ಚಿತ್ರದುರ್ಗವನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿ ಬೆಳೆ ಸಾಲ ಮನ್ನಾ ಮಾಡಿ: ರೈತ ಸಂಘ-ಹಸಿರು ಸೇನೆ ಆಗ್ರಹ.

ಚಿತ್ರದುರ್ಗ ಜು. 24

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜಿಲ್ಲೆಯನ್ನು ಬರಗಾಲವೆಂದು ಘೋಷಣೆ ಮಾಡಿ ರಾಷ್ಟ್ರೀಕೃತ ಮತ್ತು ಸಹಕಾರ ಸಂಘಗಳಲ್ಲಿ ಬೆಳೆ ಸಾಲವನ್ನು ಮನ್ನ ಮಾಡಬೇಕು. ಭದ್ರಾ ಮೇಲ್ದಂಡೆ ಯೋಜನೆ ಬಹಳ ವಿಳಂಭವಾಗಿದ್ದು ತಕ್ಷಣ ಕಾಮಗಾರಿಯನ್ನು ಮುಗಿಸಿ ಬಿಟ್ಟುಹೋಗಿರುವ ಕೆರೆಗಳನ್ನು ತುಂಬಿಸಲು ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಗೆ ತಂದು ರೈತರ ನೆರವಿಗೆ ಬರಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೆÀರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆಯನ್ನು ನಡೆಸಿ ಜಿಲ್ಲಾಧಿಕಾರಿಗಲ ಮೂಲಕ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರನ್ನು ಆಗ್ರಹಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯು ಸದಾ ಬರಗಾಲಕ್ಕೆ ತುತ್ತಾಗುತ್ತಿದ್ದು, ಕಳೆದ ವರ್ಷ ಸಹ ಮಳೆ ಬೆಳೆ ಇಲ್ಲದೇ ಅಲ್ಪ ಸ್ವಲ್ಪ ಬೆಳೆದ ಬೆಳೆಗೆ ಬೆಲೆಯಿಲ್ಲದೇ ರೈತರು ಕಂಗಾಲಾಗಿದ್ದು ಈ ವರ್ಷ ಸಹ ಎಲ್‍ನೀನೋ ಪ್ರಭಾವದಿಂದ ಅಲ್ಪ ಸ್ವಲ್ಪ ಮಳೆಗೆ ರೈತರು ಬಿತ್ತನೆ ಮಾಡಿ ಮಳೆ ಇಲ್ಲದೇ ಬೆಳೆದ ಬೆಳೆಯೆಲ್ಲ ಒಣಗಿ ಹೋಗಿದ್ದು, ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಇಲ್ಲಿ ಯಾವ ನದಿ ನಾಲೆಗಳಿಲ್ಲದೇ ರೈತರು ಬೋರ್‍ವೆಲ್‍ಗಳನ್ನೇ ನಂಬಿ ವ್ಯವಸಾಯ ಮಾಡುತ್ತಿದ್ದು ಬೋರ್‍ವೆಲ್‍ಗಳು ಸಹ ಬರಿದಾಗಿದ್ದು ರೈತರು ತಮ್ಮ ತೋಟಗಳನ್ನು ಉಳಿಸಿಕೊಳ್ಳಲು ಅರೇಸಾಹಸ ಪಡುತ್ತಿದ್ದಾರೆ. ಆದ್ದರಿಂದ ಭದ್ರಾಮೇಲ್ದಂಡೆ ಯೋಜನೆ ಕಾಮಗಾರಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪ್ರತಿನಿಧಿಗಳ ಇಚ್ಚಶಕ್ತಿ ಕೊರತೆಯಿಂದ ಮತ್ತು ಹಣ ಮೀಸಲು ಇಡದೇ ಇರುವುದರಿಂದ ಬಹಳ ವಿಳಂಬವಾಗಿರುತ್ತದೆ. ಆದ್ದರಿಂದ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ರೈತವರ್ಗದವರಿಗೆ ಯಾವುದೇ ಪ್ರಯೋಜನೆ ಆಗಿರುವುದಿಲ್ಲ, ಆದರಿಂದ ಗ್ಯಾರಂಟಿಗೆ ಕೊಟ್ಟಿರುವ ಹಣವನ್ನು ಭದ್ರಾ ಮೇಲ್ದಂಡೆ ಯೋಜನೆಗೆ ವಿನಿಯೋಗಿಸಿ ರೈತರ ನೇರವಿಗೆ ಬರಬೇಕೆಂದು ಮತ್ತು ರೈತರ ಬೇಡಿಕೆÀಗಳನ್ನು ತಕ್ಷಣ ಈಡೇರಿಸಿ ಸರ್ಕಾರ ರೈತರ ನೆರವಿಗೆ ಬರಬೇಕೆಂದು ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲೆಯನ್ನು ಬರಗಾಲವೆಂದು ಘೋಷಣೆ ಮಾಡಿ ರಾಷ್ಟ್ರೀಕೃತ ಮತ್ತು ಸಹಕಾರ ಸಂಘಗಳಲ್ಲಿ ಬೆಳೆ ಸಾಲವನ್ನು ಮನ್ನ ಮಾಡಬೇಕು.ಕಳೆದ ವರ್ಷ ಬೆಳೆ ವಿಮೆಯಲ್ಲಿ ಅಧಿಕಾರಿಗಳು ಮತ್ತು ಬೆಳೆ ವಿಮೆ ಕಂಪನಿಗಳು ಶಾಮಿಲಾಗಿ ರೈತರಿಗೆ ಮೋಸ ಮಾಡಿರುತ್ತಾರೆ. ಇದರಿಂದ ರೈತರಿಗೆ ಬಹಳ ಅನ್ಯಾಯವಾಗಿದ್ದು ಮುಂದೆ ಈ ರೀತಿ ಆಗದಂತೆ ಕ್ರಮವನ್ನು ವಹಿಸಬೇಕು. ಬೆಸ್ಕಾಂ ಇಲಾಖೆಯಲ್ಲಿ ರೈತರ ಪಂಪ್‍ಸೆಟ್‍ಗಳಿಗೆ ಸ್ವಯಂ ವೆಚ್ಚದಿಂದ ಮೂಲಭೂತ ಸೌಕರ್ಯಗಳನ್ನು ಒದಗಿಸಲು 2 ರಿಂದ 3 ಲಕ್ಷ ಆಗುತ್ತಿದ್ದು. ಇದರಿಂದ ರೈತರಿಗೆ ಬಹಳ ಹೊರೆಯಾಗಿದ್ದು ತಕ್ಷಣ ಅಕ್ರಮ ಸಕ್ರಮದಡಿಯಲ್ಲಿ ಬಹಳ ಬ್ರಷ್ಟಚಾರ ನಡೆದಿದ್ದು ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು.

ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹಣ ಬಿಡುಗಡೆ ಮಾಡಬೇಕು. ಮತ್ತು ರೈತರ ತೋಟದ ಮನೆಗಳಿಗೆ ವಿದ್ಯುತ್ ಒದಗಿಸಲು ಅವಕಾಶವಿದ್ದರು ಸಹ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರು ತೋಟದ ಮನೆಗಳಲ್ಲಿ ಕತ್ತಲಲ್ಲಿ ವಿಷಜಂತುಗಳ ಭಯದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಕಂದಾಯ ಇಲಾಖೆಯಲ್ಲಿ ಪೌತಿ ಖಾತೆ, ಸರ್ವೇ ಕಾರ್ಯಗಳು, ಪೋಡ್‍ದುರಸ್ಥಿ, ಮತ್ತು ರೈತರ ಪಹಣಿಯಲ್ಲಿ ತಪ್ಪುಗಳನ್ನು ಸರಿಪಡಿಸಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದು ರೈತರನ್ನು ಅಲೆದಾಡಿಸುತ್ತಿದ್ದು ಇದರಿಂದಾಗಿ ರೈತರಿಗೆ ತೊಂದರೆಯಾಗಿದ್ದು ತಕ್ಷಣ ಸರಿಪಡಿಸಬೇಕು.ಭದ್ರಾ ಮೇಲ್ದಂಡೆ ಯೋಜನೆ ಬಹಳ ವಿಳಂಭವಾಗಿದ್ದು ತಕ್ಷಣ ಕಾಮಗಾರಿಯನ್ನು ಮುಗಿಸಿ ಬಿಟ್ಟುಹೋಗಿರುವ ಕೆರೆಗಳನ್ನು ತುಂಬಿಸಲು ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಗೆ ತಂದು ರೈತರ ನೆರವಿಗೆ ಬರಬೇಕು.ತೋಟಗಾರಿಕೆ ಇಲಾಖೆಯಲ್ಲಿ ರೈತರಿಗೆ ಕೊಡುವ ಹನಿ ನೀರಾವರಿ ಅನುದಾನ ನಿಲುಗಡೆಯಾಗಿದ್ದು ಅನುದಾನವನ್ನು ತಕ್ಷಣ ಬಿಡುಗಡೆ ಮಾಡಬೇಕು.

ಚಿತ್ರದುರ್ಗ ಜಿಲ್ಲೆ ಮತ್ತು ತುಮಕೂರು ಜಿಲ್ಲೆಯನ್ನು ರಾಸಾಯನಿಕ ಗೊಬ್ಬರವನ್ನು ಆಫ್ ಮೂಲಕ ಕೊಡುತ್ತಿದ್ದು ಇದು ರೈತರಿಗೆ ತೊಂದರೆಯಾಗಿರುತ್ತದೆ. ಆದ್ದರಿಂದ ಮೊದಲನೇ ರೀತಿ ವಿತರಣೆ ಮಾಡಬೇಕು. ಹೊಳಲ್ಕೆರೆ ತಾಲ್ಲೂಕು ಮತ್ತು ಮೊಳಕಾಲ್ಮೂರು ತಾಲ್ಲೂಕು ಗಳಲ್ಲಿರುವ ಕೆ.ಎಸ್.ಆರ್.ಟಿ.ಸಿ. ಡಿಪೋ ಕಾಮಗಾರಿ ಮುಗಿದಿದ್ದು, ತಕ್ಷಣ ಉದ್ಘಾಟನೆ ಮಾಡಿ ಗ್ರಾಮೀಣ ಸಾರಿಗೆ ವಿಸ್ತರಿಸಬೇಕೆಂದು ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜನ್, ಜಿಲ್ಲಾ ಪ್ರಧಾನ ಕಾರ್ಯದಶಿ ಆರ್.ಬಿ.ನಿಜಲಿಂಗಪ್ಪ, ಶಿವಮೂರ್ತಿ, ಸಂಜೀವಪ್ಪ, ನಾಗರಾಜ್, ಸಿದ್ದಪ್ಪ, ಸುರೇಂದ್ರ, ನಿಂಗರಾಜು, ರಾಜಶೇಖರಪ್ಪ, ಶಿವಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.

Follow the ಸಮಗ್ರ ಸುದ್ದಿ Telegram Channel: https://t.me/SamagraSuddi

ಸಮಗ್ರ ಸುದ್ದಿ channel on WhatsApp: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *