ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 87220 22817
ಚಿತ್ರದುರ್ಗ,(ಮಾ.15) : ಲಿಂಗಾಯತರ ಬಗ್ಗೆ ಅವಹೇಳಕಾರಿಯಾದ ಮಾತುಗಳನ್ನಾಡಿದ ಮಾಜಿ ವಿಧಾನ ಪರಿಷತ್ ಸದಸ್ಯರಾದ ರಘು ಆಚಾರ್ ರವರು ತಾವು ಆಡಿದ ಮಾತಿಗೆ ಬೇಷರತ್ ಆಗಿ ಕ್ಷಮೆಯನ್ನು ಕೇಳಬೇಕು ಹಾಗೂ ಒಂದು ಧರ್ಮದ ಬಗ್ಗೆ ಅವಹೇಳಕಾರಿಯಾದ ಮಾತುಗಳನ್ನು ಆಡಿದ್ದರಿಂದ ಪಕ್ಷದವರು ಅವರನ್ನು ಪಕ್ಷದಿಂದ ಉಚ್ಚಾಟನೆಯನ್ನು ಮಾಡುವಂತೆ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಕಾರ್ಯದರ್ಶಿ ಮಹೇಶ್ ಆಗ್ರಹಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ರಘು ಆಚಾರ ರವರು ಒಂದು ಉನ್ನತ ಸ್ಥಾನದಲ್ಲಿದ್ದು ಒಂದು ಸಮಾಜದ ಬಗ್ಗೆ ಹೀನಾಯಾವಾಗಿ ಮಾತನಾಡಿರುವುದು ಸರಿಯಲ್ಲ, ಈ ಹಿಂದೆ ವಿಧಾನ ಪರಿಷತ್ ಸದಸ್ಯರಾಗಿದಾಗ ಯಾವೊಂದು ಧರ್ಮ, ಜಾತಿಯನ್ನು ನೋಡದೇ ಮತವನ್ನು ನೀಡುವುದರ ಮೂಲಕ ಎರಡು ಬಾರಿ ಗೆಲ್ಲಿಸಲಾಯಿತು. ಈ ಮಧ್ಯೆ ಸಾಣೆಹಳ್ಳಿಯ ಪಂಡಿತಾರಾಧ್ಯ ಶ್ರೀಗಳ ಬಗ್ಗೆಯೂ ಸಹಾ ಅವಹೇಳನಕಾರಿ ಮಾತುಗಳನ್ನು ಆಡಿ ಸಂಕಷ್ಟಕ್ಕೆ ಸಲುಕಿದ್ದರು, ಈಗ ವೀರಶೈವ ಸಮಾಜದ ಬಗ್ಗೆ ಮಾತನಾಡಿದ್ದಾರೆ.
ಈ ಹಿನ್ನಲೆಯಲ್ಲಿ ಅವರು ಬೇಷರತ್ತ್ ಆಗಿ ಕ್ಷಮೆಯನ್ನು ಕೇಳ ಬೇಕು ಎಂದು ಒತ್ತಾಯಿಸಿದ್ದು ಇಂತಹರಿಗೆ ಪಕ್ಷದವತಿಯಿಂದ ಟಿಕೇಟ್ ನೀಡಿದರೆ ಮುಂದೆ ಪಕ್ಷಕ್ಕೂ ಸಹಾ ತೊಂದರೆಯಾಗಲಿದೆ ಈ ಹಿನ್ನಲೆಯಲ್ಲಿ ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಪಕ್ಷದ ಮುಖಂಡರನ್ನು ಒತ್ತಾಯಿಸಿದರು.
ಮಹಾಸಭಾದ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ ಮಾತನಾಡಿ, ರಘು ಆಚಾರ್ ರವರು ಬೇಷರತ್ ಆಗಿ ಕ್ಷಮೆಯನ್ನು ಕೇಳದಿದ್ದರೆ ರಾಜ್ಯಾದ್ಯಾದಂತ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು. ಅವರ ಮಾತಿನಿಂದ ಸಮಾಜಕ್ಕೆ ಧಕ್ಕೆಯಾಗಿದೆ. ನಮ್ಮಲ್ಲಿ ಯಾವುದೇ ರೀತಿಯ ಭೇದ ಭಾವ ಇಲ್ಲ, ಇಂತಹ ವ್ಯಕ್ತಿಗಳಿಂದ ಭೇದ ಬಾವ ಉಂಟು ಮಾಡುತ್ತಿದ್ಧಾರೆ. ಸಮಾಜದ ಬಗ್ಗೆ ಉಡಾಫೆ ಮಾತುಗಳನ್ನಾಡುತ್ತಿದ್ದಾರೆ ಇಂದು ಖಂಡನೀಯ ಎಂದರು.
ಸಾಮಾಜಿಕ ಜಾಲ ತಾಣಗಳಲ್ಲಿ ಬಂದಿರುವ ಮಾತು ನನ್ನದಲ್ಲ ಎನ್ನುವ ರಘು ಆಚಾರ ಇದರ ಬಗ್ಗೆ ತನಿಖೆಯನ್ನು ಮಾಡಿಸಲಿ ದೂರನ್ನು ಸಹಾ ನೀಡಲಿ ಎಂದು ಆಗ್ರಹಿಸಿದ್ದು, ಕ್ಷಮೆಯನ್ನು ಕೇಳದಿದ್ದರೆ ಮುಂದಿನ ದಿನದಲ್ಲಿ ಮಹಾಸಭಾದೊಂದಿಗೆ ಮಾತನಾಡಿ ಮುಂದಿನ ರೂಪುರೇಷೆಗಳನ್ನು ತೀರ್ಮಾನಿಸಲಾಗುವುದೆಂದು ತಿಳಿಸಿದರು.
ಸಮಾಜದ ಮುಖಂಡರಾದ ಎಸ್.ಎಂ.ಎಲ್.ತಿಪ್ಪೇಸ್ವಾಮಿ, ಕಾರ್ತಿಕ್, ಬಸವರಾಜಯ್ಯ, ರಾಜ್, ಸೇರಿದಂತೆ ಇತರರು ಭಾಗವಹಿಸಿದ್ದರು.
The post ರಘು ಆಚಾರ್ ಬೇಷರತ್ ಕ್ಷಮೆಯಾಚನೆಗೆ ಅಖಿಲ ಭಾರತ ವೀರಶೈವ ಮಹಾಸಭಾದ ಚಿತ್ರದುರ್ಗ ಜಿಲ್ಲಾ ಘಟಕ ಒತ್ತಾಯ first appeared on Kannada News | suddione.
from ಚಿತ್ರದುರ್ಗ – Kannada News | suddione https://ift.tt/4UhFI72
via IFTTT