ಚಿತ್ರದುರ್ಗ ಸೆ. 27
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ರಾಜ್ಯದಲ್ಲಿನ ಎರಡು ರಾಷ್ಟ್ರೀಯ ಪಕ್ಷಗಳ ಬಗ್ಗೆ ಮತದಾರ ತಿಳಿದಿದ್ದಾನೆ, ಎರಡು ಪಕ್ಷಗಳು ಭಷ್ಠಾಚಾರದಲ್ಲಿ ತೂಡಗಿವೆ, ಇವನ್ನು ಹೊಡೆದೊಡಿಸಲು ಪರ್ಯಾಯ ಪಕ್ಷಕ್ಕಾಗಿ ಮತದಾರ ಹಂಬಲಿಸುತ್ತಿದ್ಧಾನೆ, ಇದನ್ನು ನಮ್ಮ ಪಕ್ಷ ಮುಂದಿನ ದಿನಮಾನದಲ್ಲಿ ಎನ್‍ಕ್ಯಾಷ್ ಮಾಡಿಕೊಳ್ಳಲಿದೆ ಎಂದು ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ಬಿ.ಜಗದೀಶ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರದಲ್ಲಿ ಶೆ, 40 ರಷ್ಟು ಲಂಚಗೊಳಿತನ ಇದೆ ಎಂದು ಮತದಾರರಿಗೆ ತಿಳಿಸುವುದರ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲೂ ಸಹಾ ಭ್ರಷ್ಠಾಚಾರ ಹೆಚ್ಚಾಗಿದೆ, ಯಾವ ಕಚೇರಿಯಲ್ಲಿ ಆದರೂ ಸಹಾ ಲಂಚ ಇಲ್ಲದೆ ಕೆಲಸವಾಗುವುದಿಲ್ಲ, ಭ್ರಷ್ಠಾಚಾರ ತಡೆಯುತ್ತೇವೆ ಎಂದು ಅಧಿಕಾರವನ್ನು ಹಿಡಿದ ಕಾಂಗ್ರೆಸ್ ಹಿಂದಿನ ಸರ್ಕಾರವನ್ನು ಮೀರಿ ಭ್ರಷ್ಠಾಚಾರ ನಡೆಯುತ್ತಿದೆ, ಇದರ ಬಗ್ಗೆ ಮತದಾರರಿಗೆ ತಿಳಿದಿದ್ದರೂ ಸಹಾ ಏನು ಮಾಡದ ಪರಿಸ್ಥಿತಿಯಲ್ಲಿ ಇದ್ದಾನೆ, ಮುಂಬರುವ ಜಿ.ಪಂ. ತಾ.ಪಂ. ಚುನಾವಣೆಯಲ್ಲಿ ನಮ್ಮ ಪಾರ್ಟಿವತಿಯಿಂದ ಎಲ್ಲಾ ಕ್ಷೇತ್ರಗಳಲ್ಲಿಯೂ ಸಹಾ ಸ್ಪರ್ದೆಯನ್ನು ಮಾಡಲಾಗುತ್ತಿದೆ ನಾವು ಮತದಾರರಿಗೆ ಯಾವುದೇ ರೀತಿಯ ಆಸೆ, ಆಮಿಷವನ್ನು ಒಡ್ಡದೆ ಮತವನ್ನು ಯಾಚನೆಯನ್ನು ಮಾಡಲಾಗುವುದು ಅಲ್ಲದೆ ನಮ್ಮಲ್ಲಿ ಸ್ಪರ್ದೆ ಮಾಡುವವರೂ ಸಹಾ ಸ್ವಚ್ಚವಾದ ಚರಿತ್ರೆಯನ್ನು ಹೊಂದಿರುವುದು ಆಗಿರಬೇಕು ಅಂತಹ ವರನ್ನು ಆಯ್ಕೆ ಮಾಡಿ ಚುನಾವಣೆಯಲ್ಲಿ ಸ್ಪರ್ದೆ ಮಾಡಿಸಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಅಧಿಕಾರವನ್ನು ನಡೆಸುತ್ತಿರುವ ಕಾಂಗ್ರೇಸ್ ಮತದಾರರಿಗೆ ಮೋಸವನ್ನು ಮಾಡುತ್ತಿದೆ, ತಮಗೆ ಬೇಕಾದ ರೀತಿಯಲ್ಲಿ ಕಾನೂನುಗಳನ್ನು ರೂಪಿಸಿಕೊಂಡು ಜನತೆಯನ್ನು ದಾರಿ ತಪ್ಪಿಸುತ್ತಿದ್ದಾರೆ, ಭ್ರಷ್ಠಾಚಾರವನ್ನು ತೆಗೆಯುತ್ತವೆ ಎಂದು ಹೇಳುವುದರ ಮೂಲಕ ಜನತೆಯನ್ನು ಭ್ರಷ್ಠಾಚಾರಕ್ಕೆ ತಳ್ಳುತ್ತಿದೆ, ರಾಜ್ಯದಲ್ಲಿನ ಎರಡು ಪಕ್ಷಗಳು ಮತದಾರರನ್ನು ಗುಲಾಮರ ರೀತಿಯಲ್ಲಿ ನೋಡುತ್ತಿದೆ, ಅವರನ್ನು ಮತದ ಬ್ಯಾಂಕ್ ಆಗಿ ಪರಿವರ್ತನೆ ಮಾಡಿಕೊಂಡು ಅವರಿಂದ ಮತವನ್ನು ಮಾತ್ರ ಪಡೆಯುತ್ತಿದ್ದಾರೆ ಅವರಿಗೆ ಯಾವುದೇ ರೀತಿಯ ಸೌಲಭ್ಯ ನೀಡುತ್ತಿಲ್ಲ ಎಂದು ಜಗದೀಶ್ ದೂರಿದರು.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಒಂದು ತಿಂಗಳಿನಿಂದ ಶಾಸಕರಲ್ಲಿ, ಇಲ್ಲಿನ ಜನತೆ ತಮ್ಮ ಸಮಸ್ಯೆ ಯನ್ನು ಯಾರ ಹತ್ತಿರ ಹೇಳಿಕೊಳ್ಳಬೇಕಿದೆ ಅವರು ಮಾಡಿದ ತಪ್ಪಿನಿಂದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಮತದಾರರು ಶಿಕ್ಷೆಯನ್ನು ಅನುಭವಿಸಬೇಕಿದೆ ಇದರ ಬಗ್ಗೆ ಸರ್ಕಾರವಾಗಲಿ ಜಿಲ್ಲಾ ಉಸ್ತುವಾರಿ ಸಚಿವರಾಗಲಿ ತಲೆ ಕೆಡಿಸಿಕೊಂಡಿಲ್ಲ ಈ ಹಿನ್ನಲೆಯಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಆಭೀವೃದ್ದಿ ಕಾರ್ಯಗಳು ಕುಂಠಿತ ವಾಗಿವೆ, ಕಾಮಗಾರಿಗಳು ನಡೆಯುತ್ತಿಲ್ಲ, ನಮ್ಮ ಸಮಸ್ಯೆಯನ್ನು ಯಾರ ಹತ್ತಿರ ಹೇಳಿಕೊಳ್ಳಬೇಕೆಂದು ಮತದಾ ರರ ತಮ್ಮ ಆಳಲನ್ನು ತೋಡಿಕೊಂಡಿದ್ದಾರೆ, ಮತವನ್ನು ಹಾಕುವ ಸಮಯದಲ್ಲಿ ಯೋಚನೆ ಮಾಡಿ ಮತದಾನ ಮಾಡಬೇಕಿದೆ ಯೋಗ್ಯರನ್ನು ಆಯ್ಕೆ ಮಾಡಬೇಕಾಗಿರುವುದು ಮತದಾರರ ಕರ್ತವ್ಯವಾಗಿದೆ ಎಂದರು.
Views: 6