ಚಿತ್ರದುರ್ಗ ಸೆ.18 : ಜಿಲ್ಲಾ ಆಸ್ಪತ್ರೆ ಹಾಗೂ ದಾವಣಗೆರೆ ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ ಸಹಯೋಗದಲ್ಲಿ ಸೆ.20 ರಂದು ಜಿಲ್ಲಾ ಆಸ್ಪತ್ರೆ ಬಿ.ಸಿ.ರಾಯ್ ಸಭಾಂಗಣದಲ್ಲಿ ಉಚಿತ ಕ್ಯಾನ್ಸರ್ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ ಎಂದು ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯರಾದ ವಿಘ್ನೇಶ್ ತಿಳಿಸಿದ್ದಾರೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಇಂದಿನ ದಿನಮಾನದಲ್ಲಿ ವಿವಿಧ ರೀತಿಯ
ಕ್ಯಾನ್ಸರ್‍ಗಳು ಜನರಲ್ಲಿ ಕಂಡು ಬರುತ್ತಿವೆ. ಇದರ ನಿವಾರಣೆಗೆ ಅಧುನಿಕ ತಂತ್ರಜ್ಞಾನವೂ ಸಹಾ ನೆರವಾಗಿದೆ, ಧೀರ್ಘಕಾಲ ಮಾಯದ
ಹುಣ್ಣು, ಗಡ್ಡೆಯ ತ್ವರಿತ ಬೆಳವಣಿಗೆ, ಧ್ವನಿಯ ಬದಲಾವಣೆ, ನುಂಗಲು ತೊಂದರೆ, ಮುಟ್ಟು ನಿಂತ ಮೇಲು ಪುನಃ ಅನಿಯಮಿತ
ಮುಟ್ಟಾಗುವುದು, ಬಿಳಿಯ ಮುಟ್ಟು ಹೋಗುತ್ತಿರುವುದು ಸೇರಿದಂತೆ ವಿವಿಧ ರೀತಿಯ ಲಕ್ಷಣಗಳಿಂದ ಕ್ಯಾನ್ಸರ್ ಉಂಟಾಗಬಹುದಾಗಿದೆ.
ನಮ್ಮಲ್ಲಿ ಆಧುನಿಕವಾದ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ರೋಗವನ್ನು ತಡೆಯಬಹುದಾಗಿದೆ ಎಂದರು.
ಚಿತ್ರದುರ್ಗದಲ್ಲಿ ಸೆ. 20 ರಂದು ಜಿಲ್ಲಾ ಆಸ್ಪತ್ರೆಯ ಬಿ.ಸಿ.ರಾಯ್ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಯಿಂದ 3 ಗಂಟೆಯವರೆಗೂ ತಪಾಸಣೆ
ನಡೆಸಲಾಗುವುದು. ಚಿತ್ರದುರ್ಗದ ಜಿಲಾ ಆಸ್ಪತ್ರೆಯಲ್ಲಿ ಪ್ರಾರಂಭಿಕವಾದ ತಪಾಸಣೆಯನ್ನು ಮಾಡಲಾಗುವುದು, ತದ ನಂತರ ಹೆಚ್ಚಿನ
ಚಿಕಿತ್ಸೆಗಾಗಿ ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಗೆ ಕಳುಹಿಸಲಾಗುವುದು ಸಾರ್ವಜನಿಕರು ಈ ಶಿಬಿರದ
ಸದುಪಯೋಗ ಪಡಿಸುಕೊಳ್ಳುವಂತೆ ಮನವಿ ಮಾಡಿದರು.
ನೊಂದಣಿಗಾಗಿ ಮೊಬೈಲ್ ಸಂಖ್ಯೆ 9844458881 ಹಾಗೂ 974255516 ಸಂಪರ್ಕಿಸಬಹುದು.
ಗೋಷ್ಟಿಯಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ. ರವೀಂದ್ರ ,ಶಿಬಿರ ಸಂಚಾಲಕರಾದ ರಾಘವೇಂದ್ರ ಉಪಸ್ಥಿತರಿದ್ದರು.
Views: 0