ಚಿತ್ರದುರ್ಗ| ಅಕ್ರಮವಾಗಿ ನೆಲೆಸಿರುವ ಪಾಕಿಸ್ತಾನಿ ಪ್ರಜೆಗಳನ್ನು ಗುರುತಿಸಿ ಹೊರ ಹಾಕುವಂತೆ ಬಿಜೆಪಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಮೇ. 5 : ಪಾಕಿಸ್ತಾನದ ಪ್ರಜೆಗಳು ಇನ್ನೂ ಕರ್ನಾಟಕದಲ್ಲಿದ್ದು ಅವರನ್ನು ಪಾಕಿಸ್ತಾನಕ್ಕೆ ಕಳಿಸಿಕೊಡಲು ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಭಾರತೀಯ ಜನತಾ ಪಾರ್ಟಿವತಿಯಿಂದ ಮನವಿ ಸಲ್ಲಿಸಲಾಯಿತು.

ಏ.24 ರಂದು ಫಹಲ್ಟಾಮ್‍ನಲ್ಲಿ ನಡೆದ ಅತ್ಯಂತ ಪೈಶಾಚಿಕ ಭಯೋತ್ಪಾದಕರ ಕೃತ್ಯದ ಪರಿಣಾಮವಾಗಿ 26 ಜನ ಮುಗ್ಧ
ಪ್ರವಾಸಿಗರು ಕೊನೆ ಉಸಿರೆಳೆದಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿ ಪಾಕಿಸ್ತಾನದ
ಪ್ರೇರಿತ ಉಗ್ರರನ್ನು ಹೆಡೆಮುರಿಕಟ್ಟಲು ಸಾಕಷ್ಟು ಕಠಿಣ ನಿರ್ಣಯಗಳನ್ನು ತೆಗೆದುಕೊಂಡಿರುವುದನ್ನು ನಾವು ಸ್ವಾಗತಿಸಿದ್ದು,ಈ
ನಿರ್ಧಾರಗಳಲ್ಲಿ ಒಂದಾದ ಭಾರತ ದೇಶದಲ್ಲಿ ಇರತಕ್ಕಂತ ಪಾಕಿಸ್ತಾನಿ ಪ್ರಜೆಗಳು 48 ಗಂಟೆಗಳೊಳಗೆ ಹಿಂದಿರುಗಲು ಈಗಾಗಲೇ
ಸೂಚನೆಯನ್ನು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ನೀಡಿತ್ತು. ಆದರೆ ಕರ್ನಾಟಕ ರಾಜ್ಯ ಸರ್ಕಾರ ಈ ಪ್ರಕ್ರಿಯೆಯನ್ನು
ಕಠಿಣವಾಗಿ ತೆಗೆದುಕೊಳ್ಳದೆ ಇನ್ನೂ ಕೂಡ ಪಾಕಿಸ್ತಾನಿ ಪ್ರಜೆಗಳು ನಮ್ಮ ಕರ್ನಾಟಕದಲ್ಲಿ ವಾಸವಿರುವ ಮಾಹಿತಿಗಳು ಲಭ್ಯವಾಗಿವೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ತಕ್ಷಣವೇ ಇಲ್ಲಿ ವಾಸವಾಗಿರುವ ಪಾಕಿಸ್ತಾನಿ ಪ್ರಜೆಗಳನ್ನು ಪಾಕಿಸ್ತಾನಕ್ಕೆ
ಹಿಂದಿರುಗಿಸಲು ಸೂಕ್ತ ನಿರ್ದೇಶನವನ್ನು ನೀಡಬೇಕಾಗಿ ರಾಜ್ಯಪಾಲರನ್ನು ಕೇಳಿಕೊಳ್ಳಲಾಗಿದೆ

ಪೆಹಲಗಾಮ್ರದಲ್ಲಿ ಪ್ರವಾಸಿಗರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಮತ್ತು ಹತ್ಯೆಯನ್ನು ಪಾಕಿಸ್ತಾನದ ಪ್ರಾಯೋಜಿತ ಉಗ್ರರ
ದಾಳಿಯನ್ನು ನಾವೆಲ್ಲರೂ ಭಾರತೀಯರಾಗಿ ಉಗ್ರವಾಗಿ ಖಂಡಿಸಿದ್ದು,. ಕರ್ನಾಟಕ ರಾಜ್ಯ ಸರ್ಕಾರ ತಕ್ಷಣವೇ ಇಲ್ಲಿ ವಾಸವಾಗಿರುವ
ಪಾಕಿಸ್ತಾನಿ ಪ್ರಜೆಗಳನ್ನು ಪಾಕಿಸ್ತಾನಕ್ಕೆ ಹಿಂದಿರುಗಿಸಲು ಒತ್ತಡ ಮತ್ತು ಸೂಕ್ತ ನಿರ್ದೇಶನವನ್ನು ತಾವು ಕರ್ನಾಟಕ ರಾಜ್ಯ ಸರ್ಕಾರಕ್ಕೆ
ನೀಡಬೇಕೆಂದು ಮನವಿ ಮಾಡಲಾಯಿತು. ಇದೇ ರೀತಿ ಅಕ್ರಮವಾಗಿ ನೆಲೆಸಿರುವ ಪಾಕಿಸ್ತಾನಿ ಪ್ರಜೆಗಳಿಗೆ ನಮ್ಮ ಜಿಲ್ಲೆಯಲ್ಲಿ
ಗುರುತಿಸಿ ಹೊರ ಹಾಕುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಸಿದ್ದಾಪುರ, ರಾಮದಾಸ್, ಬಿಜೆಪಿ ಮುಖಂಡರಾದ ಗುಂಡಾರ್ಪಿ
ಸಿದ್ದಾರ್ಥ್, ಜೈಪಾಲಯ್ಯ, ವೆಂಕಟೇಶ್ ಯಾದವ್, ನಾಗರಾಜ್ ಬೇದ್ರೆ, ರಾಮರೆಡ್ಡಿ, ಶೈಲೇಶ್, ಶ್ರೀರಾಮ್ ರೆಡ್ಡಿ ಜಿಂಕಲ್
ಬಸವರಾಜ್, ಯಶವಂತ್, ಕಿರಣ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *