳಿಸಿದ್ದಾರೆ.

ಚಿಕಿತ್ಸೆ ಅಭಿವೃದ್ಧಿಗೆ ಸಹಾಯಕ

ಈ ಚಿಕಿತ್ಸೆಯನ್ನು ಎಂದಾದರೂ ಪ್ರಾರಂಭಿಸಿದರೆ ಅದನ್ನು ಔಷಧಗಳ ಮೂಲಕ ನೀಡಲಾಗುತ್ತದೆ ಮತ್ತು ನೇರ ಪ್ಲಾಸ್ಮಾ ವಿನಿಮಯದ ಮೂಲಕ ಅಲ್ಲ ಎಂದವರು ಸ್ಪಷ್ಟಪಡಿಸಿದರು. ಇದು ಸುಲಭವಾದ ಉದ್ದೇಶಿತ ಚಿಕಿತ್ಸೆಗಳ ಅಭಿವೃದ್ಧಿಗೆ ಸಹಾಯ ಮಾಡುತ್ತದೆ ಎಂದರು.

ಚೀನೀ ತಂಡದ ಪ್ರಕಾರ, ಈ ಅಧ್ಯಯನವು ಏಳು ವರ್ಷಗಳ ಕಾಲ ನಡೆದಿದೆ. ನೂರಾರು ಇಲಿಗಳಿಂದ ಡೇಟಾವನ್ನು ಸಂಗ್ರಹಿಸಲಾಗಿದೆ. ಸಂಶೋಧಕರ ಪ್ರಕಾರ, ಎಲ್ಲಾ ಜೀವಕೋಶದ ಪ್ರಕಾರಗಳಿಂದ ಸಕ್ರಿಯವಾಗಿ ಬಿಡುಗಡೆಯಾಗುವ ಮತ್ತು ರಕ್ತ ಸೇರಿದಂತೆ ಅನೇಕ ದೈಹಿಕ ದ್ರವಗಳಲ್ಲಿ ಕಂಡುಬರುವ ಸಣ್ಣ ಬಾಹ್ಯಕೋಶೀಯ ಕೋಶಕಗಳು ( (sEV), ವಯಸ್ಸಾದ ಇಲಿಗಳಲ್ಲಿನ ವಯಸ್ಸಿಗೆ ಸಂಬಂಧಿಸಿದ ಕ್ಷೀಣಗೊಳ್ಳುವ ಬದಲಾವಣೆಗಳನ್ನು ಸರಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಇದನ್ನು ಓದಿ : ಸರ್ಕಾರದ ಸಹಾಯಕ್ಕೆ ಕಾಯದೇ ಸ್ವಂತ ಹಣದಲ್ಲಿ ಸಾರ್ವಜನಿಕ ರಸ್ತೆ ರಿಪೇರಿ ಮಾಡಿಸಿದ ವಿನೋದ್ ರಾಜ್

ಸಣ್ಣ ಬಾಹ್ಯಕೋಶೀಯ ಕೋಶಕಗಳು ಜೀವಕೋಶಗಳಾದ್ಯಂತ ನ್ಯೂಕ್ಲಿಯಿಕ್ ಆಮ್ಲಗಳು ಮತ್ತು ಪ್ರೋಟೀನ್‌ಗಳನ್ನು ಸಾಗಿಸುತ್ತವೆ. ಇದು ಮಾಹಿತಿ ಪ್ರಸರಣವನ್ನು ಸಕ್ರಿಯಗೊಳ್ಳುತ್ತದೆ. ಈ ಪ್ರಕ್ರಿಯೆಯನ್ನು ಗುರುತಿಸುವ ಮತ್ತು ಬಳಸುವ ಮೂಲಕ ಪ್ರಾಣಿಗಳ ಮೇಲಿನ ಹಿಂದಿನ ಅಧ್ಯಯನಗಳಿಗಿಂತ ಹೆಚ್ಚಿನ ಬದುಕುಳಿಯುವ ಅವಧಿಗಳನ್ನು ವೀಕ್ಷಿಸಲು ಸಾಧ್ಯವಾಯಿತು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಆಯುಷ್ಯದಲ್ಲಿ ಶೇ. 22.7ರಷ್ಟು ಹೆಚ್ಚಳ

ಆಯುಷ್ಯದಲ್ಲಿ ಶೇ. 22.7ರಷ್ಟು ಹೆಚ್ಚಳವಾದರೆ ವಿಶ್ವ ದಾಖಲೆಯಾಗುವುದು ಎಂದು ಹೇಳಿರುವ ಚೆನ್, ಸಂಶೋಧನೆಯು ಕೇವಲ ಪ್ರಾರಂಭವಾಗಿದೆ. ಆವಿಷ್ಕಾರಗಳನ್ನು ಪ್ರಾಯೋಗಿಕವಾಗಿ ಮೌಲ್ಯಮಾಪನ ಮಾಡುವ ಮೊದಲು ಮತ್ತು ಔಷಧವಾಗಿ ಅಭಿವೃದ್ಧಿಪಡಿಸುವ ಮೊದಲು ಇನ್ನೂ ಅನೇಕ ವೈಜ್ಞಾನಿಕ ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ. ಯಾವುದೇ ನಿರೀಕ್ಷಿತ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸುವ ಮೊದಲು ಮಾನವರಿಗೆ ಹೆಚ್ಚು ಹೋಲುವ ದೊಡ್ಡ ಸಸ್ತನಿಗಳಲ್ಲಿ ಪ್ರಯೋಗಗಳನ್ನು ನಡೆಸಬೇಕು ಎಂದು ಹೇಳಿದರು.

Source : https://vistaranews.com/science/chinese-scientists-increase-human-lifespan-to-130-years-research-by-chinese-scientists/646979.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsAppGroup:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *