ಚಿತ್ರದುರ್ಗ ಎಸ್‌ಜೆಎಂ ವಿದ್ಯಾಪೀಠ: ಜು.18ರಂದು ವಿದ್ಯಾರ್ಥಿ ವೇದಿಕೆ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಸಮಾರಂಭ.

ಚಿತ್ರದುಗ್ ಜು. 17

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಎಸ್.ಜೆ.ಎಂ. ವಿದ್ಯಾಪೀಠ(ರಿ) ಚಿತ್ರದುರ್ಗ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಗಾರೆಹಟ್ಟಿ ರಸ್ತೆಯ ಮಹಾಬಲೇಶ್ವರ ದೇವಸ್ಥಾನದ ಆವರಣದ ಶ್ರೀ ಬೃಹನ್ಮಠ ಸಂಯುಕ್ತ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಜು. 18ರ ಶನಿವಾರ ಬೆಳಿಗ್ಗೆ 10.30ಕ್ಕೆ 2026-27 ವಿದ್ಯಾರ್ಥಿ ವೇದಿಕೆ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ (ಕ್ರೀಡಾಹಾಗೂಇತರೆಚಟುವಟಿಕೆಗಳು) ಕಾರ್ಯಕ್ರಮವೂ ಕಾಲೇಜು ಆವರಣದಲ್ಲಿ ನಡೆಯಲಿದೆ.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಶ್ರೀ ಬಸವಕುಮಾರ ಸ್ವಾಮೀಜಿ ಹಾಗೂ ದಾವಣಗೆರೆಯ ವಿರಕ್ತಮಠ ಹಾಗೂ ಚಿತ್ರದುರ್ಗದ ಶ್ರೀ ಮುರುಘಾ ಮಠದ ಡಾ. ಶ್ರೀ ಬಸವಪ್ರಭು ಸ್ವಾಮೀಜಿ ವಹಿಸಲಿದ್ದಾರೆ. ಸಮಾರಂಭದ ಉದ್ಘಾಟನೆಯನ್ನು ಶಾಸಕರಾದ ಕೆ.ಸಿ. ವೀರೇಂದ್ರ ಪಪ್ಪಿ ನಡೆಸಲಿದ್ದು, ನಿವೃತ್ತ ಉಪನ್ಯಾಸಕರು ಹಾಗೂ ಕವಿಗಳಾದ ನಿಸಾರ್ ಅಹಮದ್, ಎಸ್.ಜೆ.ಎಂ. ಸ್ವತಂತ್ರ ವಿಜ್ಞಾನ ಪ.ಪೂ ಕಾಲೇಜಿನ ಪ್ರಾಂಶುಪಾಲರಾದ ತಿಪ್ಪೇಸ್ವಾಮಿ .ಎನ್.ಬಿ. ಭಾಗವಹಿಸ ಲಿದ್ದಾರೆ.

ಇದೇ ಸಂದರ್ಭದಲ್ಲಿ ಗಾರೆಹಟ್ಟಿಯ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ತಿಪ್ಪೇಸ್ವಾಮಿ .ಎಸ್, ಪದವಿ ಪೂರ್ವ ಇಲಾಖೆಯ ಎನ್.ಜಿ.ಓ. ನಿರ್ದೇಶಕರಾದ ಎ. ನಾಗರಾಜ್, ನಿವೃತ್ತ ಶಿಕ್ಷಕರಾದ ಎನ್. ಆರ್. ಸಿದ್ದಪ್ಪ ಹಾಗೂ 2026ನೇ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಾದ ಕಲಾ ವಿಭಾಗದಲ್ಲಿ ಕುಮಾರಿ ಸುರಕ್ಷಾ ಭೀಮಸಿ ಹಳ್ಳೂರ, ವಿಜ್ಞಾನ ವಿಭಾಗದಲ್ಲಿ ಕುಮಾರಿ ಸೈಯದ ಸಿಮ್ರಾನ್ .ಕೆ ಮತ್ತು ವಾಣಿಜ್ಯ ವಿಭಾಗದಲ್ಲಿ ಕುಮಾರಿ ರಕ್ಷಿತ .ಟಿರವರನ್ನು ಸನ್ಮಾನಿಸಲಾಗುವುದು.

ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಕುಮಾರ ಭಗವಂತ .ಟಿ, ಸಹಕಾರ್ಯದರ್ಶಿ ಕುಮಾರಿ ಅಶ್ವಿನಿ .ಎಸ್ ಕ್ರೀಡಾ ಕಾರ್ಯದರ್ಶಿ ಕುಮಾರ್ ವಿನಯ್ ಕುಮಾರ್. ಕೆ.ಬಿ. ಸಾಂಸ್ಕೃತಿಕ ಕಾರ್ಯದರ್ಶಿ ಕುಮಾರಿ ಗಾಯತ್ರಿ .ಪಿ, ಪ್ರವಾಸ ಕಾರ್ಯದರ್ಶಿ ಕುಮಾರ ತೇಜಸ್ ನಾಯ್ಕ ಕೆ. ಭಾಗವಹಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಬೃಹನ್ಮಠ ಸಂ.ಪ.ಪೂ.ಕಾಲೇಜಿನ ಪ್ರಾಂಶುಪಾಲರಾದ ಪಿ.ಎಂ.ಜಿ. ರಾಜೇಶ್ ವಹಿಸಲಿದ್ದಾರೆ.

Leave a Reply

Your email address will not be published. Required fields are marked *