ಚಿತ್ರದುರ್ಗದಲ್ಲಿ ಸ್ವದೇಶಿ ಮೇಳಕ್ಕೆ ಭಕ್ತಿ ಚಾಲನೆ: ದೇಸಿ ಉತ್ಪನ್ನಗಳು, ಕ್ರೀಡೆ, ಸಂಸ್ಕೃತಿಯ ಮಹಾ ಸಂಭ್ರಮ ಆರಂಭ
ಚಿತ್ರದುರ್ಗ ನ. 12
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಕೋಟೆನಗರಿ ಚಿತ್ರದುರ್ಗದಲ್ಲಿ ನ. 12ರಿಂದ 16ರವರೆಗೆ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ನಡೆಯುವ ಸ್ವದೇಶಿ ಜಾಗರಣ ಮಂಚ್ ಆಯೋಜಿಸಿರುವ ಸ್ವದೇಶಿ ಮೇಳ ಇಂದಿನಿಂದ ಪ್ರಾರಂಭವಾಗಿದ್ದು ಇಂದು ಬೆಳ್ಳಿಗೆ ಯಾದವ ಮಠದ ಶ್ರೀ ಕೃಷ್ಣಯಾದವನಂದ ಶ್ರೀಗಳು ಗೋವನ್ನು ಪೂಜೆ ಮಾಡುವುದರ ಮೂಲಕ ಚಾಲನೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಕೃಷ್ಣಯಾದವನಂದ ಶ್ರೀಗಳು ನಮ್ಮಲ್ಲಿ ಗುಡಿ ಕೈಗಾರಿಕೆಗಳು ಹೆಚ್ಚಾಗಿ ಬೆಳಕಿಗೆ ಬರಬೇಕಿದೆ, ಇವುಗಳು ತಯಾರು ಮಾಡಿದ ಉತ್ಪನ್ನಗಳನ್ನು ನಮ್ಮ ಜನತೆ ಖರೀದಿ ಮಾಡಬೇಕಿದೆ, ನಮ್ಮಲ್ಲಿ ಉತ್ಪಾದನೆಯಾಗುವ ವಸ್ತುಗಳಿಗೆ ಸರಿಯಾದ ಮಾರುಕಟ್ಟೆ ಸಿಗಬೇಕಿದೆ ಇದರ ಜೊತೆಗೆ ಬೆಲೆಯೂ ಸಹಾ ಸಿಕ್ಕಾಗ ಮಾತ್ರ ಉತ್ಪಾದಕ ಚನ್ನಾಗಿ ಇರಲು ಸಾಧ್ಯವಿದೆ, ಜಾಗರಣ ಮಂಚ್ ಉತ್ತಮವಾದ ಕಾರ್ಯಕ್ರಮವನ್ನು ಮಾಡಿದೆ ಸಣ್ಣ ಪ್ರಮಾಣದ ಗುಡಿ ಕೈಗಾರಿಕೆಗಳಿಗೆ ಸರಿಯಾದ ರೀತಿಯ ಮಾರುಕಟ್ಟೆ ಇರುವುದಿಲ್ಲ, ಇಂತಹ ಕಾರ್ಯಕ್ರಮಗಳಿಗೆ ಬರುವುದರ ಮೂಲಕ ಗ್ರಾಹಕರನ್ನು ಸೆಳೆಯುವ ಕಾರ್ಯವಾಗುತ್ತದೆ. ಈ ರೀತಿಯಾದ ಕಾರ್ಯಕ್ರಮ ಚಿತ್ರದುರ್ಗದಲ್ಲಿ ನಡೆದಿಲ್ಲ, ಈಗ ನಡೆಯುತ್ತಿದೆ ಎಂದರು.
ಇಲ್ಲಿ ನಡೆಯುವ ಸ್ವದೇಶಿ ಮೇಳ ನಮ್ಮ ಜನರನ್ನು ಆಕರ್ಷಿಸುವ ಮೇಳವಾಗಿದೆ. ಇದರಲ್ಲಿ ಚಿತ್ರದುರ್ಗ ಜಿಲ್ಲೆಯ ಜನತೆ ಸಕ್ರಿಯವಾಗಿ ಭಾಗವಹಿಸುವುದರ ಮೂಲಕ ಸ್ವದೇಶಿ ಮೇಳದ ಪ್ರಯೋಜನವನ್ನು ಪಡೆಯಬೇಕಿದೆ ಇಲ್ಲಿ ನಿಮ್ಮ ಮನೆಗಳಿಗೆ ಬೇಕಾದ ಅಗತ್ಯವಾದ ವಸ್ತುಗಳು ಉತ್ಪಾದಕರಿಂದ ನೇರವಾಗಿ ಗ್ರಾಹಕರನ್ನು ತಲುಪಲಿದೆ ಇಲ್ಲಿ ಯಾವ ಮಧ್ಯವರ್ತಿಗಳಿಗೆ ಅವಕಾಶ ಇಲ್ಲ, ಸುಮಾರು 5 ದಿನಗಳ ಕಾಲ ನಡೆಯುವ ಈ ಮೇಳದ ಪ್ರಯೋಜನವನ್ನು ಪಡೆಯುವಂತೆ ಕರೆ ನೀಡಿದರು. ಸ್ವದೇಶಿ ಮೇಳದ ಸಂಯೋಜಕರಾದ ಕೆ.ಎಸ್.ನವೀನ್ ಮಾತನಾಡಿ, ದೇಸಿ ಸಂಸ್ಕೃತಿ, ದೇಸಿ ಆಟ, ಆಹಾರ, ಕ್ರೀಡೆ, ಸಾವಯವ ಕೃಷಿ, ಆಯುರ್ವೇದ ಚಿಕಿತ್ಸೆ, ದೇಸಿ ಉತ್ಪನ್ನಗಳ ಮಾರಾಟ ಹಾಗೂ ಪ್ರದರ್ಶನಗಳ ನ್ನೊಳಗೊಂಡ ಸ್ವಾವಲಂಬನೆಯ ಪರಿಕಲ್ಪನೆ ಸ್ವದೇಶಿ ಮೇಳವಾಗಿದೆ. ಮೇಳದಲ್ಲಿ ದೇಶದ ವಿವಿಧೆಡೆಯಿಂದ ಸ್ವದೇಶಿ ಉತ್ಪನ್ನಗಳನ್ನು ತಯಾರಿಸುವ ಕರಕುಶಲಕರ್ಮಿಗಳು ಭಾಗವಹಿಸಲಿದ್ದಾರೆ. ಇದರಲ್ಲಿ ಸ್ಥಳೀಯರಿಗೆ ತರಬೇತಿ, ಪ್ರಾತ್ಯಕ್ಷಿಕೆ ನಡೆಸಿಕೊಡಲಿದ್ದಾರೆ. ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ದೇಸಿ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ. ಸ್ವದೇಶಿ ವಸ್ತುಗಳ ಉತ್ಪಾದನೆ, ಬಳಕೆ ಮಾಡುವುದರ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ಮೇಳದ ಉದ್ದೇಶವಾಗಿದೆ ಈ ಮೇಳ ಪೂರ್ಣ ಪ್ರಮಾಣದಲ್ಲಿ ಪರಿಸರ ಸ್ನೇಹಿಯಾಗಿದ್ದು, ಈ ಮೇಳದಲ್ಲಿ ಮಾರಾಟಗಾರರನ್ನು ಗ್ರಾಹಕರಿಗೆ ಪರಿಚಯಿಸುವ ಕಾರ್ಯವನ್ನು ಮಾಡಲಾಗುವುದು ಮೇಳದಲ್ಲಿ ಆಗುವ ವ್ಯಾಪಾರಕ್ಕಿಂತ ಮೇಳದ ನಂತರ ಹೆಚ್ಚಿನ ಪ್ರಮಾಣದಲ್ಲಿ ವಹಿವಾಟು ನಡೆಯುತ್ತಿದೆ ಎಂದು ತಿಳಿಸಿದರು.
ಮೇಳದ ಸಂಚಾಲಕರಾದ ಸೌಭಾಗ್ಯ ಬಸವರಾಜನ್ ಮಾತನಾಡಿ, ಇದರಲ್ಲಿ ಸ್ಥಳೀಯರಿಗೆ ತರಬೇತಿ, ಪ್ರಾತ್ಯಕ್ಷಿಕೆ ನಡೆಸಿಕೊಡಲಿದ್ದಾರೆ. ಅದಕ್ಕಾಗಿ ಕ್ರೀಡಾಂಗಣದಲ್ಲಿ 200ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯ ಮಕ್ಕಳು, ಮಹಿಳೆಯರು, ವಿದ್ಯಾರ್ಥಿಗಳು, ಯುವಜನರು, ರೈತರು, ಯುವ ಉದ್ಯಮಿಗಳಿಗೆ ವಿವಿಧ ರೀತಿಯ ಚಟುವಟಿಕೆ ಆಯೋಜಿಸಲಾಗಿದೆ. ಪ್ರತಿದಿನ ಸಂಜೆ ರಾಷ್ಟ್ರ, ರಾಜ್ಯ ಮಟ್ಟದ ಹಾಗೂ ಸ್ಥಳೀಯ ಕಲಾವಿದರಿಂದ ಸಂಗೀತ, ನಾಟಕ, ಯಕ್ಷಗಾನ, ತೊಗಲು ಗೊಂಬೆಯಾಟ ನಡೆಯಲಿದೆ. ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುವವರಿಗೆ ಆಯುರ್ವೇದ, ಪ್ರಕೃತಿ ಚಿಕಿತ್ಸೆಯ ಮಾಹಿತಿಯನ್ನೂ ನೀಡಲಾಗುತ್ತಿದೆ ಸ್ವದೇಶಿ ಮೇಳದ ಮೂಲಕ ಐತಿಹಾಸಿಕ ಚಿತ್ರದುರ್ಗದ ಗತ ವೈಭವವನ್ನು ಹೆಚ್ಚಿಸಲಾಗುತ್ತಿದೆ ಸ್ವದೇಶಿ ವಸ್ತುಗಳ ಉತ್ಪಾದನೆ, ಬಳಕೆ ಮಾಡುವುದರ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ಮೇಳದ ಉದ್ದೇಶವಾಗಿದೆ ಎಂದು ತಿಳಿಸಿದರು.
ಗೋಷ್ಟಿಯಲ್ಲಿ ಸ್ವದೇಶಿ ಮೇಳದ ಸಂಘಟಕರಾದ ಜಗದೀಶ್, ಸಂಘಟಕರಾದ ರವೀಂದ್ರ, ಸಹ ಸಂಚಾಲಕರಾದ ಸಂಪತ್ ಕುಮಾರ್ ಸಹ ಸಂಘಟಕರಾದ ಅನಿತ್ ಕುಮಾರ್, ವೆಂಕಟೇಶ್ ಯಾದವ್, ಯಶವಂತ, ನಾಗರಾಜ್ ಸಗಂ, ರಾಜೀವ ಲೋಚನಾ, ಸೂರ್ಯಪ್ರಕಾಶ್, ಎಸ್.ವಿರೇಶ್, ವಿಎಚ್ಪಿ ರುದ್ರೇಶ್, ರೀನಾ ವೀರಭದ್ರಪ್ಪ, ಬಸಮ್ಮ. ಗಾಯತ್ರಿ ಶಿವರಾಂ, ರವಿಶಂಕರ್, ಶಶಿಕಲಾ, ಇಂದಿರಾ ಶೈಲಜಾ ರೆಡ್ಡಿ, ಸೇರಿದಂತೆ ಇತರರು ಭಾಗವಹಿಸಿದ್ದರು.
Views: 49