ಚಿತ್ರದುರ್ಗ ಅ. 25
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಬಣ್ಣಗಳ ಮೂಲಕ ಕುಂಚದಲ್ಲಿ ಭಾವನೆಗಳನ್ನು ಮೂಡಿಸುವುದು ಅತ್ಯಂತ ಸೂಕ್ಷ್ಮ, ಸಂವೇದನಾಶೀಲಾ ಹಾಗೂ ಕ್ರಿಯಾಶೀಲ ಕಾರ್ಯವಾಗಿದೆ ಎಂದು ಜಿ.ಪಂ.ಮಾಜಿ ಅಧ್ಯಕ್ಷೆ ಶ್ರೀಮತಿ ಸೌಭಾಗ್ಯ ಬಸವರಾಜನ್ ತಿಳಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನ ಸಹಾಯ ಆಶ್ರಯದಲ್ಲಿ ನವೀನ್ ಬೇದ್ರೇಯವರ ಏಕ ವ್ಯಕ್ತಿ ಚಿತ್ರ ಕಲಾ ಪ್ರದರ್ಶನದ ದೃಶ್ಯ ಕಲಾ ವೈಭವವೂ ನಗರದ ವಾಸವಿ ಶಾಲೆಯ ಮುಂಭಾಗದ ತ್ಯಾಗರಾಜ್ ಬೀದಿಯ ಲ್ಲಿನ ಶ್ರೀ ಶಂಕರನಾರಾಯಣ ದೇವಸ್ಥಾನದ ಸಭಾಂಗಣದಲ್ಲಿ ನಡೆದ ನವೀನ್ ಬೇದ್ರೇ ರವರ ಚಿತ್ರಕಲೆಯನ್ನು ವೀಕ್ಷಿಸಿ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಚಿತ್ರಕಲೆಯು ಮನುಷ್ಯನ ಭಾವನೆಗಳನ್ನು ಅಭಿವ್ಯಕ್ತಪಡಿಸುವ ಅತ್ಯಂತ ಶ್ರೇಷ್ಠ ಮಾಧ್ಯಮವಾಗಿದೆ. ಇಂತಹ ಪ್ರದರ್ಶನಗಳು ಯುವ ಕಲಾವಿದರಿಗೆ ಸೂಕ್ತ ವೇದಿಕೆಯನ್ನು ಒದಗಿಸುತ್ತವೆ, ಚಿತ್ರಕಲೆ, ಸಾಹಿತ್ಯ ಮತ್ತು ಸಂಗೀತದಂತಹ ಕಲೆಗಳು ಎಲ್ಲರಿಗೂ ಸಾಧ್ಯವಲ್ಲ. ಅವು ಮನದಾಳದ ಭಾವನೆಗಳಿಗೆ ಭೌತಿಕ ರೂಪ ನೀಡುವ ಮಹತ್ವದ ಕಾರ್ಯವಾಗಿದ್ದು, ಚಿತ್ರಕಲೆ ಎಂದರೆ ಒಂದು ರೀತಿಯ ತಪ್ಪಸ್ಸು ಇದ್ದಂತೆ, ಅಂತರಂಗದ ಭಾವನೆಗಳನ್ನು ಅಕ್ಷರಗಳಲ್ಲಿ ವ್ಯಕ್ತಪಡಿಸಿದರೆ ಸಾಹಿತ್ಯ, ಬಣ್ಣಗಳ ಮೂಲಕ ಮೂಡಿಸಿದರೆ ಚಿತ್ರಕಲೆ. ಆದರೆ ಚಿತ್ರಕಲೆ ಕೇವಲ ಭಾವ ಮತ್ತು ಬಣ್ಣಗಳ ಮಿಲನವಲ್ಲ. ಕಲಾವಿದನ ನಂತರವೂ ಆತನ ಕಲಾ ಕೃತಿಗಳು ಆತನನ್ನು ಅಮರನಾಗಿ ಸುತ್ತೇವೆ. ಕಲೆಗೆ ಕಲಾವಿದರು ಪಡುವ ಪರಿಶ್ರಮ ಹಾಗೂ ಮುಡಿಪಾಗುವ ಪ್ರಕ್ರಿಯೆಯಿಂದಾಗಿ ಅದ್ಬುತ ಕಲಾವಿದರ ಸದಾ ಸ್ಮರಣೆಯರಾಗಿ ಉಳಿಯುತ್ತಾರೆ ಎಂದರು.
ಕಲೆ ಕೇವಲ ಮನರಂಜನೆಯಲ್ಲ. ಅದು ಸಮಾಜದ ಪ್ರತಿಬಿಂಬವಾಗಿದ್ದು, ಸಮಾಜಕ್ಕೆ ಸಂದೇಶವನ್ನೂ ನೀಡುತ್ತದೆ. ಬಣ್ಣಗಳ ಮೂಲಕ ಕುಂಚದಲ್ಲಿ ಭಾವನೆಗಳನ್ನು ಮೂಡಿಸುವುದು ಅತ್ಯಂತ ಸೂಕ್ಷ್ಮ, ಸಂವೇದನಾ ಶೀಲಾ ಹಾಗೂ ಕ್ರಿಯಾಶೀಲ ಕಾರ್ಯವಾಗಿದೆ. ಕಲೆಗೆ ಬೆಲೆ ಕಟ್ಟಲಾಗದು. ಎಲ್ಲರಿಗೂ ಕಲೆ ಸಿದ್ಧಿಸುವುದಿಲ್ಲ. ಚಿತ್ರಕಲೆಯಲ್ಲಿ ಒಂದೇ ಚಿತ್ರದಲ್ಲಿ ಹಲವು ಅರ್ಥಗಳು ಸ್ಪುರಿಸುತ್ತವೆ. ಬಳಸಿರುವ ಬಣ್ಣಗಳಲ್ಲಿ ಕಲಾವಿದರ ಭಾವನೆಗಳ ಜತೆಗೆ ಸಾಮಾಜಿಕ ಮತ್ತು ಸಾಂಸ್ಕøತಿಕ ಪ್ರಭಾವವು ಅಡಗಿರುತ್ತದೆ. ಒಂದೊಂದು ಚಿತ್ರವೂ ನೂರಾರು ಕಥೆಗಳನ್ನು ಹೇಳುತ್ತವೆ. ಒಂದು ಚಿತ್ರ ಇಡೀ ಸಮಾಜದ ಕಥೆಯಾಗಿ, ಕಲಾವಿದನ ಪರಿಶ್ರಮದಿಂದ ಜನಿಸಿದ ಶಿಶುವಿನಂತಿರುತ್ತದೆ. ಈ ಚಿತ್ರಕಲಾ ಪ್ರದರ್ಶನವೂ ಯುವ ಕಲಾವಿದರಿಗೆ ಪ್ರೇರಣೇ ಮತ್ತು ಸ್ಪೂತಿಯಾಗಲಿ ನವೀನ್‍ರವರು ತಮ್ಮ ಕಲ್ಪನೆಗಳಿಗೆ ಚಿತ್ರದ ರೂಪ ನೀಡುವಲ್ಲಿ ನಿಸ್ಸೀಮರಾಗಿದ್ದಾರೆ ಕಲೆ ಹಾಗೂ ಕಲಾವಿದರನ್ನು ಎಲ್ಲರೂ ಪ್ರೋತ್ಸಾಹಿಸಬೇಕು ಕಲೆ ಭಾಷಾತೀತವಾಗಿದೆ. ಕಲಾವಿದನಿಗೆ ಸಮಾಜದಲ್ಲಿ ವಿಶಿಷ್ಟ ಸ್ಥಾನಮಾನವಿದ್ದು, ಚಿತ್ರಕಲೆಯನ್ನು ಅನಕ್ಷರಸ್ಥನು ಸಹ ಅದರಲ್ಲಿನ ಭಾವನೆಗಳನ್ನು ತಿಳಿದುಕೊಳ್ಳ ಬಹುದಾಗಿದೆ ಎಂದು ತಿಳಿಸಿದರು.


ದೃಶ್ಯ ಕಲಾ ವೈಭವದಲ್ಲಿ ಪ್ರಕೃತಿ ಸೌಂದರ್ಯ, ಗ್ರಾಮೀಣ ಜೀವನ, ಭಾರತೀಯ ಸಂಸ್ಕೃತಿ ಮತ್ತು ಆಧುನಿಕ ಅಮೂರ್ತ ಕಲೆ ಸೇರಿದಂತೆ ವೈವಿಧ್ಯಮಯ ಶೈಲಿಯ ತೈಲಚಿತ್ರಗಳು ಜಲವರ್ಣ ಹಾಗೂ ರೇಖಾಚಿತ್ರಗಳು ಪ್ರದರ್ಶನದಲ್ಲಿ ಕಲಾಪ್ರೇಮಿಗಳ ಗಮನ ಸೆಳೆದವು. ನೂರಾರು ಕಲಾ ಪ್ರೇಮಿಗಳು, ಸಾರ್ವಜನಿಕರು ಮತ್ತು ವಿವಿಧ ಕಲಾ ಕಾಲೇಜುಗಳ ವಿದ್ಯಾರ್ಥಿಗಳು ಪ್ರದರ್ಶನಕ್ಕೆ ಭೇಟಿ ನೀಡಿ ಕಲಾಕೃತಿಗಳನ್ನು ಕಣ್ಣುಂಬಿಕೊಂಡರು.
ಈ ಸಂದರ್ಭದಲ್ಲಿ ಚಿತ್ರಕಲಾವಿದ ನವೀನ್‍ಬೇದ್ರೇ, ಪಟ್ಟೆವಸಂತರಾವ್, ಬಾಲಚಂದ್ರ ದೀಕ್ಷಿತ್ ಉಪಸ್ಥಿತರಿದ್ದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು