ಚಿತ್ರದುರ್ಗ| ಫೆ.3 ಮತ್ತು 4 ರಂದು ಶ್ರೀ ಪಾಂಡುರಂಗ ರುಕ್ಕಿಣಿ ದೇವರ ದಿಂಡಿ ಉತ್ಸವ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜ. 24 : ರಾ.ಹೆ.4ರ ದಾವಣಗೆರೆ ರಸ್ತೆಯ ಲಕ್ಷ್ಮಿಸಾಗರ ಗೇಟ್ ಎದುರಿನ ಶ್ರೀ ತುಳಜಾ ಭವಾನಿ ದೇವಸ್ಥಾನ ಸೇವಾ ಟ್ರಸ್ಟ್ ನ ವತಿಯಿಂದ ಚಿತ್ರದುರ್ಗ ಶ್ರೀ ತುಳಜಾ ಭವಾನಿ ದೇವಸ್ಥಾನದ 3ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ದಿನಾಂಕ: 3 ಮತ್ತು 4ನೇ ಫೆಬ್ರವರಿ 2025 ರಂದು ಶ್ರೀ ಪಾಂಡುರಂಗ ರುಕ್ಕಿಣಿ ದೇವರ ದಿಂಡಿ ಉತ್ಸವ ದಿನಾಂಕ: 4ನೇ ಫೆಬ್ರವರಿ 2025 ರಂದು ಅಮ್ಮನವರಿಗೆ ವಿಶೇಷ

ಅಭಿಷೇಕ ಪೂಜೆ, ಗಣಪತಿ ಪೂಜೆ ಹಾಗೂ ದುರ್ಗಾ ಹೋಮವನ್ನು ನೆರವೇರಿಸಲಾಗುವುದು ಎಂದು ಅಧ್ಯಕ್ಷರಾದ ಎಂ.ಎ.ಸತೀಶ್ ಮಹಳರ್ ತಿಳಿಸಿದ್ದಾರೆ.

ಮಧ್ಯಾಹ್ನ 1:00 ಗಂಟೆಗೆ ಮಹಾಪ್ರಸಾದ ವಿನಿಯೋಗ ನಡೆಯಲಿದ್ದು, ಭಕ್ತಾಧಿಗಳು ದಾನಿಗಳು ತನು, ಮನ ಹಾಗೂ ಧನದ ಸಹಕಾರದೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯದರ್ಶಿ ಸಂತೋಷ್ ಮಹಳರ್ ಕೋರಿದ್ದಾರೆ,

Views: 0

Leave a Reply

Your email address will not be published. Required fields are marked *