ಚಿತ್ರದುರ್ಗ ಏಪ್ರಿಲ್ 20 ರಂದು 16 ನಾಮಪತ್ರ ಸಲ್ಲಿಕೆ

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ, ಸುದ್ದಿಒನ್ ನ್ಯೂಸ್, (ಏ.20) :
2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾದ ಏಪ್ರಿಲ್ 20 ರಂದು ಚಿತ್ರದುರ್ಗ ಮತಕ್ಷೇತ್ರದಲ್ಲಿ 16 ನಾಮಪತ್ರ ಸಲ್ಲಿಕೆಯಾಗಿವೆ.

ಭಾರತೀಯ ಜನತಾ ಪಕ್ಷದ ಜಿ.ಹೆಚ್.ತಿಪ್ಪಾರೆಡ್ಡಿ 3, ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ, ಕೆ.ಸಿ.ವಿರೇಂದ್ರ, ಇಂಡಿಯನ್ ಮೂವೆಂಟ್ ಪಕ್ಷದ ಮೆಹಬೂಬ್ ಪಾಷ್, ಕರ್ನಾಟಕ ಸ್ವಾಭಿಮಾನಿ ರೈತರ ಕಾರ್ಮಿಕ ಪಕ್ಷದ ಜಿ.ಸಿ.ನಾಗರಾಜ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಎಂ.ಟಿ.ಚಂದ್ರಣ್ಣ ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳಾಗಿ ಸೌಭಾಗ್ಯ, ಪಿ.ಎಸ್.ಪುಟ್ಟಸ್ವಾಮಿ, ಡಾ.ಹೆಚ್.ಕೆ.ಎಸ್.ಸ್ವಾಮಿ, ಸುರೇಶ್ ಎನ್, ಮೋಹನ್ ಕುಮಾರ್ ಆರ್., ವಿ.ಎಸ್.ಭೂತರಾಜ, ಮಹಮದ್ ಜಬೀಬುಲ್ಲಾ, ಆರ್.ಗೋಪಿನಾಥ್, ಎಂ.ಎ.ಬಸವರಾಜು ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಕೆ ಪ್ರಾರಂಭದಿಂದ ಕಡೆಯ ದಿನವಾದ ಇಂದಿನ ವರೆಗೂ ಚಿತ್ರದುರ್ಗು ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು 30  ಅಭ್ಯರ್ಥಿಗಳಿಂದ 36  ನಾಮಪತ್ರ ಸಲ್ಲಿಕೆಯಾಗಿವೆ. ಏ.21 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏ.24 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ.

The post ಚಿತ್ರದುರ್ಗ ಏಪ್ರಿಲ್ 20 ರಂದು 16 ನಾಮಪತ್ರ ಸಲ್ಲಿಕೆ first appeared on Kannada News | suddione.

from ಚಿತ್ರದುರ್ಗ – Kannada News | suddione https://ift.tt/XKVnTqR
via IFTTT

Leave a Reply

Your email address will not be published. Required fields are marked *