
ಚಿತ್ರದುರ್ಗ, (ಜ.12) : ಕಣದಲ್ಲಿದ್ದ 3 ಲೋಡ್ ರಾಗಿ ಹುಲ್ಲಿನ ಬಣಿವೆಗೆ ಬುಧವಾರ ರಾತ್ರಿ ಒಂದು ಗಂಟೆ ಸುಮಾರಿಗೆ ಬೆಂಕಿ ಬಿದ್ದು ಅಂದಾಜು 50 ಸಾವಿರ ರೂಪಾಯಿ ಮೌಲ್ಯದ ರಾಗಿ ಹುಲ್ಲು ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ಜರುಗಿದೆ.
ಚಿತ್ರದುರ್ಗ : ಮಧ್ಯರಾತ್ರಿ ಬಣಿವೆಗೆ ಬೆಂಕಿ : ಸುಟ್ಟು ಕರಕಲಾದ ಲೋಡ್ ರಾಗಿ ಹುಲ್ಲು pic.twitter.com/F3BEBCPTqh
— suddione-kannada News (@suddione) January 12, 2023
ತಾಲ್ಲೂಕಿನ ಜಾನುಕೊಂಡ ಗ್ರಾಮದ ಕೃಷ್ಣಮೂರ್ತಿ ಅವರ ಕಣದಲ್ಲಿದ್ದ ಮೂರು ಲೋಡ್ ರಾಗಿ ಹುಲ್ಲಿನ ಬಣಿವೆಗೆ ಮಧ್ಯ
ರಾತ್ರಿ ಬಿದ್ದಿದೆ. ರಾತ್ರಿ ಯಾರೂ ಇಲ್ಲದ ಸಮಯದಲ್ಲಿ ಬೆಂಕಿ ಹೇಗೆ ಹೊತ್ತಿ ಕೊಂಡಿತು ಎಂಬುದು ಸಂಶಯ ಮೂಡಿಸಿದೆ. ಯಾರೂ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.
ರಾತ್ರಿ ಸಮಯದಲ್ಲಿ ಬಣಿವೆಗೆ ಬೆಂಕಿಯನ್ನು ದೂರದಿಂದಲೇ ಕಂಡ ಜನರು ಅಗ್ನಿ ಶಾಮಕ ದಳದವರಿಗೆ ಸುದ್ದಿ ತಿಳಿಸಿದಾಗ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳ ಬೆಂಕಿ ನಂದಿಸುವಲ್ಲಿ ಪ್ರಯತ್ನಿಸಿದರಾದರೂ ಬಣಿವೆ ಪೂರ್ಣ ಬೆಂಕಿಗೆ ಆಹುತಿಯಾಗಿತ್ತು.
ಈ ಘಟನೆ ರಾತ್ರಿ ನಡೆದಿರುವುದರಿಂದ ಇಂದು ಪೊಲೀಸ್ ಠಾಣೆಗೆ ದೂರು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುವುದಾಗಿ ರೈತರು ತಿಳಿಸಿದ್ದಾರೆ.
The post ಚಿತ್ರದುರ್ಗ : ಮಧ್ಯರಾತ್ರಿ ಬಣಿವೆಗೆ ಬೆಂಕಿ : ಸುಟ್ಟು ಕರಕಲಾದ ಲೋಡ್ ರಾಗಿ ಹುಲ್ಲು first appeared on Kannada News | suddione.
from ಚಿತ್ರದುರ್ಗ – Kannada News | suddione https://ift.tt/Hq94x2h
via IFTTT